ತಾಳಿಕೋಟೆ: ತೊಟ್ಟಿಲು ತೂಗಿದ ಕೈಗಳಿಗೆ ಉತ್ತಮ ಶಿಕ್ಷಣ ನೀಡಿದರೆ ಜಗತ್ತನ್ನೂ ತೂಗಬಲ್ಲರು ಎಂದು ಸಾಕ್ಷಿಯಾಗಿ ನೂರಾರು ಸಾಧಕರು ನಮ್ಮೊಂದಿಗಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಬಿ.ಮೂಗಡ್ಲಿಮಠ ಹೇಳಿದರು.

ಸ್ಥಳೀಯ ವೀರಶೈವ ವಿದ್ಯಾವರ್ಧಕ ಸಂಘದ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಮಹಿಳೆಯರ ಛದ್ಮವೇಷಭೂಷಣ ಸ್ಪರ್ಧೆ ಹಾಗೂ (ಮಾಡ್ಲಿಂಗ್) ಮಾಡರ್ನ್ ಡೇಸ್ ಫ್ಯಾಶನ್ ಶೋ ಸ್ಪರ್ಧೆಯನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸಲು, ಅವರ ಸಾಧನೆಗಳನ್ನು ಗೌರವಿಸಲು ಮತ್ತು ಸಮಾಜದಲ್ಲಿ ಸಮಾನತೆ ತರಲು ಮಹಿಳಾ ದಿನಾಚರಣೆಯನ್ನು ಮಾಡಲಾಗುತ್ತಿದ್ದು ಲಭ್ಯ ಅವಕಾಶಗಳನ್ನು ಬಳಸಿಕೊಳ್ಳಬೇಕು. ಧೈರ್ಯಶಾಲಿಗಳಾಗಿ ಮುನ್ನುಗ್ಗಬೇಕು, ಸಾಧನೆಗೆ ಸಾವಿರ ಕ್ಷೇತ್ರಗಳಿವೆ ಎಂದರು.

ಛದ್ಮವೇಷಧಾರಿಗಳಿಗೆ ಹಾಗೂ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. ಮಹಿಳಾ ವೇದಿಕೆಯ ಸಂಚಾಲಕಿ ಉಪನ್ಯಾಸಕಿ ಹೇಮಾ ಜೈನಾಪೂರ ಪ್ರಾಸ್ತಾವಿಕ ಮಾತನಾಡಿದರು.ಉಪನ್ಯಾಸಕಿ ಸಿ.ಬಿ.ಪಾಟೀಲ ಸ್ವಾಗತಿಸಿದರು.

ಸಂಗೀತಾ .ಜಿ.ಕೊಡೆಕಲ್ಲಮಠ ನಿರೂಪಿಸಿದರು. ಗದ್ದೆಣ್ಣ ಪೂಜಾರಿ ವಂದಿಸಿದರು ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.