ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಎಲ್ಲ ಸಾಹಿತ್ಯಗಳ ಹಿರಿಯಣ್ಣ: ಸೋಮಶೇಖರ ವಾಲಿ

ವಿಶ್ವ ಜಾನಪದ ದಿನಾಚರಣೆ
Last Updated 23 ಆಗಸ್ಟ್ 2020, 12:11 IST
ಅಕ್ಷರ ಗಾತ್ರ

ವಿಜಯಪುರ: ಜಾನಪದ ಎಲ್ಲ ಸಾಹಿತ್ಯಗಳ ಹಿರಿಯಣ್ಣನಾಗಿದ್ದು, ಇಂದಿನ ಸಾಹಿತ್ಯಗಳ ಬೇರು ಜಾನಪದ ಸಾಹಿತ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಸೋಮಶೇಖರ ವಾಲಿ ಹೇಳಿದರು.

ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಫ.ಗು ಹಳಕಟ್ಟಿ ಸಭಾಭವನದಲ್ಲಿ ಭಾನುವಾರ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಹಾಗೂ ಪಡಗಾನೂರ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಾಪದವು ನಮ್ಮ ದಿನನಿತ್ಯದ ಕಾಯಕ, ಆಚಾರ, ಸಂಸ್ಕೃತಿ, ಆಚರಣೆಯ ಪ್ರತಿರೂಪವಾಗಿದೆ.ಜಾನಪದ ವೈಜ್ಞಾನಿಕ ನೆಲೆಕಟ್ಟಿನ ಮೇಲೆ ನಿಂದಿದೆ. ಇಂದು ಪಾಶ್ಚಿಮಾತ್ಯ ಸಂಸ್ಕೃತಿಗಳ ಗೋಜಿಗೆ ಬಿದ್ದು ಜಾನಪದ ಕಲೆ ನಶಿಸುತ್ತಿದೆ ಎಂದರು.

ವಿಶ್ವ ಜಾನಪದ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಪ್ರತಿದಿನದ ಬದುಕಲ್ಲಿ ಒಂದಾಗಬೇಕು. ಇಂದಿನ ಮಕ್ಕಳಲ್ಲಿ ಜಾನಪದ ಕಲೆಯ ಮಹತ್ವವನ್ನು ಸಾರಬೇಕು. ಮಕ್ಕಳಿಗೆ ಜಾನಪದ ಅರ್ಥಪುರ್ಣತೆಯ ಬಗ್ಗೆ ಎಲ್ಲರಿಗೂ ತಿಳಿಸುವ ಕಾರ್ಯ ಆಗಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿನಿವೃತ್ತ ಉಪ ಕಾರ್ಯದರ್ಶಿ ಬಿ.ವಿ. ಬೋಸ್ಲೆ ಮಾತನಾಡಿ, ಜಾನಪದವು ಜನರಿಂದ ನಮಗೆ ಬಳುವಳಿಯಾಗಿ ಬಂದಿದೆ. ಅನಕ್ಷರತೆಯ ಸಮಯದಲ್ಲಿ ಒಂದು ಉತ್ತಮ ಮಾಧ್ಯಮವಾಗಿ ಕಾಯಕ ಮಾಡಿದೆ. ಜನರಿಗೆ ಸಾಹಿತ್ಯವನ್ನು ಉಣಬಡಿಸಿದೆ. ಸಾಮಾಜಿಕ ಪಿಡುಗುಗಳು, ಲೋಪಗಳನ್ನು ಸಾಮಾನ್ಯರಿಗೆ ತಿಳಿಸುವಲ್ಲಿ ಜನಪದ ಕಲೆ ಮುಖ್ಯ ಪಾತ್ರ ವಹಿಸಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಎಲ್ಲ ಸಾಹಿತ್ಯಗಳ ತವರು ಜಾನಪದವಾಗಿದೆ. ಜಾನಪದ ಕಲೆ, ಸಾಹಿತ್ಯದ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸುವ ಕಾರ್ಯ ಮಾಡಬೇಕಿದೆ ಎಂದರು.

ಪ್ರಾಚಾರ್ಯೆ ಸುನೀತಾ ದೇವಾನಂದ ಚವ್ಹಾಣ ಮಾತನಾಡಿ,ನಮ್ಮ ಮಕ್ಕಳು ಪಾಶ್ಚಿಮಾತ್ಯ ಸಾಹಿತ್ಯಗಳ ಬೆನ್ನು ಬಿದ್ದಿದ್ದು, ಅವರಿಗೆ ಜನಪದ ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕಿದೆ. ಜಾನಪದ ಎಲ್ಲಿಯವರೆಗೆ ಉಳಿಯುತ್ತದೆಯೋ ಅಲ್ಲಿಯವರೆಗೆ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.

ಜನಪದ ಕಲಾವಿದರಾದ ಮಲ್ಲಪ್ಪ ಯರನಾಳ(ಪಾರಿಜಾತ), ರವಿ ಬಡಿಗೇರ (ಭಜನೆ), ಮಲ್ಲಪ್ಪ ಗಣಿ(ಗೊಂಬೆ ಕುಣಿತ), ಅಜೀಜ್ ಸಾಬ್ ಜಹಗೀರದಾರ (ಹೆಜ್ಜೆ ಮೇಳ), ಕಮಲವ್ವ ಸಿದರೆಡ್ಡಿ (ಚೌಡಕಿ) ಅವರನ್ನು ಸನ್ಮಾನಿಸಲಾಯಿತು.

ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್‌ ಬಸಯ್ಯ ಹಿರೇಮಠ, ಇಂಡಿ ತಾಲ್ಲೂಕು ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಆರ್.ವಿ.ಪಾಟೀಲ, ತಿಕೋಟಾ ತಾಲ್ಲೂಕು ಅಧ್ಯಕ್ಷ ನಿಂಗಣ್ಣ ಕಲಘಟಗಿ, ಜಿಲ್ಲಾ ಖಜಾಂಚಿ ಎಸ್. ಎಲ್. ಮೇತ್ರಿ, ಮೌಲಾಸಾಬ್ ಜಾಹಗೀರದಾರ್, ಆನಂದ ರಾಠೋಡ,ಹುವಣ್ಣ ಪೂಜಾರಿ,ಜಿ.ಎಂ. ಹಳ್ಳೂರ‌ ಉಪಸ್ಥಿತರಿದ್ದರು.

ಜಾನಪದ ನಮ್ಮ ಹಿರಿಯರ ಬಳುವಳಿಯಾಗಿದ್ದು, ಅವುಗಳ ಆಳ ಹಾಗೂ ತತ್ವಗಳು ನಮಗೆ ಮಾರ್ಗದರ್ಶನವಾಗಿವೆ
ಸುನೀತಾ ದೇವಾನಂದ ಚವ್ಹಾಣ
ಪ್ರಾಚಾರ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT