ವಿಜಯಪುರ: ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಾಧಾರಣ ಮಳೆಯಾಗಿದೆ. ದಿನವಿಡೀ ಮೋಡ ಮುಸುಕಿದ ವಾತಾವರಣ ಇದ್ದ ಕಾರಣ ಬಯಲುಸೀಮೆ ಚಿತ್ರಣ ಮಲೆನಾಡಿನಂತಾಗಿತ್ತು. ಸುಡು ಬಿಸಿಲು ಮಾಯವಾಗಿ, ತಂಪಾದ ಹಿತಕರ ವಾತಾವರಣ ನಿರ್ಮಾಣವಾಗಿತ್ತು. ಮುಂಗಾರು ಆಗಮನವು ಜಿಲ್ಲೆ ರೈತ ಸಮುದಾಯದ ಖುಷಿಗೆ ಕಾರಣವಾಯಿತು.

ವಿಜಯಪುರ ನಗರದಲ್ಲಿ ಬುಧವಾರ ಮಧ್ಯಾಹ್ನ ಅರ್ಧ ತಾಸು ಮಳೆಯಾಯಿತು. ಬಳಿಕ ಸಂಜೆ ವರೆಗೂ ತುಂತುರು ಮಳೆಯಾಯಿತು. ತಾಳಿಕೋಟೆ ತಾಲ್ಲೂಕಿನ ಕಲಕೇರಿ, ಬಿಂಜಲಭಾವಿ ಸುತ್ತಮುತ್ತ ಸಂಜೆ ಉತ್ತಮ ಮಳೆಯಾಗಿಯಿತು.

ಮುಂಗಾರು ಆಗಮನದಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಹೊಲವನ್ನು ಸ್ವಚ್ಛಗೊಳಿಸಿ, ಉತ್ತಿ, ಬಿತ್ತುವ ಕಾರ್ಯಕ್ಕೆ ಸಜ್ಜುಗೊಳಿಸತೊಡಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-26-1660061715

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.