ಆಲಮಟ್ಟಿ: ಯಲಗೂರದ ಯಲಗೂರೇಶ್ವರ ದೇವಸ್ಥಾನದಲ್ಲಿಶುಕ್ರವಾರ ಸಂಭ್ರಮದಿಂದ ರಾಮನವಮಿ ಆಚರಿಸಲಾಯಿತು.

ಬೆಳಿಗ್ಗೆ ಶ್ರೀರಾಮನ ಉತ್ಸವ ಮೂರ್ತಿಯ ಮೆರವಣಿಗೆ ಜರುಗಿತು. ಕೃಷ್ಣಾ ನದಿಗೆ ತೆರಳಿ ಸ್ನಾನ ಮಾಡಿಸಿ ನಂತರ ನದಿಯಿಂದ ದೇವಸ್ಥಾನದವರೆಗೆ ವಾದ್ಯ ಮೇಳದೊಂದಿಗೆ ಕರೆತರಲಾಯಿತು. ಬೆಳಿಗ್ಗೆ 7ಕ್ಕೆ ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಗಳು ಯಲಗೂರೇಶನಿಗೆ ಪಂಚಾಮೃತ ಅಭಿಷೇಕ ಸಲ್ಲಿಸಿದರು.

ದೇವಸ್ಥಾನದ ಪ್ರಾಂಗಣದಲ್ಲಿ ಮಧ್ಯಾಹ್ನ 12ಕ್ಕೆ ಪುಷ್ಪಾಲಂಕೃತ ತೊಟ್ಟಿಲಲ್ಲಿ ರಾಮನ ಮೂರ್ತಿ ಇಟ್ಟು ರಾಮನವಮಿಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ವೇದ ಮಂತ್ರ ಘೋಷಗಳೊಂದಿಗೆ ಭಕ್ತ ಸಮುದಾಯ ರಾಮನನ್ನು ಸ್ತುತಿಸಿದರು. ಯಲಗೂರೇಶನಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆಯೂ ಜರುಗಿತು. ರಾಮನ ಹಾಗೂ ಪವನಸುತನ ಭಕ್ತಿಗೀತೆಗಳನ್ನು ಮಹಿಳೆಯರು ಹಾಡಿದರು.

ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ವಾದಿರಾಜ ಯಲಬುರ್ಗಿ ದಂಪತಿ ಪೂಜೆ ನೆರವೇರಿಸಿದರು.

ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅನಂತ ಓಂಕಾರ, ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ, ಪ್ರಧಾನ ಅರ್ಚಕ ಯಲಗೂರದಪ್ಪ ಪೂಜಾರ, ಸಂಜೀವ ಪೂಜಾರ, ಶ್ರೀಶೈಲ ಪೂಜಾರ, ಗೋಪಾಲ ಗದ್ದನಕೇರಿ, ಸಂತೋಷ ಪೂಜಾರ, ವೆಂಕಟೇಶ ಒಡೆಯರ, ಮಹಾದೇವ ಹೂಗಾರ, ಮಹಾಂತೇಶ ಡೆಂಗಿ, ಮತ್ತೀತರರು ಇದ್ದರು.

ಗೋಶಾಲೆಯೊಳಗೆ ರಾಮದೇವರ ಪೂಜೆ: ಯಲಗೂರದ ಪ್ರಮೋದಾತ್ಮ ಗೋಸಂರಕ್ಷಣಾ ಕೇಂದ್ರದಲ್ಲಿ ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಗಳು ಮೂಲರಾಮದೇವರಿಗೆ ಪೂಜೆ ಸಲ್ಲಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಜರುಗಿದ ಪೂಜೆಯಲ್ಲಿ ಅವಳಿ ಜಿಲ್ಲೆಯ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಅಜಿತ ಕುಲಕರ್ಣಿ, ಡಾ ಅರವಿಂದ ಡಾಣಕಶಿರೂರ, ಬದರಿನಾರಾಯಣ ಚಿಮ್ಮಲಗಿ ಇದ್ದರು. ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-26-1018768354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.