ವಿಜಯಪುರ (ದೇವನಹಳ್ಳಿ): ವಿಜಯಪುರ ಪುರಸಭೆ 2026-27ನೇ ಸಾಲಿನ ಬಜೆಟ್ ಮಂಡನೆ ಸಭೆಯನ್ನು ಎರಡು ಬಾರಿ ಮುಂದೂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಮಾರ್ಚ್ನಲ್ಲಿ ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಪುರಸಭೆ ಅಧ್ಯಕ್ಷೆ ಎಸ್.ಭವ್ಯಾ ಮಹೇಶ್ ನೇತೃತ್ವದಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಪುರಸಭೆ ಸದಸ್ಯರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅಜೆಂಡಾ ಪುಸ್ತಕ ತಯಾರಿಸಲಾಗಿತ್ತು.

ಬಜೆಟ್ ಮಂಡನೆಗೆ ದಿನಾಂಕ ನಿಗದಿಪಡಿಸುವಷ್ಟರಲ್ಲಿ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಬೆಂಬಲಿಸಿದ ಏಳು ಮಂದಿ ಜೆಡಿಎಸ್ ಸದಸ್ಯರು ಅನರ್ಹಗೊಂಡಿದ್ದು ಒಂದು ಕಾರಣವಾಗಿದೆ. ಇದರೊಂದಿಗೆ, ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಮತ್ತೊಂದು ಕಾರಣ ಎನ್ನಲಾಗಿದೆ.

ಅನರ್ಹಗೊಂಡ ಏಳು ಮಂದಿ ಜೆಡಿಎಸ್ ಸದಸ್ಯರು ತಮ್ಮ ಸದಸ್ಯತ್ವ ಉಳಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪ್ರಕರಣ ನ್ಯಾಯಾಲಯದ ಹಂತದಲ್ಲಿರುವುದರಿಂದ ಬಜೆಟ್ ಮಂಡಿಸಲೇಬೇಕಾದ ಅನಿವಾರ್ಯತೆ ಪುರಸಭೆ ಅಧ್ಯಕ್ಷರಿಗೆ ಎದುರಾಗಿದೆ.

ಏಳು ಮಂದಿ ಅನರ್ಹ ಸದಸ್ಯರನ್ನು ಹೊರತುಪಡಿಸಿ ಉಳಿದ 16 ಸದಸ್ಯರಿಗೆ ಎರಡು ಬಾರಿ ಬಜೆಟ್ ಮಂಡನೆಗೆ ದಿನಾಂಕ ನಿಗದಿಪಡಿಸಿ ಮುಂದೂಡಲಾಗಿದೆ. ಏಪ್ರಿಲ್ 6 ಮತ್ತು 16ರಂದು ನಿಗದಿಯಾಗಿದ್ದ ಸಭೆಯನ್ನು ಮುಂದೂಡಿರುವ ಅಧ್ಯಕ್ಷರು, ಸದಸ್ಯರಿಗೆ ಸೂಚನಾ ಪತ್ರ ಹಾಗೂ ಅಜೆಂಡಾ ಪುಸ್ತಕ ಕಳುಹಿಸಿಕೊಟ್ಟಿದ್ದಾರೆ. ಮುಂದಿನ ದಿನಾಂಕ ಪ್ರಕಟಿಸುವುದಾಗಿ ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಆರರಿಂದ ಒಂಬತ್ತು ಮಂದಿ ಸದಸ್ಯರು ಹಾಜರಿದ್ದರೆ ಕೋರಂ ಪೂರ್ತಿಯಾಗಲಿದೆ. ಒಬ್ಬ ಪಕ್ಷೇತರ ಸದಸ್ಯ ಸೇರಿದಂತೆ ಕಾಂಗ್ರೆಸ್ ಒಂಬತ್ತು ಮಂದಿ ಸದಸ್ಯರಿದ್ದರೂ ಪಕ್ಷದೊಳಗಿನ ಗುಂಪುಗಾರಿಕೆಯೇ ಬಜೆಟ್ ಮಂಡನೆಗೆ ಅಡ್ಡಿಯಾಗಿದೆ. ಇದು ವಿರೋಧ ಪಕ್ಷದ ಸದಸ್ಯರಿಗೆ ಆಹಾರವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-15-1118413125

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.