ಡೋಣಿ ಕಡಕೋಳ(ದೇವರಹಿಪ್ಪರಗಿ): ‘ಉಡಿ ತುಂಬುವಂತಹ ಕಾರ್ಯಕ್ರಮದಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯು ನಮ್ಮ ಸಂಪ್ರದಾಯದ ಪಾಲನೆ ಹಾಗೂ ಬೆಳವಣಿಗೆಯನ್ನು ಸೂಚಿಸುತ್ತದೆ. ಅವರು ಸಮಾಜದ ಶಕ್ತಿ ಆಗಿದ್ದಾರೆ’ ಎಂದು ಕಡಕೋಳ ಗದ್ದುಗೆಹಿರೇಮಠದ ಮಡಿವಾಳೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಡೋಣಿ ಕಡಕೋಳ ಗ್ರಾಮದಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಪುರಾಣದ ಅಂಗವಾಗಿ ಜರುಗಿದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ವಿಜಯಪುರ ಅನುಗ್ರಹ ಆಸ್ಪತ್ರೆಯ ಡಾ. ಪ್ರಭುಗೌಡ ಬಿ.ಎಲ್(ಚಬನೂರ) ಮಾತನಾಡಿ, ‘ಮಹಿಳೆ ಮಮತೆ, ಮಮಕಾರದ ಮಾತೃ ಸ್ವರೂಪಿ. ಅಂತೆಯೇ ನಮ್ಮ ನೆಲದ ಸಂಪ್ರದಾಯ, ಸಂಸ್ಕೃತಿಗಳನ್ನು ಪಾಲಿಸಿ ಮುಂದುವರಿಸಿಕೊಂಡು ಹೋಗುವಲ್ಲಿ ಅವಳು ಸದಾ ಮುಂದು. ಹೀಗಾಗಿಯೇ ಮಹಿಳೆಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ’ ಎಂದರು.

ಪುರಾಣ ಪ್ರವಚನಕಾರ ದೇವರಹಿಪ್ಪರಗಿ ಜಡಿಮಠ ಜಡಿಸಿದ್ಧೇಶ್ವರ ಸ್ವಾಮೀಜಿ, ಹಿರೇಮಠದ ಮಹಾಲಿಂಗಯ್ಯ ಸ್ವಾಮೀಜಿ, ಮಹಾದೇವಿ ಬಸಣ್ಣವರ, ಶಶಿಕಲಾ ತೆಗ್ಗಿನಮನಿ, ಲಲಿತಾ ಖೈನೂರ, ರಾಜಶ್ರೀ ಹಿರೇಮಠ, ಜಯಶ್ರೀ ಯಲರಡ್ಡಿ, ಶಶಿಕಲಾ ಕಲ್ಲಣ್ಣವರ, ಜ್ಯೋತಿ ಉಮರ್ಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-26-239212775

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.