ವಿಜಯಪುರ: ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು.

ಸಿಐಟಿಯು ರಾಜ್ಯ ಸಮಿತಿಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ ಮಾತನಾಡಿ, ‘ಉತ್ತರ ಪ್ರದೇಶ ಮತ್ತು ಹರಿಯಾಣದ ಬಿಜೆಪಿ ಸರ್ಕಾರಗಳು ನೋಯಿಡಾ, ಗ್ರೇಟರ್ ನೋಯಿಡಾ, ಗುರುಗ್ರಾಮ ಸೇರಿದಂತೆ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಕಾರ್ಮಿಕರ ಹೋರಾಟಗಳನ್ನು ಕ್ರೂರವಾಗಿ ದಮನಿಸುತ್ತಿರುವುದು ಖಂಡನೀಯ, ಇದು ಕೇವಲ ಕೈಗಾರಿಕಾ ವಿವಾದವಲ್ಲ, ಕಾರ್ಮಿಕರ ಹಕ್ಕುಗಳಿಗಾಗಿ ನಡೆಯುತ್ತಿರುವ ಸಂಘರ್ಷ’ ಎಂದು ಹೇಳಿದರು.

ಸಿಐಟಿಯು ಸಂಚಾಲಕ ಲಕ್ಷ್ಮಣ ಹಂದ್ರಾಳ ಮಾತನಾಡಿ, ‘ಏಪ್ರಿಲ್ 9ರಂದು ನೋಯಿಡಾದಲ್ಲಿ ಆರಂಭವಾದ ಹೋರಾಟವು ಸಾವಿರಾರು ಕಾರ್ಮಿಕರನ್ನು ಒಳಗೊಂಡು ಹಲವು ಕೈಗಾರಿಕಾ ಪ್ರದೇಶಗಳಿಗೆ ವಿಸ್ತರಿಸಿದೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಈ ಹೋರಾಟಗಳು ಫೆಬ್ರವರಿ 12ರ ಐತಿಹಾಸಿಕ ಮುಷ್ಕರದ ಮುಂದುವರಿಕೆಯ ಭಾಗವಾಗಿದೆ’ ಎಂದರು.

ಇನ್ನು ‘ಕಾರ್ಮಿಕರು ತಿಂಗಳಿಗೆ ಕನಿಷ್ಠ ₹26,000 ವೇತನದ ಬೇಡಿಕೆ ಇಟ್ಟಿದ್ದು, ಇದು ಅವಶ್ಯಕತೆಯಾಗಿದೆ. ವರ್ಷಗಳಿಂದ ವೇತನ ಪರಿಷ್ಕರಣೆ ಆಗದಿರುವುದು ಹಾಗೂ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಂಡಿದೆ’ ಎಂದು ಹೇಳಿದರು.

ಅಂಗನವಾಡಿ ಸಂಘಟನೆಯ ಮುಖಂಡರಾದ ಸುನಂದ ನಾಯಕ್, ಭಾರತಿ ವಾಲಿ, ಬಿಸಿಯೂಟ ಸಂಘಟನೆಯ ಸುಮಂಗಲ ಆನಂದ ಶೆಟ್ಟಿ, ಕಾಳಮ್ಮ ಬಡಿಗೇರ್, ಗ್ರಾಮ ಪಂಚಾಯಿತಿ ನೌಕರರ ಸಂಘಟನೆಯ ಲಾಲಅಹ್ಮದ್ ಶೇಖ, ಶಿವಾನಂದ ಅನಿಮಿ, ಶಿವಾನಂದ ಬಿರಾದಾರ, ಬಿಸಿ ಊಟ ಸಂಘಟನೆಯ ಸುರೇಖಾ ವಾಗ್ಮೊರೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-26-1436846779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.