ವಿಜಯಪುರ: ‘ಮೀಸಲಾತಿಯಿಂದ ರಾಜಕೀಯಕ್ಕೆ ಅಡ್ಡಿ ಬರುತ್ತಾರೆ, ಇವರು ಶಾಸಕರು, ಮಂತ್ರಿಗಳಾಗುತ್ತಾರೆ ಎಂಬ ಭಯದಿಂದ ಬಂಜಾರ, ಭೋವಿ ಸೇರಿದಂತೆ ಮೊದಲಾದ ಸಮಾಜಗಳನ್ನು ಮೀಸಲಾತಿಯಿಂದ ಹೊರಗಿಡುವ ಷಡ್ಯಂತ್ರ ನಡೆಯುತ್ತಿದೆ’ ಎಂದು ಸರ್ದಾರ್ ಸೇವಾಲಾಲ್ ಸ್ವಾಮೀಜಿ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಅಸ್ಪೃಶ್ಯರು, ನಮ್ಮನ್ನು ಮುಟ್ಟಿಸಿಕೊಳ್ಳುವುದಿಲ್ಲ, ಹೊರಗಿಡುತ್ತಾರೆ ಎನ್ನವ ಮಾತನ್ನು ಕೆಲವರು ಹೇಳುತ್ತಾರೆ ಆದರೆ ಕೇಂದ್ರದಲ್ಲಿ ನಾರಾಯಣಸ್ವಾಮಿ, ರಾಜ್ಯದಲ್ಲಿ ಎಚ್. ಆಂಜನೇಯ, ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಅವರು ಹೇಗೆ ಸಚಿವರಾದರು’ ಎಂದು ಪ್ರಶ್ನಿಸಿದರು.

‘ಒಳ ಮೀಸಲಾತಿ ಅವೈಜ್ಞಾನಿಕವಾಗಿ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ಸರ್ಕಾರದ ಗಮನ ಸೆಳೆಯಲು ಮಾ.24ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಅಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಒಳಮೀಸಲಾತಿ ಜಾರಿಯಿಂದ ಅನ್ಯಾಯಕ್ಕೊಳಗಾಗುವ ಸಮುದಾಯಗಳ ಲಕ್ಷಾಂತರ ಜನ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಹಕ್ಕೊತ್ತಾಯ ಮಂಡಿಸಲಿದ್ದೇವೆ’ ಎಂದರು.

ಮುಖಂಡ ಆದರ್ಶ ಯಲ್ಲಪ್ಪ ಮಾತನಾಡಿ, ‘ಭೋವಿ, ಲಂಬಾಣಿ, ಕೊರಮ,ಕೊರಚ, ಸುಡಗಾಡು ಸಿದ್ದ ಸೇರಿದಂತೆ ಹಲವು ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯಗಳಿಗೆ ಈವರೆಗೂ ಮೀಸಲಾತಿ ಸಮರ್ಪಕವಾಗಿ ತಲುಪೇ ಇಲ್ಲ, ಹೀಗಾಗಿ ಒಳಮೀಸಲಾತಿ ವಿಚಾರ ಮರುಪರಿಶೀಲನೆ ಮಾಡಿ ತಜ್ಞರ ಸಮಿತಿ ರಚಿಸಿ ನಮ್ಮ ಅಹವಾಲುಗಳನ್ನು ಸರ್ಕಾರದ ಮುಂದೆ ಇಡಲು ಅವಕಾಶ ಕಲ್ಪಸಿ ನಂತರ ಪರಿಶೀಲನೆ ಮಾಡಿ ಸಿ ಗುಂಪಿನಲ್ಲಿರುವ ಸಮುದಾಯಗಳನ್ನು ಎ ಗುಂಪಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ರಾಮೇಶ್ವರ ಸ್ವಾಮಿಜಿ, ಗೋಪಾಲ ಮಹಾರಾಜ, ವಕೀಲ ಅನಂತ ನಾಯಕ, ಮಹೇಂದ್ರ ನಾಯಕ, ಪ್ರಕಾಶ ಚವ್ಹಾಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-26-1939791657

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.