ವಿಜಯಪುರ: ಕಿಡ್ನಿ ದಾನ ಮಾಡುವುದರಿಂದ ರೋಗಿಗಳಿಗೆ ಪುನರ್ಜನ್ಮ ನೀಡಬಹುದು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಅರುಣ ಚಂ. ಇನಾಮದಾರ ಹೇಳಿದರು.

ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಗುರುವಾರ ನಡೆದ ವಿಶ್ವ ಕಿಡ್ನಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಕಿಡ್ನಿ ದಾನ ಮಾಡಿರುವ ತಾಯಂದಿರು ಅವರಿಗೆ ಎರಡನೇ ಬಾರಿಗೆ ಜನ್ಮ ನೀಡಿದ್ದಾರೆ. ಕಿಡ್ನಿ ದಾನ ಮಾಡುವವರಲ್ಲಿ ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ತಾಯಂದಿರ ಈ ತ್ಯಾಗ ಮತ್ತು ಸಮರ್ಪಣೆ ಮನೋಬಾವ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಮೂತ್ರಪಿಂಡ ಕಾಯಿಲೆ ತಡೆಗಟ್ಟಲು ಅನುಸರಿಸೇಬೇಕಾದ ಜೀವನಶೈಲಿ ಮತ್ತು ಕೈಗೊಳ್ಳಬೇಕಿರುವ ಮುನ್ನೇಚರಿಕೆ ಕ್ರಮಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಯೂರಾಲಜಿ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ, ಬಿ.ಎಲ್.ಡಿ.ಇ ಡೀಮ್ಡ್ ವಿವಿಯ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈವರೆಗೆ ನಡೆಸಲಾಗಿರುವ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಳ ಕುರಿತು ವಿವರಿಸಿದರು.

ಡಯಾಲಯಿಸಿಸ್ ಪ್ರಯೋಜನಗಳು ಮತ್ತು ಅದರ ಅನಾನುಕೂಲಗಳ ಬಗ್ಗೆ ತಿಳಿಸಿದರು. ಜೀವಂತ ಅಂಗದಾನ ಮತ್ತು ಮೃತರ ಅಂಗಾಂಗ ದಾನ ಕುರಿತು ಅವರು ಜಾಗೃತಿ ಮೂಡಿಸಿದರು.

ಅಂಗಾಂಗ ದಾನ ಮಾಡಿದ ದಾನಿಗಳು ಮತ್ತು ಕಿಡ್ನಿ ಕಸಿ ಮಾಡಿಸಿಕೊಂಡ ರೋಗಿಗಳನ್ನು ಸನ್ಮಾನಿಸಲಾಯಿತು. ಯೂರಾಲಜಿ ಮತ್ತು ನೆಫ್ರಾಲಜಿ ವಿಭಾಗಗಳ ವತಿಯಿಂದ ಕಿಡ್ನಿ ದಾನಿಗಳಿಗೆ ಹಾಗೂ ಕಿಡ್ನಿ ಕಸಿ ಮಾಡಿಸಿಕೊಂಡವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.

ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಸಹಾಯಕ ಆರೋಗ್ಯ ವಿಜ್ಞಾನಗಳ ಡೀನ್ ಡಾ. ಎಸ್. ವಿ. ಪಾಟೀಲ, ಹಿರಿಯ ಉಪಪ್ರಾಚಾರ್ಯ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ವೈದ್ಯಕೀಯ ಅಧೀಕ್ಷಕ ಡಾ. ಎಸ್. ವಿ. ಬೆಂಟೂರ ಉಪಸ್ಥಿತರಿದ್ದರು.

ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಪ್ರಾರಂಭವಾದ ಅಂಗಾಂಗ ದಾನ ಜಾಗೃತಿ ಜಾಥಾವನ್ನು ಜಿಲ್ಲಾಧಿಕಾರಿ ಡಾ. ಆನಂದ ಕೆ. ಉದ್ಘಾಟಿಸಿದರು. ಈ ಜಾಥಾ ಆಶ್ರಮ ರಸ್ತೆ, ಶ್ರೀ ಸಿದ್ದೇಶ್ವರ ದೇವಸ್ಥಾನ ಮೂಲಕ ಗಾಂಧಿ ಚೌಕ್ ವರೆಗೆ ನಡೆಯಿತು. ಅಂಗಾಂಗ ದಾನದ ಕುರಿತು ವೈಧ್ಶಕೀಯ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶನ ನೀಡಿದರು.

ಬಿ.ಎಲ್.ಡಿ.ಇ. ಡೀಮ್ಡ್ ವಿವಿ ಸಮಕುಲಾಧಿಪತಿ, ಡಾ. ವೈ. ಎಂ. ಜಯರಾಜ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಡಾ. ತೇಜಸ್ವಿನಿ ವಲ್ಲಭ, ಡಾ. ವಿನಯ ಕುಂದರಗಿ, ಡಾ. ಸಂತೋಷ ಪಾಟೀಲˌ ನೆಪ್ರೊಲಾಜಿಷ್ಟ ಡಾ. ಸಂದೀಪ ಪಾಟೀಲ, ಡಾ. ಬಸವರಾಜ ಸಜ್ಜನˌ ಕಿಡ್ನಿ ಕಸಿ ಆಪ್ತ ಸಮಾಲೋಚಕ ಶಾಂತೇಶ ಸಲಗರೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.