ವಿಜಯಪುರ: ತೊರವಿ ಲಕ್ಷ್ಮಿ ನರಸಿಂಹ ಸನ್ನಿಧಾನದಲ್ಲಿ ಪರಾಭವ ನಾಮ ಸಂವತ್ಸರ ವೈಶಾಖ ಶುದ್ಧ ಅಷ್ಟಮಿ ಅಂಗವಾಗಿ ಏಪ್ರಿಲ್ 24ರಿಂದ ಮೇ 2ರ ವರೆಗೆ ಉತ್ಸವ ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ತಿಳಿಸಿದೆ.

ಮದುತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಪರಮಾನುಗ್ರಹದಿಂದ ಜ್ಞಾನಸತ್ರ, ಸರ್ವಮೂಲ ಗ್ರಂಥ ಪಾರಾಯಣ, ಪ್ರವಚನ ಹಾಗೂ ದಾಸವಾಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವಕ್ಕೂ ಮುನ್ನ ಏಪ್ರಿಲ್ 22ರಂದು ಮನ್ಯು ಸೂಕ್ತ ಹೋಮ, ಏಪ್ರಿಲ್ 24ರಂದು ಪವಮಾನ ಹೋಮ ಮತ್ತು ಸರ್ವಮೂಲ ಗ್ರಂಥ ಪಾರಾಯಣಕ್ಕೆ ಚಾಲನೆ ದೊರೆಯಲಿದೆ. ಏಪ್ರಿಲ್ 25 ಮತ್ತು 26ರಂದು ಪಾರಾಯಣ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ ಪಂಡಿತ ಅಜಯ ಆಚಾರ್ಯ ಜೋಶಿ, ಕೃಷ್ಟಾಚಾರ್ಯ ಜೋಶಿ, ಸಂಜೀವಾಚಾರ್ಯ ಬುರ್ಲಿ, ಅಜಿತಾಚಾರ್ಯ ಹನಗಂಡಿ ಹಾಗೂ ಕಶ್ಯಪಾಚಾರ್ಯ ಗೊರನಾಳರಿಂದ ಪ್ರವಚನಗಳು ನಡೆಯಲಿವೆ. ಬೆಳಿಗ್ಗೆ ಶ್ರೀಮದ್ಭಾಗವತ ಪುರಾಣ ಪಾರಾಯಣ ಹಾಗೂ ಸಂಜೆ ಪಲ್ಲಕ್ಕಿ ಸೇವೆ, ಸ್ವಸ್ತಿ ವಾಚನ, ದಾಸವಾಣಿ ಕಾರ್ಯಕ್ರಮ ಜರುಗಲಿವೆ. ಸುಧೇಂದ್ರ ವೈದ್ಯ, ಶ್ರೀರಾಮ ಜೋಶಿ, ಉದಯ ದೇಶಪಾಂಡೆ, ಸುಮತಿ ನರಸಿಂಹ ಜೋಶಿ ಸೇರಿದಂತೆ ಹಲವು ಗಾಯಕರು ಭಾಗವಹಿಸಲಿದ್ದಾರೆ.

ಏಪ್ರಿಲ್ 30ರಂದು ನರಸಿಂಹ ಜಯಂತಿ ಅಂಗವಾಗಿ ನರಸಿಂಹ ಹೋಮ, ಸಂಜೆ 6.49ಕ್ಕೆ ಜನನೋತ್ಸವ ಹಾಗೂ ರಾತ್ರಿ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮೇ 1ರಂದು ಸತ್ಯನಾರಾಯಣ ಪೂಜೆ, ರಥೋತ್ಸವ ಹಾಗೂ ಮೇ 2ರಂದು ಬೆಳಿಗ್ಗೆ ಸರ್ವಮೂಲ ಗ್ರಂಥ ಪಾರಾಯಣ ಸಮಾಪ್ತಿ, ಬಳಿಕ 8.30 ಗಂಟೆಗೆ ಗೋಪಾಲ ಕಾವಲಾ ನಡೆದು ಮಧ್ಯಾಹ್ನ 2 ಗಂಟೆಗೆ ಮಹಾಪೂಜೆ, ಪಂಡಿತರ ಸನ್ಮಾನ ನೈವೇದ್ಯ ತೀರ್ಥ ಪ್ರಸಾದವಿದೆ ಎಂದು ದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-26-1947912503

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.