ಆಲಮಟ್ಟಿ: ಸಮರ್ಪಕ ಕುಡಿಯುವ ನೀರು ಪೂರೈಸುತ್ತಿಲ್ಲ ಎಂದು ಆರೋಪಿಸಿ ಸಮೀಪದ ವಂದಾಲ ಗ್ರಾಮದ ನಿವಾಸಿಗಳೆಲ್ಲ ಸೇರಿ ವಂದಾಲ ಗ್ರಾಮ ಪಂಚಾಯಿತಿಯ ಕಾಂಪೌಂಡ್ ಗೇಟ್ಗೆ ಶನಿವಾರ ಬೀಗ ಜಡಿದು ಪ್ರತಿಭಟಿಸಿದರು.

ಮಾದಿಗ ಸಮುದಾಯದ ಮುಖಂಡ ತಿಪ್ಪಣ್ಣ ಮಾದರ ಮಾತನಾಡಿ, ಕಳೆದ ಆರೇಳು ತಿಂಗಳಿಂದ ಮಾದಿಗರು ವಾಸಿಸುವ ಕಾಲೊನಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ನಾಲ್ಕೈದು ದಿನಕ್ಕೊಮ್ಮೆ ಹತ್ತು ನಿಮಿಷ ಮಾತ್ರ ನೀರು ಬಿಡಲಾಗುತ್ತಿದೆ. ಆದರೆ ವಂದಾಲ ಗ್ರಾಮದ ಇನ್ನಿತರ ಕಡೆ ಕುಡಿಯುವ ನೀರಿನ ಸಮಸ್ಯೆ ಇಲ್ಲ, ಕೇವಲ ಮಾದಿಗರು ಹೆಚ್ಚಾಗಿ ವಾಸಿಸುವ ಕಡೆ ಮಾತ್ರ ಈ ಸಮಸ್ಯೆ ಇದೆ ಎಂದು ಅವರು ಆರೋಪಿಸಿದರು.

ಈ ಕುರಿತು ವಂದಾಲ ಪಿಡಿಒ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅವರು ಸ್ಪಂದಿಸಿಲ್ಲ ಎಂದರು. ಇನ್ನೂ ಸಾರ್ವಜನಿಕ ದೋಬಿ ಘಾಟ್ಗೂ ನೀರು ಪೂರೈಕೆ ನಿಲ್ಲಿಸಲಾಗಿದೆ. ನೀರು ಪೂರೈಕೆ ಇಲ್ಲದೇ ಬಟ್ಟೆ ಒಗೆಯಲು ತೊಂದರೆಯಾಗುತ್ತಿದೆ. ದೋಬಿ ಘಾಟ್ ಕೂಡಾ ಪಾಚಿಗಟ್ಟಿದ್ದು ಸ್ವಚ್ಛ ಮಾಡಿಲ್ಲ ಎಂದು ಅವರು ಆರೋಪಿಸಿದರು.

ಇಂದು 2ನೇ ಶನಿವಾರವಾದ ಕಾರಣ ಪಂಚಾಯಿತಿಯ ಸಿಬ್ಬಂದಿ ಕಚೇರಿಯಲ್ಲಿರಲಿಲ್ಲ. ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮೊದಲೇ ಬೀಗ ಇತ್ತು. ಹೀಗಾಗಿ ಗ್ರಾಮ ಪಂಚಾಯಿತಿಯ ಕಾಂಪೌಂಡ್ಗೆ ಬೀಗ ಜಡಿಯಲಾಗಿದೆ ಎಂದು ತಿಪ್ಪಣ್ಣ ಮಾದರ ತಿಳಿಸಿದರು.

ಸಿದ್ದು ತಳಗೇರಿ, ದಂಡೆಪ್ಪ ಮೇಲಿನಮನಿ, ಮಹಾದೇವಪ್ಪ ತಳಗೇರಿ, ಸೋಮಪ್ಪ ಪೂಜಾರಿ, ಬಸವರಾಜ ಮಾದರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.