ವಿಜಯಪುರ: ‘ನಗರದಲ್ಲಿರುವ ಎಲ್ಲ ಮತದಾರರು ತಪ್ಪದೆ ಮ್ಯಾಪಿಂಗ್ ಮಾಡಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಸುಕಾಸುಮ್ಮನೆ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಮುಖಂಡ ಎಂ.ಸಿ.ಮುಲ್ಲಾ ಸುಳ್ಳು ಆಪಾದನೆ ಮಾಡುತ್ತಿದ್ದಾರೆ’ ಎಂದು ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಶಂಕರ ಹೂಗಾರ ಹೇಳಿದ್ದಾರೆ.

‘ಮುಸ್ಲಿಂ ವ್ಯಕ್ತಿಗಳು ಸಹ ಶಾಲೆ, ಕಲ್ಯಾಣ ಮಂಟಪಗಳಲ್ಲಿ ಬಿ.ಎಲ್.ಒ ಗಳನ್ನು ಹೆದರಿಸಿ, ಬೆದರಿಸಿ ಕರೆಸಿಕೊಂಡು ತಮ್ಮವರನ್ನು ಮ್ಯಾಪಿಂಗ್ ಮಾಡಿಸಿಕೊಂಡಿದ್ದಾರೆ. ಈ ಕುರಿತಂತೆ ವಿಡಿಯೊ, ಫೋಟೊಗಳು ಸಹ ನಮ್ಮಲ್ಲಿವೆ. ತಮ್ಮ ಕೋಮಿನವರ ಮ್ಯಾಪಿಂಗ್ ಮಾಡಿಸುವಾಗ ಇಲ್ಲದ ಕ್ರಮ ಕೈಗೊಳ್ಳುವ ಜರೂರತಿ ಈಗ ಏಕೆ’ ಎಂದು ಪ್ರಶ್ನಿಸಿದ್ದಾರೆ.

‘ವಿಜಯಪುರ ನಗರದಲ್ಲಿ ಮುಸ್ಲಿಂ ಸಮುದಾಯದವರು ಗೆಲುವು ಸಾಧಿಸುತ್ತಿಲ್ಲ, ಬಸನಗೌಡ ಪಾಟೀಲ ಯತ್ನಾಳರು ಮರು ಆಯ್ಕೆಯಾಗುತ್ತಿದ್ದಾರೆ. ಇದರಿಂದ ನಮ್ಮ ಆಟ ನಡೆಯುತ್ತಿಲ್ಲ ಎಂಬ ಹತಾಸೆಯಿಂದ ಈ ರೀತಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದು ಸರಿಯಲ್ಲ’ ಎಂದಿದ್ದಾರೆ.

‘ಎಸ್.ಐ.ಆರ್ ಕಾರ್ಯ ಯಶಸ್ವಿ ಆಗಬೇಕು, ಮತದಾರರ ಪಟ್ಟಿಯಲ್ಲಿರುವ ಅರ್ಹ ಮತದಾರರು ಯಾರೂ ಮ್ಯಾಪಿಂಗ್ ಕಾರ್ಯದಿಂದ ಹೊರಗುಳಿಯಬಾರದೆಂಬ ಮಹತ್ತರ ಉದ್ದೇಶದಿಂದ ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಮಾಡುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ, ಬೆಂಬಲ ನೀಡುವುದನ್ನು ಬಿಟ್ಟು, ಹಿಂದೂ ಮತದಾರರು ಮ್ಯಾಪಿಂಗ್ ಮಾಡಿಸಿಕೊಳ್ಳದೆ ಮತದಾರರ ಪಟ್ಟಿಯಿಂದ ಹೊರ ಹೋಗಬೇಕು, ಆಗ ತಮ್ಮ ಸಮುದಾಯದ ವ್ಯಕ್ತಿ ಶಾಸಕನಾಗಿ ಆಯ್ಕೆ ಆಗಲು ಅನುಕೂಲ ಆಗುತ್ತದೆ ಎಂಬ ಕುತಂತ್ರ ಸಲ್ಲ’ ಎಂದಿದ್ದಾರೆ.

‘ಎಂ.ಸಿ.ಮುಲ್ಲಾಅವರ ಹೇಳಿಕೆಗಳಿಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ, ಹಿಂದೂಗಳು ತಪ್ಪದೆ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು ಹಾಗೂ ಸುತ್ತಮುತ್ತಲಿನ ನಾಗರಿಕರಿಗೆ ಬಂಧು-ಮಿತ್ರರಿಗೆ ಮ್ಯಾಪಿಂಗ್ ಮಾಡಿಸಿಕೊಳ್ಳಲು ಅವರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-26-1576441664

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.