ದೇವರಹಿಪ್ಪರಗಿ: ‘ನಮ್ಮ ಸರ್ಕಾರ ನುಡಿದಂತೆ ನಡೆಯುವುದರ ಜೊತೆಗೆ ಅಭಿವೃದ್ಧಿಗೆ ಬದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಎಂ.ಬಿ.ಪಾಟೀಲ ಹೇಳಿದರು.

ಪಟ್ಟಣದಲ್ಲಿ ಶನಿವಾರ ಪಟ್ಟಣ ಪಂಚಾಯಿತಿ ಹಾಗೂ ನೂತನವಾಗಿ ನಿರ್ಮಾಣಗೊಂಡ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಾದ ಸಿಬ್ಬಂದಿ ಹಾಗೂ ಡಯಾಲಿಸಿಸ್ ಕೇಂದ್ರದ ಆರಂಭಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ₹ 8.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಉತ್ತಮವಾಗಿದೆ . ಜೊತೆಗೆ ₹ 3 ಕೋಟಿ ವೆಚ್ಚದಲ್ಲಿ ಕಟ್ಟಲ್ಪಟ್ಟ ಪಟ್ಟಣ ಪಂಚಾಯಿತಿ ಸಹ ಗುಣಮಟ್ಟದಿಂದ ಕೂಡಿದೆ. ಹಿಂದೆ ತಾವು ನೀರಾವರಿ ಸಚಿವರಾಗಿದ್ದ ಸಮಯದಲ್ಲಿ ಕುಡಿಯುವ ನೀರು, ಕಾಲುವೆ ನಿರ್ಮಾಣ, ಕೆರೆ ತುಂಬುವುದು, ನಿರಂತರ 178 ಹಳ್ಳಗಳ ತುಂಬುವಿಕೆ ಅಂತಹ ನೀರಾವರಿಗಾಗಿ ಕೈಗೊಂಡ ಕಾರ್ಯಗಳ ಕುರಿತು ಮಾತನಾಡಿದರು.

ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಶಾಸಕ ಶರಣಪ್ಪ ಸುಣಗಾರ, ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗರ್, ಡಿಎಚ್ಒ ಡಾ.ಸಂಪತ್ಕುಮಾರ ಗುಣಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಯುಷ್ಮಾನ್ ಆರೋಗ್ಯ ಹಾಗೂ ಆಶಾಕಿರಣ ಯೋಜನೆಯಡಿ ಸಾಂಕೇತಿಕವಾಗಿ ಐವರು ಮಹಿಳೆಯರಿಗೆ ಕನ್ನಡಕ ವಿತರಿಸ ಲಾಯಿತು. ಪಡಗಾನೂರ ಕ್ರಾಸ್ನ ಯುವಕರು ಬೈಕ್ ರ್ಯಾಲಿ ಮೂಲಕ ಸಚಿವರನ್ನು ಸ್ವಾಗತಿಸಿ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಿ ನಂತರ ಅಂಬೇಡ್ಕರ್ ವೃತ್ತದಲ್ಲಿ ಜೆಸಿಬಿ ಯಂತ್ರಗಳ ಮೂಲಕ ಹೂಮಳೆಗೆರೆದೆದ್ದು ವಿಶೇಷವಾಗಿತ್ತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಬಿನಾಳ, ತಹಶೀಲ್ದಾರ ನಿಂಗಪ್ಪ ಬಿರಾದಾರ, ತಾ.ಪಂಅಧಿಕಾರಿ ಭಾರತಿ ಚೆಲುವಯ್ಯ, ಮುಖ್ಯಾಧಿಕಾರಿ ಅಪ್ರೋಜ್ ಅಹ್ಮದ್ ಪಟೇಲ, ಸಿಎಎಚ್ಸಿ ಮುಖ್ಯ ವೈದ್ಯಾಧಿಕಾರಿ ರಾಮಕೃಷ್ಣ ಇಂಗಳೆ, ಟಿಎಚ್ಓ ಎ.ಎ.ಮಾಗಿ, ಡಾ.ಪ್ರಭುಗೌಡ ಬಿ.ಎಲ್, ಸುಭಾಸ್ ಛಾಯಾಗೋಳ, ಆನಂದಗೌಡ ದೊಡ್ಡಮನಿ, ಗೌರಮ್ಮ ಮುತ್ತತ್ತಿ, ಬಿ.ಎಸ್.ಪಾಟೀಲ(ಯಾಳಗಿ), ಬಶೀರ್ ಅಹ್ಮದ್ ಬೇಪಾರಿ, ಬಿ.ಎಸ್.ಪಾಟೀಲ(ಸಾತಿಹಾಳ) ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-26-1651491957

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.