ವಿಜಯಪುರ: ಶ್ರೀ ಸದ್ಗುರು ಸಮರ್ಥರಂಗರಾವ್ ಮಹಾರಾಜರ ಧ್ಯಾನಮಂದಿರದ ಲೋಕಾರ್ಪಣೆ, ಮಹಾರಾಜರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾರೋಹಣದ ಅಂಗವಾಗಿ ಶುಕ್ರವಾರ ನಗರದ ಮುರಾಣಕೇರಿಯಿಂದ ಧ್ಯಾನಮಂದಿರದ ವರೆಗೆ ಸಕಲ ಮಂಗಳ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

ಮಹಾರಾಜರ ಮೂರ್ತಿಯನ್ನು ಪೂರ್ಣಕುಂಭ ಕಳಸದೊಂದಿಗೆ ಸ್ವಾಗತಿಸಲಾಯಿತು. ವಿವಿಧ ಸ್ವಾಮಿಜಿಗಳು, ವಾರಕರಿ ಬಂಧುಗಳು, ಸಾರ್ವಜನಿಕರು, ವಿಶ್ವಕರ್ಮ ಸಮಾಜದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶಹಾಪುರ ಏಕದಂಡಗಿಮಠದ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ಸ್ನಾನದಿಂದ ದೇಹ, ಧ್ಯಾನದಿಂದ ಮನ ಶುದ್ಧಿಯಾಗುತ್ತದೆ. ಧ್ಯಾನ ಮಾಡಬೇಕು ಎಂದರು.

ಏಕದಂಡಗಿಮಠದ ಸುರೇಂದ್ರ ಸ್ವಾಮೀಜಿ, ಕನ್ನೂರ ಶಾಂತಿಕುಟೀರ ಶ್ರೀ ಕೃಷ್ಣ ಮಹಾರಾಜ, ಕೈವಲ್ಯಕುಟೀರದ ಪ್ರಣವ ಪ್ರಕಾಶ ಮಹಾರಾಜ, ಮುತ್ತುರಾಜ ಕಲಬುರ್ಗಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ, ಈರಣ್ಣ, ಅಶೋಕ, ಆನಂದ, ಶ್ರೀಕಾಂತ ಕುಂದಣಗಾರ, ಉದಯ ಚಟ್ಟರಕಿ, ಮನು ಪತ್ತಾರ, ಶ್ರೀ ಕಟ್ಟಿಮನಿ, ಪ್ರಮೋದ ಬಡಿಗೇರ, ಸಂತೋಷ ವಿಶ್ವಕರ್ಮ, ಸುಧೀಂದ್ರ ಶಿರವಾಳ, ಶಿವಾನಂದ ಪತ್ತಾರ, ವಿಜಯ ಪಾಠಕ, ಮಹೇಶ ಮನ್ವಾಚಾರಿ, ರಾಮಾನಂದ ಮನ್ವಾಚಾರಿ, ಈರಣ್ಣ ಕನಮಡಿ, ಸಚಿನ ಗಿರಗಾಂವಕರ, ಬಸವರಾಜ ತೊನಶ್ಯಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-26-560140262

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.