ವಿಜಯಪುರ: ‘ಸೈಕ್ಲಿಸ್ಟ್ಗಳ ತವರು’ ವಿಜಯಪುರದಲ್ಲಿ ಪ್ರಥಮ ಬಾರಿಗೆ ಆಯೋಜನೆಯಾಗಿರುವ ‘ಯೋನೆಕ್ಸ್-ಸನ್ರೈಸ್’ ಕರ್ನಾಟಕ ರಾಜ್ಯ ಮಟ್ಟದ ಸಬ್ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಅಂತಿಮ ಹಣಾಹಣಿಗೆ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣ ಸಜ್ಜಾಗಿದೆ.

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ಅವರ ವಿಶೇಷ ಆಸಕ್ತಿಯಿಂದ ವಿಜಯಪುರಕ್ಕೆ ಪ್ರಥಮ ಬಾರಿ ಬ್ಯಾಡ್ಮಿಂಟನ್ ಪಂದ್ಯದ ಆತಿಥ್ಯ ವಹಿಸುವ ಅವಕಾಶ ಒಲಿದು ಬಂದಿದ್ದಕ್ಕೆ ಜಿಲ್ಲೆಯ ಕ್ರೀಡಾಭಿಮಾನಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ವಿವಿಧ ಶ್ರೇಯಾಂಕಿತ ಆಟಗಾರರಾದ ಮಹಿತಾ ನಾಯ್ಡು ಸೂರಿಸೆಟ್ಟಿ (1), ಅದಿತಿ ಸುಶಾಂತ್ (3), ಚೇತಸ್ ಮುಂಡರಗಿ ಮತ್ತು ವಿಶಾಲ್ ಡಿ. ಆನಂದ್ ಜೋಡಿ (2), ಅಮೋಘ್ ಗೌಡ ಮತ್ತು ಗೌರವ್ ಎಸ್. ಜೋಡಿ (7), ಯಶವರ್ಧನ್ (13), ಗೌತಮ್ ಎಸ್. ನಾಯರ್ (2), ಆದ್ಯಾ ಶೆಟ್ಟಿ ಮತ್ತು ಜನ್ಯಶ್ರೀ ಬಿ. ಜೋಡಿ (4), ಜೀವಿಕಾ ಸಾಯಿ ರಾಜೇಶ್ಕುಮಾರ್ ಮತ್ತು ಮಾಣಿಕ ನವೀನ್ ಜೋಡಿ (7), ಚಿರಾಗ್ ಪ್ರಕಾಶ್ ಮತ್ತು ತನ್ವಿ ಮುನೋತ್ (7) ಜೋಡಿ, ಮೆಹುಲ್ ಮಾನವ್ ಅರುಲ್ಮುರುಗನ್ ಮತ್ತು ಸಾತ್ವಿಕ್ ಎಸ್ ಪ್ರಭು (7) ಜೋಡಿ, ಮೆಹುಲ್ ಮಾನವ್ ಅರುಲ್ಮುರುಗನ್ (1), ಪಿಯೂಷ್ ತ್ರಿಪಾಠಿ (3) ಮತ್ತು ಕೀರ್ತಿ ಬಾಲಾಜಿ (1) ಅವರು ಸೇರಿದಂತೆ ಇನ್ನಿತರ ಪ್ರಮುಖ ಆಟಗಾರರು ಶನಿವಾರದ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಲು ಅಖಾಡ ಸಜ್ಜಾಗಿದೆ.

ವಿಜಯಪುರದ ಕ್ರೀಡಾ ಪ್ರೇಮಿಗಳು ಬ್ಯಾಡ್ಮಿಂಟನ್ ಪಂದ್ಯದ ಅಂತಿಮ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಯಾರ ಮುಡಿಗೆ ‘ವಿಜಯಪುರ ಕಿರೀಟ’ ಒಲಿಯಲಿದೆ ಎಂಬ ಕುತೂಹಲ ಮೂಡಿದೆ.

ಒಟ್ಟು ಏಳು ದಿನಗಳ ಕಾಲ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ 756ಕ್ಕೂ ಅಧಿಕ ಬ್ಯಾಡ್ಮಿಂಟನ್ ಪಟುಗಳಿಗೆ ಆತಿಥ್ಯ ನೀಡಿದ್ದ ವಿಜಯಪುರದ ಕ್ರೀಡಾ ಇತಿಹಾಸದಲ್ಲಿ ಈ ಪಂದ್ಯಾವಳಿ ಸ್ಮರಣೀಯವಾಗಿ ಉಳಿಯಲಿದೆ. ಅಲ್ಲದೇ, ಜಿಲ್ಲೆಯ ಸೈಕ್ಲಿಸ್ಟ್ ಪ್ರೇಮಿಗಳಲ್ಲಿ ‘ಬ್ಯಾಡ್ಮಿಂಟನ್ ಪ್ರೀತಿ’ ಮೊಳಕೆ ಒಡೆಯುವಂತೆ ಮಾಡಿದೆ.

ವಿಜಯಪುರದಲ್ಲಿ ಮೊದಲ ಬಾರಿ ಆಯೋಜಿಸಿದ್ದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಯಶಸ್ವಿಯಾಗಿದೆ. ಇಲ್ಲಿ ಬ್ಯಾಡ್ಮಿಂಟನ್ಗೆ ಮಹತ್ತರ ಅವಕಾಶವಿದೆ ಎಂಬುದು ಸಾಬೀತಾಗಿದೆ. ಯುವ ಪ್ರತಿಭೆಗಳಿಗೆ ಇದು ಉತ್ತಮ ವೇದಿಕೆಯಾಗಿತ್ತು

-ಕುಮಾರ್ ಬಂಗಾರಪ್ಪ, ಅಧ್ಯಕ್ಷ, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.