ವಿಜಯಪುರ: ‘ಬೇರೆ ಬೇರೆ ಧರ್ಮಕ್ಕೆ ಮತಾಂತರಗೊಂಡಿರುವ ಬಂಜಾರಾ ಸಮಾಜದವರನ್ನು ಮರಳಿ ನಮ್ಮ ಸನಾತನ ಧರ್ಮಕ್ಕೆ ಕರೆ ತಂದು, ಹಿಂದೂ ಧರ್ಮವನ್ನು ಗಟ್ಟಿಗೊಳಿಸುವ ಕೆಲಸ ಮಾಡಲಾಗುವುದು’ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರ ಮತಕ್ಷೇತ್ರದ ವ್ಯಾಪ್ತಿಯ ತೊರವಿ ತಾಂಡಾ ನಂ.1ರಲ್ಲಿ ಗುರುವಾರ ₹40 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಓವರ್ ಹೆಡ್ ಟ್ಯಾಂಕ್, ₹9 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ, ₹50 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ₹28 ಲಕ್ಷ ಅನುದಾನದಲ್ಲಿ ಸೇವಾಲಾಲ್ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಅಧಿಕಾರ ಇದ್ದಾಗ ಉಪಯೋಗ ಮಾಡಿಕೊಂಡು ಜನರಿಗಾಗಿ, ಧರ್ಮಕ್ಕಾಗಿ ಕೆಲಸ ಮಾಡಬೇಕು. ಅನೇಕರು ಪ್ರಧಾನಮಂತ್ರಿಗಳು, ಮುಖ್ಯಮಂತ್ರಿ, ಮಂತ್ರಿಗಳು ಆಗಿದ್ದಾರೆ. ಅವರಲ್ಲಿ ಕೆಲವರನ್ನು ಮಾತ್ರ ನೆನೆಯುತ್ತೇವೆ. ಕಾರಣ ಒಳ್ಳೆಯದನ್ನು ಮಾಡಿದವರನ್ನು ಜನ ಸ್ಮರಿಸುತ್ತಾರೆ. ನಾನು ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಅಂತಲೇ ಇಡೀ ಬಂಜಾರಾ ಸಮಾಜ ಪ್ರತಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ಮತ ನೀಡುತ್ತಾರೆ. ಅವರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ನಗರದಂತೆಯೇ ತಾಂಡಾಗಳಲ್ಲಿಯೂ ಮಾಡಿರುವೆ’ ಎಂದರು.

ಮೋಹನ ಮಹಾರಾಜ್, ತುಳಸಿಂಗ್ ನಾಯಕ, ಗೋಪಾಲ ಮಹಾರಾಜ, ಚಂದು ಮಹಾರಾಜ್, ಗಣಪತಿ ಪವಾರ, ಸೋಮು ಪೂಜಾರಿ, ತಹಶೀಲ್ದಾರ್ ಸುರೇಶ ಜಮಾದಾರ, ಪಿಡಿಒ ರಾಜಶ್ವರಿ ತುಂಗಳ, ದೇವರಾಜ ರಾಠೋಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-19-2083780364

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.