ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ₹32.20 ಲಕ್ಷ ನಗದು, 60ಗ್ರಾಂ ಚಿನ್ನ ವಶ

Last Updated 24 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ವಿಜಯಪುರ: ನಗರದ ಹೊರಭಾಗದ ಜಮಖಂಡಿ ರಸ್ತೆಯಲ್ಲಿ ಕಾರಿನಲ್ಲಿ ದಾಖಲಾತಿ ಇಲ್ಲದೇ ಸಾಗಿಸುತ್ತಿದ್ದ ₹10.30 ಲಕ್ಷ ನಗದು 60 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನರೇಂದ್ರ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆದಿದ್ದು, ಹಣ, ಹೆಂಡ, ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

₹ 10 ಲಕ್ಷ ವಶ: ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಚೆಕ್ ಪೋಸ್ಟ್ ಬಳಿ ಖಾಸಗಿ ಸೊಸೈಟಿ ಮ್ಯಾನೇಜರ್ ಬಸಪ್ಪ ಹಡಗಲಿ ಅವರಿಂದ ಸೂಕ್ತ ದಾಖಲೆಗಳಿಲ್ಲದ ₹ 10 ಲಕ್ಷವನ್ನು ಪೊಲೀಸರು ವಶಕ್ಕೆ ಪಡೆದರು.

ಮಹಾರಾಷ್ಟ್ರ –ಕರ್ನಾಟಕ ಗಡಿಯ ಝಳಕಿ ಚೆಕ್‌ ಪೋಸ್ಟ್‌ನಲ್ಲಿ ಸೋಲಾಪುರದಿಂದ ಕರ್ನಾಟಕಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ₹ 2 ಲಕ್ಷ ನಗದು ಮತ್ತು 30 ಲೀಟರ್ ಮದ್ಯ ವಶ ಪಡಿಸಿಕೊಳ್ಳಲಾಗಿದೆ. ಯಲಗೂರ ಕ್ರಾಸ್ ಬಳಿ ಚೆಕ್ ಪೋಸ್ಟ್ ಹತ್ತಿರ ₹1.5 ಲಕ್ಷ ನಗದು ಅನ್ನು ವಶಕ್ಕೆ ಪಡೆಯಲಾಗಿದೆ.

ಗದಗ ವರದಿ: ದಾಖಲೆ ಇಲ್ಲದೇ ಸಾಗಿ ಸುತ್ತಿದ್ದ ₹1.90 ಲಕ್ಷವನ್ನು ಲಕ್ಷ್ಮೇಶ್ವರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಆಂಧ್ರಪ್ರದೇಶದ ಅನಂತಪುರದಿಂದ ಧಾರವಾಡ ಜಿಲ್ಲೆಯ ಗುಡಗೇರಿಗೆ ತೆರಳುತ್ತಿದ್ದ ಕಾರಿನ ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ.

ಬಳ್ಳಾರಿ –₹ 5.50 ಲಕ್ಷ ನಗದು, 2,200 ಸೀರೆಗಳ ವಶ ‍: ಸಿರುಗುಪ್ಪ ತಾಲ್ಲೂಕಿನ ವತ್ತುಮುರಣಿ ಚೆಕ್‌ಪೋಸ್ಟ್‌ನಲ್ಲಿ ಸುಬ್ಬಾರೆಡ್ಡಿ ಎಂಬುವವರಿಂದ ₹ 5.50 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ‘ನಗರದ ಮೀನಾಕ್ಷಿ ವೃತ್ತದ ಬಳಿ ₹ 5.30 ಲಕ್ಷ ಮೌಲ್ಯದ 2,200 ಸೀರೆ ವಶಕ್ಕೆ ಪಡೆಯಲಾಗಿದೆ‘ ಎಂದು ಎಸ್ಪಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದರು.

ಕುಡುತಿನಿಯಲ್ಲಿ ₹ 10 ಸಾವಿರ ಮೌಲ್ಯದ 41 ಸೀರೆ, ಸಿರಿಗೇರಿ ಸಮೀಪ ಮಾಟಸುಗೂರು ಚೆಕ್‌ಪೋಸ್ಟ್‌ ಬಳಿ
₹ 1.36 ಲಕ್ಷ ಮೌಲ್ಯದ 643 ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಧೆಡೆಗಳಲ್ಲಿ ₹ 4 ಲಕ್ಷ ಮೌಲ್ಯದ ಮದ್ಯ, ₹ 5 ಲಕ್ಷ ಮೌಲ್ಯದ ಐದು ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದರು.

ಮದ್ಯ ಜಪ್ತಿ (ಬೀದರ್‌ ವರದಿ): ಪ್ರತ್ಯೇಕ ಪ್ರಕರಣದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ₹ 10 ಲಕ್ಷ ಮೌಲ್ಯದ ಮದ್ಯ,4 ಲಕ್ಷ ನಗದು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT