ತಾಳಿಕೋಟೆ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರಾಮಹೋತ್ಸವವು ಶುಕ್ರವಾರ ಸಂಭ್ರಮದಿಂದ ಶುಕ್ರವಾರ ನೆರವೇರಿತು.

ಶುಕ್ರವಾರ ಬೆಳಿಗ್ಗೆ ವೈಭವಯುತವಾಗಿ ಗಾರುಡಿ ಗೊಂಬೆ ಕುಣಿತ, ಮಹಿಳೆಯರ ಡೊಳ್ಳು ಕುಣಿತ, ಜೋಗತಿ ನೃತ್ಯಗಳೊಂದಿಗೆ ಮೆರವಣಿಗೆ ನಡೆಯಿತು.

ಸಂಜೆ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿದ್ದ ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ ಮಾತನಾಡಿ, ‘ಮಕ್ಕಳು ಸಂಸ್ಕಾರಯುತವಾಗಿಬೆಳೆಯಲು ಮೊದಲು ಪಾಲಕರು ಮೊಬೈಲ್ ತೊರೆದು ಶಿಸ್ತಿನ ಜೀವನ ಕ್ರಮ ಪಾಲಿಸಬೇಕು. ಯುವಕರು ದುಶ್ಚಟಗಳನ್ನು ಬಿಡಬೇಕು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಸದ್ವರ್ತನೆ, ಸದ್ಚಿಂತನೆ ಸತ್ಕಾರ್ಯಗಳಿಂದ ಮಾತ್ರ ಧರ್ಮ ಉಳಿಯುತ್ತದೆ’ ಎಂದರು.

ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಲಾಳೇಸಾಬ ಶೇಖ ಮಾತನಾಡಿ, ‘ಗ್ರಾಮವು ಎಲ್ಲರನ್ನು ಸಮಾನವಾಗಿ ಕಾಣುವ ಬಸವತತ್ವ ಅಳವಡಿಸಿಕೊಂಡಿದೆ. ಯುವಕರು ಒಗ್ಗಟ್ಟಿನಿಂದ ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು’ ಎಂದರು.

ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಲಾಳೇಸಾಬ ಶೇಖ್ (ಜಮಾದಾರ) ಹಾಗೂ ಗ್ರಾಮದ ನಿವೃತ್ತ ಸೈನಿಕ ರಾಚಯ್ಯಸ್ವಾಮಿ ಹಿರೇಮಠ, ಬಾಪುಗೌಡ ಪಾಟೀಲ ಹಾಗೂ ಧನಸಿಂಗ ನಾಯಕ ಅವರನ್ನು ಸನ್ಮಾನಿಸಲಾಯಿತು. ಜಗದೀಶ ಬಸಯ್ಯಸ್ವಾಮಿ ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಅಪ್ಪಾಸಾಹೇಬ ಮೂಲಿಮನಿ ನಿರೂಪಿಸಿದರು.

ವೇದಿಕೆಯಲ್ಲಿ ಅಯ್ಯನಗೌಡ ನಾಡಗೌಡ, ಬಸನಗೌಡ ಬಸರಕೋಡ, ಬಸನಗೌಡ ಮೇಟಿ, ಮಲ್ಲನಗೌಡ ಬಿರಾದಾರ, ಅಪ್ಪಾಸಾಹೇಬಗೌಡ ಬಿರಾದಾರ, ಕಾಶಿರಾಯಗೌಡ ಬಿರಾದಾರ, ಶಾಂತಕುಮಾರ ಚಟ್ಟೇರ, ಬಸನಗೌಡ ಮೇಟಿ, ರಾಮನಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಪ್ರಕಾಶ ದೊರಿಗೋಳ ಭಾಗವಹಿಸಿದ್ದರು.

ನಂತರ ಹುನಗುಂದದ ಎ.ಎನ್.ಕಲಾತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-19-640460460

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.