ಇಂಡಿ: ಅನ್ನ ನೀಡುವ ರೈತ ಮತ್ತು ದೇಶ ಕಾಯುವ ಸೈನಿಕ ತಾಯಿಗೆ ಶ್ರೇಷ್ಠ ಮಕ್ಕಳು ಎಂದು ಸಂಗಮೇಶ್ವರ ಶ್ರೀಗಳು ಹೇಳಿದರು.

ತಾಲ್ಲೂಕಿನ ಸಾಲೋಟಗಿ ಗ್ರಾಮದ ಗಡ್ಡೆಪ್ಪ ರಾವುತಪ್ಪ ಕಾಳಿ ಮತ್ತು ಶ್ರೀಶೈಲ ಗಂಗಪ್ಪ ನಾಟಿಕಾರ ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮ ಸಾಲೋಟಗಿಗೆ ಆಗಮಿಸಿ ಅವರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ರೈತ ದೇಶಕ್ಕೆ ಅನ್ನ ನೀಡುವ ಕೆಲಸ ಮಾಡುತ್ತಿದ್ದರೆ ಸೈನಿಕ ನಮ್ಮ ವೈರಿಗಳಿಂದ ರಕ್ಷಿಸಲು ದೇಶದ ಗಡಿಯಲ್ಲಿ ತನ್ನ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಾನೆ. ಅದಕ್ಕಾಗಿ ಇಂದು ರೈತರಿಗೆ ಮತ್ತು ಸೈನಿಕರಿಗೆ ಸಮಾಜದಲ್ಲಿ ಗೌರವವಿದೆ ಎಂದರು.

ಅರಣ್ಯ ಅಧಿಕಾರಿ ಧನರಾಜ ಮುಜಗೊಂಡ ಮಾತನಾಡಿ, ಸೈನಿಕರು ಮಳೆ, ಛಳಿ, ಬಿಸಿಲು ಎನ್ನದೇ ತಮ್ಮ ಪ್ರಾಣತ್ಯಾಗಕ್ಕೂ ಸಿದ್ದರಾಗುವ ಸೈನಿಕರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಸಾಹಿತಿ ಗೀತಯೋಗಿ, ದಾಕ್ಷಾಯಿಣಿ ತಡಲಗಿ, ಬಸವರಾಜ ಗೊರನಾಳ ಮಾತನಾಡಿದರು. ಶಂಕರಾನಂದ ಸ್ವಾಮೀಜಿ, ಜೀತಪ್ಪ ಕಲ್ಯಾಣಿ, ಅರ್ಜುನ ನೇದಲಗಿ, ಗಡ್ಡೆಪ್ಪ ಯಳಸಂಗಿ, ಈರಯ್ಯ ಮಂಗಳೂರ,ಅಶೋಕ ಈಶ್ವರಗೊಂಡ, ಅನೀಲ ಪರೇಶನವರ, ಬಸವರಾಜ ಕಲ್ಯಾಣಿ, ಸೋಮನಾಥ ಹರನಾಳ, ಶರಣಯ್ಯ ಮಠಪತಿ, ಶಿವಯೋಗಪ್ಪ ತಡಲಗಿ, ರಾಮಪ್ಪ, ದತ್ತಾತ್ರೇಯ ಆಳೂರ, ಸುನೀಲ ರಾಠೋಡ ಇದ್ದರು.

ನಿವೃತ್ತ ಸೈನಿಕರಾದ ಗಡ್ಡೆಪ್ಪ ರಾವುತಪ್ಪ ಕಾಳಿ ಮತ್ತು ಶ್ರೀಶೈಲ ಗಂಗಪ್ಪ ನಾಟಿಕಾರ ಅವರನ್ನು ನಗರದಲ್ಲಿ ಮೆರವಣೆಗೆ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-26-2136209222

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.