ಸಿಂದಗಿ: ತಾಲ್ಲೂಕಿನ ಬಂದಾಳ ಗ್ರಾಮದಲ್ಲಿ ವಿವಾಹ ರದ್ದಾಗುವ ಭೀತಿಯಿಂದ ಯುವತಿ ಜಯಶ್ರೀ ಭಗವಂತ್ರಾಯ ಬಿರಾದಾರ ಮಾಗಣಗೇರಿ (22) ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.

ಯುವತಿಯ ವಿವಾಹ ನಿಶ್ಚಿತಾರ್ಥ ಮಾರ್ಚ್ನಲ್ಲಿ ನಡೆದು, ಏಪ್ರಿಲ್ 27ರಂದು ವಿವಾಹ ನಿಶ್ಚಯವಾಗಿತ್ತು. ಆದರೆ ಯುವತಿಯನ್ನು ಪ್ರೀತಿಸುತ್ತಿದ ಅದೇ ಗ್ರಾಮದ ಯುವಕ ಶ್ರೀಶೈಲ ಚಂದ್ರಕಾಂತ ಬಡಾನೂರ ಎಂಬುವವನು ನಿಶ್ಚಿತಾರ್ಥ ಮಾಡಿಕೊಂಡ ಸಂಬಂಧಿಕರಿಗೆ ಯುವತಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಅವಳ ಜೊತೆಗೆ ವಿಜಯಪುರದಲ್ಲಿ ಸುತ್ತಾಡಿ ತೆಗೆಯಿಸಿಕೊಂಡ ಫೋಟೊಗಳನ್ನು ತೋರಿಸಿದ್ದಾನೆ.

ಅವಳೊಂದಿಗಿನ ವಿಡಿಯೊಗಳಿವೆ. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ. ವಿವಾಹ ರದ್ದು ಮಾಡುವಂತೆ ಬೆದರಿಕೆ ಹಾಕಿದ್ದಾನೆ.

‘ಶ್ರೀಶೈಲ ಚಂದ್ರಕಾಂತ ಬಡಾನೂರ ಅವನಿಂದಾಗಿ ನನ್ನ ಮಗಳುಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ಅವನೇ ಕಾರಣ’ ಎಂದು ಆರೋಪಿಸಿ ಮೃತ ಯುವತಿಯ ತಾಯಿ ಸಾವಿತ್ರಿ ಬಿರಾದಾರ, ಮಾಗಣಗೇರಿ ಅವರು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-26-1033903763

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.