ವಿಜಯಪುರ : ‘ಕೊಲ್ಹಾರ, ತುಮಕೂರು ಭಾಗದಲ್ಲಿ 1400 ಅಡಿ ಆಳವಾಗಿ ಕೊಳವೆಬಾವಿ ಕೊರೆದರೂ ನೀರು ಜಿನುಗುವುದಿಲ್ಲ. ಆದರೆ ಕೆರೆ ತುಂಬುವ ಯೋಜನೆ ಫಲವಾಗಿ ಈ ಭಾಗದಲ್ಲಿ 400 ಅಡಿಗೆ ಅಂತರ್ಜಲ ಲಭ್ಯವಾಗುವಂತಾಗಿದೆ. ಒಂದರ್ಥದಲ್ಲಿ ಕೆರೆ ತುಂಬುವ ಯೋಜನೆ ಇಡೀ ದೇಶಕ್ಕೆ ಮಾದರಿ’ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ಹೇಳಿದರು.

ತಿಕೋಟಾ ತಾಲ್ಲೂಕಿನ ಲೋಹಗಾಂವದಲ್ಲಿ ಸಣ್ಣ ನೀರಾವರಿ -ಅಂತರ್ಜಲ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಡೆದ ಲೋಹಗಾಂವ ಗ್ರಾಮದಲ್ಲಿ ₹978 ಲಕ್ಷ ವೆಚ್ಚದಲ್ಲಿ ಲೋಹಗಾಂವ, ಟಕ್ಕಳಕಿ, ಹುಬನೂರ, ಜಾಲಗೇರಿ ಮೊದಲಾದ ಗ್ರಾಮಗಳಲ್ಲಿ ಸರಣಿ ಬಾಂದಾರ್ ನಿರ್ಮಾಣ ಕಾಮಗಾರಿಗೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು.

‘ಅಂತರ್ಜಲ ಹೆಚ್ಚಿಸುವುದು ಕಷ್ಟದ ಕೆಲಸ, ಅಂತರ್ಜಲ ಬಳಕೆಯಲ್ಲಿ 9 ನೇ ಸ್ಥಾನದಲ್ಲಿದ್ದೇವೆ, ಅಂತರ್ಜಲವನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಬೇಕು’ ಎಂದರು.

‘ಪ್ರಸ್ತುತ ಈ ಸರಣಿ ಬಾಂದಾರ್ಗಳ ನಿರ್ಮಾಣ ಕಾರ್ಯವನ್ನು ಪ್ರಥಮ ಹಂತವಾಗಿ 10 ಪ್ಯಾಕೇಜ್ಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ, ಈ ಭಾಗದಲ್ಲಿ ನೀರಾವರಿಯ ಕ್ರಾಂತಿಯ ಫಲವಾಗಿಯೇ ಕೋಟ್ಯಂತರ ಅನುದಾನ ರೈತರು ವಹಿವಾಟು ನಡೆಸುವಂತಾಗಿದೆ, ರೈತರಿಗೆ ನೀರು ಹಾಗೂ ವಿದ್ಯುತ್ ಕೊಟ್ಟರೆ ಸಾಕು’ ಎಂದರು.

‘ರೈತರ ಬಗ್ಗೆ ಕಾಳಜಿ ವಹಿಸುವ ಕೆಲವೇ ನಾಯಕರಲ್ಲಿ ಎಂ.ಬಿ. ಪಾಟೀಲ ಒಬ್ಬರು. ಬೃಹತ್ ಕೈಗಾರಿಕಾ ಸಚಿವರಾಗಿರುವ ಅವರು ವಿದೇಶಗಳಿಂದ ಬಂಡವಾಳ ಹೂಡಿಕೆ ತರುವಲ್ಲಿ ಯಶಸ್ವಿಯಾಗಿದ್ದು, ಅವರ ಕಾರ್ಯವೈಖರಿಯ ಬಗ್ಗೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿಗಳು ಸಹ ಕೇಳುತ್ತಾರೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಶಿವಾನಂದ ಕೆಲೂರ, ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಅರ್ಜುನ ರಾಠೋಡ, ವಸಂತ ತಂಗಡಿ, ಗೀತಾಂಜಲಿ ಅಂಗಡಿ, ಎಚ್.ಎಸ್. ನಾಡಗೌಡ, ದಾನಪ್ಪ ಚೌಧರಿ, ರಾಜು ಜೋರಾಪೂರ ಮಹಾಂತೇಶ ಗುಲಗಂಜಿ ಮೊದಲಾದವರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-26-1838537802

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.