ತಾಳಿಕೋಟೆ: ತಾಲ್ಲೂಕಿನ ಮೂಕಿಹಾಳ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆಯೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಜಾರಿಯಾಗಿ ಹಲವು ವರ್ಷಗಳೇ ಕಳೆದಿದ್ದರೂ ಶುದ್ಧ ಕುಡಿಯುವ ನೀರು ಇನ್ನೂ ಮರೀಚಿಕೆಯಾಗಿದೆ. ನೀರು ಕೆಟ್ಟ ವಾಸನೆಯಿಂದ ಕೂಡಿವೆ. ಇತ್ತೀಚೆಗೆ 15 ದಿನಗಳಿಂದ ನೀರಿನ ಪೂರೈಕೆಯೂ ನಿಂತು ಹೋಗಿದೆ ಎಂದು ಗ್ರಾಮದ ಜಾವೀದ ಪಟೇಲ ಬಿರಾದಾರ, ಬಶೀರಪಟೇಲ ಬಿರಾದಾರ, ಅಮೀನ ಪಟೇಲ ಜಹಗೀರದಾರ, ಮಹಬೂಬ ಪಟೇಲ ಬಿರಾದಾರ, ಜಹಾಂಗೀರ ಮಕಾಸಿ ದೂರಿದರು.

‘ಗ್ರಾಮದಲ್ಲಿ ಬೋರ್ವೆಲ್ ಮೂಲಕ ಎರಡು ದಿನಗಳಿಗೊಮ್ಮೆ ನೀರು ಪೂರೈಸುತ್ತಾರೆ. ಆದರೆ, ಆ ನೀರು ಕುಡಿಯಲಾಗದು. ಅಡುಗೆ ರುಚಿಯಾಗಲ್ಲರಿ, ಬ್ಯಾಳಿ ಸರಿಯಾಗಿ ಕುದಿಯೂದಿಲ್ಲ, ಒಗೆದ ಬಟ್ಟೆ ಸ್ವಚ್ಛವೂ ಆಗುವುದಿಲ್ಲ’ ಎಂದು ಬೋರ್ವೆಲ್ ನಳದ ಬಳಿ ನೀರು ತುಂಬುತ್ತಿದ್ದ ಹಸೀನಾ ಮಕಾಸಿ, ಇತರ ಮಹಿಳೆಯರು ತಿಳಿಸಿದರು.

‘ಬೇಸಿಗೆಯಲ್ಲಿ ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ, ಕುಡಿಯುವ ನೀರು ಬೇಕೆಂದರೆ ತಾಳಿಕೋಟೆ, ಮಿಣಜಗಿ, ಬಾವೂರಗೆ ಕ್ಯಾನ್ ಹಿಡಿದುಕೊಂಡು ಹೋಗಬೇಕಾಗಿದೆ. ನಮ್ಮೂರಲ್ಲಿಯೇ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಅವುಗಳು ದುರಸ್ತಿಯಾಗಿಲ್ಲ’ ಎಂದು ಗ್ರಾಮದ ಬುಡ್ಡಾಸಾಹೇಬ ಭಾವಿಕಟ್ಟಿ ಯಲ್ಲಪ್ಪ ಹೊಕ್ರಾಣಿ, ಮಲ್ಲಪ್ಪ ತಳವಾರ ಮೊದಲಾದವರು ತಿಳಿಸಿದರು.

ಈ ಬಗ್ಗೆ ’ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಪಿಡಿಒ ಶ್ರೀದೇವಿ ಗುಂಡಾಪುರ, ‘ಗ್ರಾಮದಲ್ಲಿ ದಿನಬಳಕೆ ನೀರಿಗೆ ತೊಂದರೆಯಾಗಿಲ್ಲ. ಏನೇ ಸಮಸ್ಯೆಗಳಾದರೂ ತಕ್ಷಣ ಸ್ಪಂದಿಸಿ ದುರಸ್ತಿ ಮಾಡುತ್ತೇವೆ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯು ಗ್ರಾಮೀಣ ನೀರು ಪೂರೈಕೆ(ಆರ್.ಡಬ್ಲ್ಯೂ ಎಸ್) ಅವರಿಗೆ ಸಂಬಂಧಿಸಿದೆ. ಅವರ ಗಮನಕ್ಕೂ ತಂದಿರುವೆ’ ಎಂದರು.

‘ಬಹುಹಳ್ಳಿ ಕುಡಿಯುವ ನೀರಿನ ಪೂರೈಕೆಯ ಶುದ್ಧೀಕರಣ ಘಟಕದಲ್ಲಿರುವ ನೀರಿನ ಟ್ಯಾಂಕ್ ನಲ್ಲಿ ಕೊಳೆ ತುಂಬಿರುವುದರಿಂದ ವಾಸನೆಯುಕ್ತ ನೀರು ಬರುತ್ತಿತ್ತು. ಅದನ್ನು ಸ್ವಚ್ಛಗೊಳಿಸಲಾಗಿದೆ. ಬಹುಹಳ್ಳಿ ನೀರಿನ ಟ್ಯಾಂಕ್ ಗೆ ನೀರು ಸರಬರಾಜು ಮಾಡುವ ಬಪ್ಪರಗಿ ಕೆರೆಯ ಬಳಿ ಹಾಗೂ ಟ್ಯಾಂಕ್ ಬಳಿಯಿದ್ದ ಅಪಾರ ಪ್ರಮಾಣದ ಕೇಬಲ್ ಕತ್ತರಿಸಿಕೊಂಡು ಕಳವು ಮಾಡಲಾಗಿದೆ. ಇದರಿಂದಲೂ ನೀರು ಪೂರೈಕೆಗೆ ಅಡಚಣೆಯಾಗಿತ್ತು. ಹೊಸಕೇಬಲ್ ತರಿಸಿ ಜೋಡಣೆ ಮಾಡಲಾಗಿದ್ದು ನೀರು ಪೂರೈಕೆಗೆ ಅಗತ್ಯ ಕ್ರಮ ವಹಿಸಿದೆ’ ಎಂದು ಆರ್.ಡಬ್ಲ್ಯೂ ಎಸ್ ಸೆಕ್ಷನ್ ಅಧಿಕಾರಿ ಸಿ.ಎನ್. ರಾಠೋಡ ತಿಳಿಸಿದರು.

ಗ್ರಾಮದಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ಬೋರ್ವೆಲ್ ನೀರನ್ನೇ ಬಳಸುತ್ತಿದ್ದು, ಗಡಸು ನೀರಾಗಿದ್ದರಿಂದ ಬೇಗನೇ ಹಾಳಾಗುತ್ತಿವೆ
ಶ್ರೀದೇವಿ ಗುಂಡಾಪುರ, ಗ್ರಾಮ ಪಂಚಾಯಿತಿ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.