ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ಸುಧಾರಣೆಗಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್.ಹಿತೇಂದ್ರ ನೇತೃತ್ವದ ಉನ್ನತ ಮಟ್ಟದ ಸಮಿತಿ ‘ಆರು ಸೂತ್ರ’ಗಳನ್ನು ಶಿಫಾರಸು ಮಾಡಿದೆ.

ಕೆ.ಎಸ್.ಆರ್.ಪಿ ಪೊಲೀಸ್ ಮಹಾನಿರೀಕ್ಷಕ ಸಂದೀಪ್ ಪಾಟೀಲ, ವೈರ್ಲೆಸ್ ವಿಭಾಗದ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಕೆಎಸ್ಆರ್ಪಿ 1ನೇ ಬೆಟಾಲಿಯನ್ ಕಮಾಡೆಂಟ್ ಅಮರನಾಥ್ ರೆಡ್ಡಿ ಹಾಗೂ ಕೇಂದ್ರ ಕಾರಾಗೃಹಗಳಲ್ಲಿ ಇರುವ ಜಿಲ್ಲೆಗಳ ಸಂಬಂಧಪಟ್ಟ ಪೊಲೀಸ್ ಕಮಿಷನರ್ಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಮಿತಿಯ ಸದಸ್ಯರು.

ಸಮಿತಿಯ ಸದಸ್ಯರು ರಾಜ್ಯದ ಎಲ್ಲಾ ಕೇಂದ್ರ ಕಾರಾಗೃಹಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ದೆಹಲಿ, ತಿಹಾರ್, ಚಂಚಲಗುಡ ಕೇಂದ್ರ ಕಾರಾಗೃಹ, ತೆಲಂಗಾಣದ ರಾಜ್ಯಗಳಿಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ.

ರಾಜ್ಯದ ಕಾರಾಗೃಹಗಳಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಕ್ರಮ ಕೈಗೊಳ್ಳುವ ಸಂಬಂಧ ಸಮಿತಿಯ ಎಲ್ಲಾ ಸದಸ್ಯರು ಸಭೆ ನಡೆಸಿ, ಜೈಲಿನೊಳಗೆ ಕಾನೂನು ಬಾಹಿರ ಚುಟವಟಿಕೆಗಳಿಗೆ ಕಡಿವಾಣ, ಭದ್ರತೆ, ಆಡಳಿತಾತ್ಮಕ ಬದಲಾವಣೆ ಮಾಡುವಂತೆ ಶಿಫಾರಸು ಮಾಡಿದ್ದಾರೆ.

ಆರು ಸೂತ್ರಗಳು...

ಮಾನವ ಸಂಪನ್ಮೂಲ

ಮೂಲಸೌಕರ್ಯಗಳ ಸುಧಾರಣೆಗಳು

ತಾಂತ್ರಿಕ ಉಪಕರಣಗಳ ಉನ್ನತೀಕರಣ

ಕಲ್ಯಾಣ ಮತ್ತು ಸುಧಾರಣಾ ಕ್ರಮಗಳು

ಆಡಳಿತಾತ್ಮಕ ಸುಧಾರಣೆಗಳು

ಭದ್ರತಾ ಕ್ರಮಗಳು

ಮಾನವ ಸಂಪನ್ಮೂಲ:

ರಾಜ್ಯದ ಕಾರಾಗೃಹಗಳಲ್ಲಿ ಸಿಬ್ಬಂದಿಯ ಕೊರತೆ ಇದೆ. ಸುಮಾರು ಶೇಕಡ 40–47ರಷ್ಟು ಖಾಲಿ ಹುದ್ದೆಗಳಿವೆ. ಇದರ ಪರಿಣಾಮ ಕೈದಿ–ಸಿಬ್ಬಂದಿ ಅನುಪಾತವು ಮಾದರಿ ಜೈಲು ಕೈಪಿಡಿಯಲ್ಲಿ ನಮೂದಿಸಿರುವಂತೆ (1:6) ಇಲ್ಲದಿರುವುದು ಕಂಡು ಬಂದಿದೆ.

ಉದಾಹರಣೆಗೆ ಪರಪ್ಪನ ಅಗ್ರಹಾರ ಕಾರಾಗೃಹವು 4,834 ಕೈದಿಗಳನ್ನು ಹೊಂದಿದ್ದು, ಪ್ರಸ್ತುತ 571 ಸಿಬ್ಬಂದಿ ಇದ್ದಾರೆ. 388 ಹುದ್ದೆ ಖಾಲಿ ಇದೆ. ಕಾರಾಗೃಹದ ಸುರಕ್ಷತೆ, ಭದ್ರತೆ ಮತ್ತು ಪರಿಣಾಮಕಾರಿ ಜೈಲು ಆಡಳಿತವನ್ನು ಖಚಿತ ಪಡಿಸಿಕೊಳ್ಳಲು ಕಾರಾಗೃಹಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

ದೀರ್ಘಾವಧಿ ಅಧಿಕಾರಿಗಳು ಮತ್ತು ಸಿಬ್ಬಂದಿ: ದೀರ್ಘಾವಧಿಯಿಂದ ಕರ್ತವ್ಯ ನಿರ್ಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದು, ಅವರನ್ನು ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡಬೇಕು. ಅಧಿಕಾರಿ, ಸಿಬ್ಬಂದಿಯನ್ನು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಮುಂದುವರಿಯಲು ಅವಕಾಶ ನೀಡಬಾರದು. ಕನಿಷ್ಠ ಎರಡು ವರ್ಷ ಕೂಲಿಂಗ್ ಪಿರಿಯಡ್ ಇರಬೇಕು.

ಆಧುನಿಕ ತರಬೇತಿ: ಕಾರಾಗೃಹ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರತಿವರ್ಷ ಪುನರ್ಮನನ ತರಬೇತಿಯನ್ನು ಕಡ್ಡಾಯವಾಗಿ ಆಯೋಜಿಸಬೇಕು. ತರಬೇತಿ ಅವಧಿಯಲ್ಲಿ ಅದರ ವೃತ್ತಿಪರತೆ ಹೆಚ್ಚಿಸಲು ನವೀನ ಮಾದರಿಯ ಭದ್ರತಾ ಉಪಕರಣಗಳ ಬಗ್ಗೆ ಹಾಗೂ ಆಡಳಿತಾತ್ಮಕ ವಿಷಯಗಳ ಬಗ್ಗೆ ಹೆಚ್ಚಿನ ತರಬೇತಿ ನೀಡಬೇಕು.

ಮೂಲಸೌಕರ್ಯಗಳ ಸುಧಾರಣೆಗಳು

ಕಡ್ಡಾಯ ಬಫರ್ಝೋನ್ : ಚಂಚಲಗುಡ ಕಾರಾಗೃಹ ಮತ್ತು ತಿಹಾರ್ ಕಾರಾಗೃಹಗಳಲ್ಲಿ ಕಂಡುಬರುವಂತೆ ಕಾರಾಗೃಹಗಳ ಸುತ್ತಲಿನ ಬಫರ್ ಝೋನ್ (ನ್ಯೋ ಮ್ಯಾನ್ ಲ್ಯಾಂಡ್) ಬಳ್ಳಾರಿ ಮೈಸೂರು ಹಾಗೂ ಇತರೆ ಹಲವಾರು ಕಾರಾಗೃಹಗಳಲ್ಲಿ ಇಲ್ಲದಿರುವುದನ್ನು ಗಮನಿಸಲಾಗಿದೆ. ಆದ್ದರಿಂದ, ರಾಜ್ಯದ ಎಲ್ಲಾ ಕಾರಾಗೃಹಗಳಿಗೆ ಬಫರ್ ಝೋನ್ ಕಡ್ಡಾಯಗೊಳಿಸಲಾಗಿದೆ.

ಎ. ಸಣ್ಣಕಣ್ಣಿನ ಬಲೆ ಅಳವಡಿಕೆ ಹಾಗೂ ಕಾರಾಗೃಹದ ಪರಿಧಿಯ ಭದ್ರತೆ: ಕಾರಾಗೃಹದ ಹೊರಗಡೆಯಿಂದ ನಿಷೇಧಿತ ವಸ್ತುಗಳನ್ನು ಒಳಕ್ಕೆ ಎಸೆಯುವುದನ್ನು ತಡೆಯಲು ಕಾಂಪೌಂಡ್ಗೆ ಹೊಂದಿಕೊಂಡಂತೆ ಕಾರಾಗೃಹದ ಆವರಣದಲ್ಲಿ ಸಣ್ಣಕಣ್ಣಿನ ಬಲೆಯನ್ನು ಅಳವಡಿಸಬೇಕು. ಕಾಂಪೌಂಡ್ ಸುತ್ತಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು.

ಶಿವಮೊಗ್ಗ ಕಾರಾಗೃಹವು 32 ಅಡಿಗಳಷ್ಟು ಎತ್ತರದ ಸುತ್ತುಗೋಡೆ ಹೊಂದಿದ್ದು, ಇತರೆ ಕೇಂದ್ರ ಕಾರಾಗೃಹಗಳು 20 ಅಡಿಗಳಿಗಿಂತ ಕಡಿಮೆ ಎತ್ತರದ ಸುತ್ತುವರಿದ ಗೋಡೆ (ಕಾಂಪೌಂಡ್) ಗಳನ್ನು ಹೊಂದಿವೆ. ಇದರಿಂದ ಕಾರಾಗೃಹ ಆವರಣದೊಳಗೆ ಹೊರಗಿನಿಂದ ನಿಷೇಧಿತ ವಸ್ತುಗಳನ್ನು ಎಸೆಯುವ ಅವಕಾಶವಿರುತ್ತದೆ. ಆದ್ದರಿಂದ, ಎಲ್ಲಾ ಕಾರಾಗೃಹಗಳ ಸುತ್ತುಗೋಡೆಗಳ (ಕಾಂಪೌಂಡ್) ಎತ್ತರವನ್ನು ಕನಿಷ್ಠ 20 ಅಡಿಗಳಿಗೆ ಹೆಚ್ಚಿಸಬೇಕು. ಎಲ್ಲಾ ಕಾರಾಗೃಹಗಳ ಕಾಂಪೌಂಡ್ ಗೋಡೆಗಳ ಮೇಲ್ಬಾಗದಲ್ಲಿ ಬಳ್ಳಾರಿ ಮತ್ತು ಶಿವಮೊಗ್ಗ ಕಾರಾಗೃಹದ ಮಾದರಿಯ ರೀತಿಯಲ್ಲಿ ಸೋಲಾರ್ ಬೇಲಿ ಅಳವಡಿಸುವ ಅವಶ್ಯಕತೆ ಇದೆ.

ವೀಕ್ಷಣಾ ಗೋಪುರ: ಹಲವಾರು ಕಾರಾಗೃಹಗಳಲ್ಲಿ ಪ್ರಸ್ತುತ ಇರುವ ವೀಕ್ಷಣಾ ಗೋಪುರಗಳು ಅಗತ್ಯಕ್ಕಿಂತ ಕಡಿಮೆ ಎತ್ತರ ಇರುವುದರಿಂದ ವೀಕ್ಷಣಾ ಗೋಪುರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರಾಗೃಹದ ಎಲ್ಲಾ ಸ್ಥಳಗಳನ್ನು ಕಣ್ಗಾವಲಿನಲ್ಲಿ ಇಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ವೀಕ್ಷಣಾ ಗೋಪುರಗಳ ಎತ್ತರವನ್ನು ಅಗತ್ಯಕ್ಕೆ ತಕ್ಕಂತೆ ಎತ್ತರಿಸುವ ಅವಶ್ಯಕತೆ ಇರುತ್ತದೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಪೂರ್ಣ: ಶಿವಮೊಗ್ಗ, ಮಂಗಳೂರು, ವಿಜಯಪುರ ಮತ್ತು ಬೀದರ್ನಲ್ಲಿ ಹೊಸ ಬ್ಯಾರಕ್ಗಳ ನಿರ್ಮಾಣ ಕಾರ್ಯ ಬಾಕಿ ಉಳಿದಿರುವುದನ್ನು ಸಮಿತಿಯು ಗಮನಿಸಿದೆ. ಪ್ರಸ್ತುತ ಬ್ಯಾರಕ್ಗಳಲ್ಲಿ ಹೆಚ್ಚುವರಿ ಬಂದಿಗಳಿಂದಾಗಿ ಉಂಟಾಗಿರುವ ಸ್ಥಳದ ಅಭಾವವನ್ನು ಪರಿಹರಿಸಲು ಈ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವ ಅವಶ್ಯಕತೆ ಇರುತ್ತದೆ ಎಂದು ತಿಳಿಸಿದೆ.

ಹೊಸ ಕಾರಾಗೃಹಗಳು: ಕಾರಾಗೃಹ ಇಲಾಖೆಯ ಅಗತ್ಯಗಳನ್ನು ಪೂರೈಸಲು ಉದ್ದೇಶಿತ ಹೊಸ ಕಾರಾಗೃಹಗಳ ನಿರ್ಮಾಣ ಮತ್ತು ಕಾರ್ಯಾರಂಭವನ್ನು ತ್ವರಿತಗೊಳಿಸಿ ಆದಷ್ಟು ಬೇಗ ಪೂರ್ಣಗೊಳಿಸಲು ಶಿಫಾರಸು ಮಾಡಲಾಗಿದೆ.

ತಾಂತ್ರಿಕ ಉಪಕರಣಗಳ ಉನ್ನತೀಕರಣ:

ಬ್ಯಾರಕ್ಗಳಲ್ಲಿ ಕಣ್ಗಾವಲು: ತಿಹಾರ್ ಜೈಲಿನಲ್ಲಿ 16 ಸಾವಿರ ಕೈದಿಗಳಿದ್ದು, 8,600 ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ. ಕೈದಿಗಳ ಸಾಮರ್ಥ್ಯದ ಶೇಕಡ 53.75 ಒಳಗೊಂಡಿದೆ. ಪರಪ್ಪನ ಅಗ್ರಹಾರದಲ್ಲಿ 5 ಸಾವಿರ ಕೈದಿಗಳಿಗೆ 332 ಕ್ಯಾಮೆರಾಗಳಿದ್ದು, ತನ್ನ ಸಾಮರ್ಥ್ಯ ಶೇಕಡ 6.64 ಒಳಗೊಂಡಿದೆ. ಜೈಲಿನ ಬ್ಯಾರಕ್ಗಳ ಒಳಗೆ ಸಿಸಿಟಿವಿ ಕ್ಯಾಮೆರಾಗಳಿಲ್ಲ.

ತಿಹಾರ್ ಜೈಲು ಮತ್ತು ಚಂಚಲಗುಡ ಜೈಲಿನಲ್ಲಿ ಬ್ಯಾರಕ್ಗಳ ಒಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಮೇಲ್ವಿಚಾರಣೆ ಹಲವಾರು ವರ್ಷಗಳಿಂದ ಜಾರಿಯಲ್ಲಿದೆ. ಆದ್ದರಿಂದ, ಎಲ್ಲ ಜೈಲುಗಳ ಬ್ಯಾರಕ್ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಶೌಚಗೃಹ ಪ್ರದೇಶದಲ್ಲಿ ಧ್ವನಿಗ್ರಹಣ ಸಾಧನ ಅಳವಡಿಸಬಹುದು. ಕ್ಯಾಮೆರಾ ದುರಸ್ತಿಗೊಂಡರೆ, 24 ಗಂಟೆಗಳ ಒಳಗೆ ಸರಿಪಡಿಸಬೇಕು. ದಿನದ 24 ಗಂಟೆ ಮೇಲ್ವಿಚಾರಣೆಗೆ ಕೇಂದ್ರೀಕೃತ ನಿಯಂತ್ರಣ ಕೊಠಡಿ ಸ್ಥಾಪಿಸಬೇಕೆಂದು ಶಿಫಾರಸು ಮಾಡಲಾಗಿದೆ.

ಕಾವಲು ಗೋಪುರ: ಅನೇಕ ಕಾರಾಗೃಹಗಳಲ್ಲಿ 4 ಮೂಲೆಗಳಲ್ಲಿ ಇರುವ ಕಾವಲು ಗೋಪುರದ ಎತ್ತರವು ತೀರಾ ಕಡಿಮೆ ಇದ್ದು, ಹೆಚ್ಚಿಸಬೇಕಿದೆ. ಶಿವಮೊಗ್ಗ, ಮಂಗಳೂರು, ವಿಜಯಪುರ ಮತ್ತು ಬೀದರ್ನಲ್ಲಿ ಹೊಸ ಬ್ಯಾರಕ್ಗಳ ನಿರ್ಮಾಣ ಸೇರಿ ಬಾಕಿ ಇರುವ ಕಾಮಗಾರಿಗಳನ್ನು ಮುಗಿಸಬೇಕು. ಹೊಸ ಜೈಲುಗಳ ನಿರ್ಮಾಣ ಮತ್ತು ಕಾರ್ಯಾರಂಭ ತ್ವರಿತಗೊಳಿಸಿ ಶೀಘ್ರವೇ ಪೂರ್ಣ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ.

ಮೊಬೈಲ್ಗೆ ಜಾಮರ್: ಅಕ್ರಮವಾಗಿ ಮೊಬೈಲ್ ಬಳವುಸುವುದನ್ನು ತಡೆಗಟ್ಟಲು 5–ಜಿ ಸಿಗ್ನಲ್ಗಳನ್ನು ನಿರ್ಬಂಧಿಸುವ ಸಾಮರ್ಥ್ಯ ಹೊಂದಿರುವ ಪೋರ್ಟಬಲ್ ಜಾಮರ್ ಗಳನ್ನು ಅಳವಡಿಸಬೇಕು. ಇದರಿಂದ ದೇಶದ ಭದ್ರತೆ ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಬಹುದು ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.