ವಿಜಯಪುರ: ಸರಾಫ್ ಬಜಾರ್ನಲ್ಲಿ ರಸ್ತೆ ಕಾಮಗಾರಿ ವಿಳಂಬದಿಂದಾಗಿ ಸಾರ್ವಜನಿಕರಿಗೆ ಸಂಚಾರದಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು ಕೂಡಲೇ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ನಗರ ಮಂಡಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ನಗರ ಮಂಡಳ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಸರಾಫ್ ಬಜಾರ್ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ, ಹೃದಯಭಾಗವಾಗಿರುವ ಸರಾಫ್ ಬಜಾರ್ ಅನೇಕ ಮಾರ್ಗಗಳಿಗೆ ಸಂಪರ್ಕ ಸೇತುವೆಯಾಗಿದೆ. ದಿನನಿತ್ಯ ಸಾವಿರಾರು ವಾಹನಗಳ ಸಂಚಾರ ನಿತ್ಯ ಇದ್ದೆ ಇರುತ್ತದೆ. ಆದರೆ, ರಸ್ತೆ ಕಾಮಗಾರಿಯಿಂದ ವಾಹನ ಸಂಚಾರವಂತೂ ಹೈರಾಣವಾಗಿದೆ ಎಂದು ಆರೋಪಿಸಿದರು.

ಸರಾಫ್ ಬಜಾರ್ ಮಾರ್ಗಕ್ಕೆ ಪರ್ಯಾಯ ಮಾರ್ಗವಾಗಿ ಮಿಲನ್ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಮಿಲನ್ ಹೋಟೆಲ್ನಿಂದ ಜಿಣಗಾರ ಗಲ್ಲಿ ಹನುಮಾನ್ ಮಂದಿರದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಇದೆ. ಇದರಿಂದ ಆ ರಸ್ತೆಯಲ್ಲಿ ವಾಹನ ದಟ್ಟಣೆ ಎದುರಾಗುತ್ತಿದೆ ಎಂದರು.

ಗಾಂಧಿ ವೃತ್ತದಿಂದ ಸಿದ್ಧೇಶ್ವರ ದೇವಸ್ಥಾನದ ಮಾರ್ಗವಾಗಿ ಬಿ.ಎಲ್.ಡಿ.ಇ ಆಸ್ಪತ್ರೆಗೆ ಹೋಗುವ ಏಕಮುಖ ಸಂಚಾರ ರಸ್ತೆಯ ಪಕ್ಕದಲ್ಲಿನ ಕಾರುಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಆ ರಸ್ತೆಯನ್ನು ಏಕಮುಖ ಸಂಚಾರದ ಬದಲಾಗಿ ದ್ವಿಮುಖ ಸಂಚಾರ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಭೀಮಾಶಂಕರ ಹದನೂರ, ವಿಜಯ ಜೋಶಿ, ಚಿನ್ನು ಚಿನಗುಂಡಿ, ವಿನಾಯಕ ದಹಿಂಡಿ, ರಾಜೇಶ ತಾವಸೆ, ರಾಜೇಂದ್ರ ವಾಲಿ, ಶ್ರೀಕಾಂತ ಶಿಂಧೆ, ಗಣೇಶ ಉಪ್ಪಾರ, ವಿಕಾಸ ಪದಕಿ, ಆನಂದ ಮುಚ್ಚಂಡಿ, ಭರತ್ ಕೋಳಿ, ಭರತ್ ಕುಲಕರ್ಣಿ, ವಿವೇಕ ತಾವರಗೇರಿ, ಸಂಪತ್ ಕೋವಳ್ಳಿ, ಬಸವರಾಜ ಹಳ್ಳಿ, ಸಂತೋಷ ಪತ್ತಾರ, ಅನಿಲ್ ಉಪ್ಪಾರ, ಸಿದ್ದು ಮಲ್ಲಿಕಾರ್ಜುನಮಠ, ಸಂಗಮೇಶ ಉಕ್ಕಲಿ, ಗೇಸುದರಾಜ ಇನಾಮದಾರ, ಜಗದೀಶ ಮನಗೂಳಿ, ಮಯೂರ ಮೊರಗಾಂವ್ಕರ್, ಭಾರತಿ ಬುಯಾರ್, ಬಸಮ್ಮ ಗುಜ್ಜರ್, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-26-716049779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.