ಚಿಕ್ಕಬಳ್ಳಾಪುರ: ‘ಗುಮ್ಮನಾಯಕನಪಾಳ್ಯ’ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಐತಿಹಾಸಿಕವಾದ ನೆಲೆ. ಇಂತಹ ಮಹತ್ವದ ಐತಿಹಾಸಿಕ ತಾಣ ಅಸ್ತಿತ್ವಕ್ಕೆ ಹೆಣಗುತ್ತಿದೆ. ಅಭಿವೃದ್ಧಿಗೊಳಿಸಿದ್ದರೆ ‘ಮಹತ್ವ’ದ ತಾಣ ಎನ್ನುವ ಹಣೆಪಟ್ಟಿ ಇರುತ್ತಿತ್ತು.

ಬಾಗೇಪಲ್ಲಿ ತಾಲ್ಲೂಕು ಕೇಂದ್ರದಿಂದ ‘ಗುಮ್ಮನಾಯಕನಪಾಳ್ಯ’ 20 ಕಿ.ಮೀ ದೂರದಲ್ಲಿದೆ. 560 ವರ್ಷಗಳ ಕಾಲ ‘ಗುಮ್ಮನಾಯಕನಪಾಳ್ಯ’ವನ್ನು 25 ಪಾಳೇಗಾರರು ಆಳ್ವಿಕೆ ನಡೆಸಿದ್ದಾರೆ. ಅಧ್ಯಯನದ ದೃಷ್ಟಿಯಿಂದ ಈ ಪಾಳ್ಯ ಮಹತ್ವದ ಪಾಳೇಪಟ್ಟು. ಆದರೆ ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಕೋಟೆಗಳು, ದೇಗುಲಗಳು ಅವಸಾನದತ್ತ ಸಾಗುತ್ತಿವೆ.

ಒಂದು ಕಾಲದಲ್ಲಿ ವಧುವಿನಂತೆ ಕಂಗೊಳಿಸಿದ್ದ ಗೊಮ್ಮನಾಯಕನಪಾಳ್ಯದ ಕೋಟೆ ಅಂದ ಚೆಂದ ಕಳೆದುಕೊಂಡಿದೆ. ಕೋಟೆಗೆ ಸಾಗಲು ಸುಗಮವಾದ ರಸ್ತೆಯೂ ಇಲ್ಲ. ಮುಳ್ಳಿನ ಗಿಡಗಳು ಬೆಳೆದಿವೆ. ಕೋಟೆ, ಬುರುಜುಗಳ ನಿರ್ವಹಣೆ ಕೊರತೆಯಿಂದ ಶಿಥಿಲವಾಗಿವೆ.

ಕೋಟೆಯ ಮುಖ್ಯದ್ವಾರದಿಂದ ಮೇಲ್ಭಾಗದವರೆಗೆ ರಸ್ತೆಯೂ ಇಲ್ಲ. ಕೋಟೆಯನ್ನು ಮುಳ್ಳಿನ ಗಿಡಗಳು ತುಂಬಿಕೊಂಡಿವೆ. ಐತಿಹಾಸಿಕ ದೇವಾಲಯಗಳನ್ನೂ ಅಭಿವೃದ್ಧಿಪಡಿಸಿಲ್ಲ. ದೇವಾಲಯ ಪಕ್ಕದಲ್ಲಿ ನಿಧಿಗಳ್ಳರು ಗುಂಡಿಗಳನ್ನು ಅಗೆದು ವಿಕೃತಗೊಳಿಸಿದ್ದಾರೆ.

ಯಾರ ಆಳ್ವಿಕೆ: ಕ್ರಿ.ಶ 1243ರಲ್ಲಿ ಗುಮ್ಮನಾಯಕನಪಾಳ್ಯವನ್ನು ಪಾಳೇಗಾರರು ಆಳ್ವಿಕೆ ನಡೆಸಿದರು. ಈ ಪಾಳೇಗಾರರು ವಿಜಯನಗರ ಅರಸರ ಸಾಮಂತರಾಗಿದ್ದರು. 560 ವರ್ಷಗಳ ಕಾಲ 25 ಮಂದಿ ಪಾಳೇಗಾರರು ಆಳ್ವಿಕೆ ನಡೆಸಿದರು.

ವಿಜಯನಗರ ಅರಸರಿಗೂ, ಪಾಳೇಗಾರರಿಗೆ ನಿಕಟ ಸಂಪರ್ಕವಿತ್ತು. ಬಾಗೇಪಲ್ಲಿಯಲ್ಲಿ ದೊರೆತ ಕ್ರಿ.ಶ 1336ರ ತಾಮ್ರ ಶಾಸನದಲ್ಲಿ ಇತಿಹಾಸದ ಬಗ್ಗೆ ಉಲ್ಲೇಖವಿದೆ.

1338ರಿಂದ 1457 ಗುಮ್ಮನಾಯಕನಪಾಳ್ಯವನ್ನು ಹಿರಿಶಿಂಗಪ್ಪನಾಯಕ ಆಳ್ವಿಕೆ ನಡೆಸಿದರು. ಸುದೀರ್ಘ ಆಡಳಿತ ನಡೆಸಿದ ಪಾಳೇಗಾರರು ಇವರೊಬ್ಬರೇ ಆಗಿದ್ದಾರೆ. ವಿಜಯನಗರ ಚಕ್ರವರ್ತಿ ದೇವರಾಯ ಮತ್ತು ಕಲಬುರ್ಗಿ ಸುಲ್ತಾನರಿಗೂ ನಡೆದ ಯುದ್ಧದಲ್ಲಿ ಗುಮ್ಮನಾಯಕನಪಾಳ್ಯದ ಪಾಳೇಗಾರರು ವಿಜಯನಗರ ಅರಸರಿಗೆ ನೆರವಾಗಿದ್ದರು. ಆ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಜಯ ಸಾಧಿಸಿತು. ವಿಜಯದಿಂದ ಖುಷಿಗೊಂಡ ರಾಯರು ಗಡಿದಂ ಪ್ರದೇಶವನ್ನು ಹಿರಿಶಿಂಗಪ್ಪನಾಯಕರಿಗೆ ಬಳುವಳಿಯಾಗಿ ನೀಡಿದರು.

ಹೀಗೆ 560 ವರ್ಷ ಭವ್ಯತೆಯಿಂದ ಆಡಳಿತ ಕಂಡ ಗುಮ್ಮನಾಯಕನಪಾಳ್ಯ ಈಗ ನಿರ್ಗತಿಕವಾಗಿದೆ.

ಗುಮ್ಮನಾಯಕಪಾಳ್ಯ ಗ್ರಾಮದ ಮುಖ್ಯದ್ವಾರದಲ್ಲಿ ಪಾಳೇಗಾರರು ಶ್ರೀರಾಮದೇವಾಲಯ ನಿರ್ಮಿಸಿದ್ದಾರೆ. ದೇಗುಲದಲ್ಲಿ ಸುಂದರ ಶಿಲ್ಪಕಲೆ ಇದೆ. ದೇವಾಲಯದ ಸುತ್ತ ಮಹಾಭಾರತ, ರಾಮಾಯಣ ದೃಶ್ಯಗಳು, ದೇವಾನುದೇವತೆಗಳು, ಮದಗಜಗಳು, ಪಕ್ಷಿಗಳು ಸೇರಿದಂತೆ ಸುಂದರವಾದ ವಾಸ್ತು ಶಿಲ್ಪದ ಕೆತ್ತನೆ ಇದೆ.

ಗುಮ್ಮನಾಯಕನಪಾಳ್ಯದ ಕೋಟೆ, ದೇವಾಲಯ ಅಭಿವೃದ್ಧಿಪಡಿಸಲು 1994ರಲ್ಲಿ ಅಂದಿನ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದರು. ಮಕ್ಕಳ ಆಟಿಕೆಗಳು, ಉದ್ಯಾನ, ತಪೋಭೂಮಿ ಅಭಿವೃದ್ಧಿಪಡಿಸಿದ್ದರು. ಕೋಟೆಗೆ ದಾರಿ ಮಾಡಿಸಿದ್ದರು.

ಆದರೆ ಆ ನಂತರದಿಂದ ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿಯೂ ಆಗಿಲ್ಲ. ಕನಿಷ್ಠ ನಿರ್ವಹಣೆಯೂ ಇಲ್ಲ. ಮುಖ್ಯದ್ವಾರದ ಮುಂದಿನ ಕಲ್ಯಾಣಿ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಬುರುಜುಗಳು ಉರುಳಿ ಬಿದ್ದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.