ವಿಜಯಪುರ: ಕೇವಲ 62.8 ಸೆಂಟಿ ಮೀಟರ್ ಉದ್ದವಿರುವ ಜಗತ್ತಿನ ಅತ್ಯಂತ ಕುಬ್ಜ ಮಹಿಳೆ ಎಂಬ ಕೀರ್ತಿಗೆ ಪಾತ್ರವಾಗಿರುವ ಜ್ಯೋತಿ ಆಮಗೆ ‘ಗುಮ್ಮಟನಗರಿ’ ವಿಜಯಪುರಕ್ಕೆ ಶನಿವಾರ ಭೇಟಿ ನೀಡಿದ್ದಾರೆ.

2011 ರಲ್ಲಿ ಗಿನ್ನಿಸ್ ಸಂಸ್ಥೆ ಈ ವಿಶ್ವ ದಾಖಲೆಯನ್ನು ದಾಖಲಿಸಿ ಪ್ರಕಟಿಸಿತ್ತು. ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದ ಇವರು ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಪೊಲೀಸರಿಗೆ ಸಾಥ್ ನೀಡಿ ಮತ್ತು ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಎಲ್ಲ ಅಪೂರ್ವ ಸಾಧನೆ ಮಾಡಿರುವ ಅವರು ವಿಜಯಪುರಕ್ಕೆ ಪ್ರಥಮವಾಗಿ ಭೇಟಿ ನೀಡಿದ್ದಾರೆ.

ವಿಜಯಪುರದ ಐತಿಹಾಸಿಕ ಗೋಳಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸ್ಮಾರಕಗಳ ವೈಭವ ಕಂಡು ಆನಂದಿಸಿದರು. ಭಾನುವಾರ ವಿಜಯಪುರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.