ಅವರು, ದಿನದ 24 ಗಂಟೆಯೂ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಬದುಕು ಮುಡಿಪಾಗಿಟ್ಟವರು. ಮನೆಯಿಂದ ಹೋದರೆ, ವಾಪಸು ಬರಲು ನಿಗದಿತ ಸಮಯವಿಲ್ಲ. ಪತ್ನಿ ಹಾಗೂ ಮಕ್ಕಳ ಜೊತೆಗೆಯೂ ಸಮಯ ನೀಡದಷ್ಟು ಕೆಲಸದ ಒತ್ತಡ ಅವರದ್ದು. ಅಪರಾಧಿಗಳ ಜೊತೆಯಲ್ಲಿ ಸೆಣಸಾಡಿ, ನೊಂದವರಿಗೆ ನ್ಯಾಯ ಕೊಡಿಸಲು ಶ್ರಮಿಸುತ್ತಿರುವವರು. ಅವರೇ ಹೆಮ್ಮೆಯ ಪೊಲೀಸರು. ಇಂಥ ಪೊಲೀಸರ ಮಕ್ಕಳ ಬೇಸಿಗೆ ರಜೆಯನ್ನು ಖುಷಿಯಾಗಿರಿಸಲು ಜಿಲ್ಲಾ ಪೊಲೀಸ್ ಇಲಾಖೆಯು ಬೇಸಿಗೆ ಶಿಬಿರ ಹಮ್ಮಿಕೊಂಡಿದೆ. ಈ ಮೂಲಕ ಪೊಲೀಸ್ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿದೆ.
.PV Web Exclusive: ಕೊಡಗಿನಲ್ಲಿ ಈಗ ಬೇಸಿಗೆಯ ಬೆಡಗು...!.
ಜಿಲ್ಲಾ ಕೇಂದ್ರ ಹಾವೇರಿಯನ್ನು ಒಳಗೊಂಡು 23 ಪೊಲೀಸ್ ಠಾಣೆಗಳು ಜಿಲ್ಲೆಯಲ್ಲಿವೆ. ಅದರ ಜೊತೆಯಲ್ಲಿಯೇ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಡಿಸಿಆರ್ಬಿ ಸೇರಿದಂತೆ ಹಲವು ವಿಭಾಗಗಳಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಬಹುತೇಕ ಪೊಲೀಸರು, ಇಲಾಖೆಯ ಕ್ವಾರ್ಟರ್ಸ್ಗಳಲ್ಲಿ ವಾಸವಿದ್ದಾರೆ. ಅಂಥ ಪೊಲೀಸರ ಮಕ್ಕಳಿಗಾಗಿ, ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ.

ಬೇಸಿಗೆ ರಜೆ ಶುರುವಾಗುತ್ತಿ್ದ್ದಂತೆ ಶಿಬಿರಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು. ಸದಾ ಕೆಲಸದ ಒತ್ತಡದಲ್ಲಿರುತ್ತಿದ್ದ ಪೊಲೀಸರು, ತಮ್ಮ ಮಕ್ಕಳನ್ನು ಖುಷಿಯಿಂದಲೇ ಶಿಬಿರಕ್ಕೆ ಕಳುಹಿಸಿದ್ದಾರೆ. ಜಿಲ್ಲಾ ಪೊಲೀಸ್ ಎಸ್.ಪಿ. ಯಶೋಧಾ ವಂಟಗೋಡಿ ಹಾಗೂ ಹೆಚ್ಚುವರಿ ಪೊಲೀಸ್ ಎಸ್.ಪಿ. ಎಲ್.ವೈ. ಶಿರಕೋಳ ಅವರು ಆಸಕ್ತಿ ವಹಿಸಿ ಶಿಬಿರ ಸಂಘಟನೆ ಮಾಡಿದ್ದಾರೆ.

‘ಮಕ್ಕಳು ಈ ದೇಶದ ಭವಿಷ್ಯ’ ಎಂಬ ಮಾತಿನಂತೆ ಪೊಲೀಸರ ಮಕ್ಕಳಿಗೆ, ಶಿಬಿರದಲ್ಲಿ ಎಲ್ಲ ರೀತಿಯ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಅಗತ್ಯವಿರುವ ವೇದಿಕೆಯನ್ನೂ ಕಲ್ಪಿಸಲಾಗಿದೆ.

ಸಾಂಸ್ಕೃತಿಕ, ಚಿತ್ರಕಲೆ, ನೃತ್ಯ, ಪುರಾತನ ಕಲೆಗಳು, ಗ್ರಾಮೀಣ ಕ್ರೀಡೆಗಳು, ಜಾನಪದ ಕಲೆ ಸೇರಿದಂತೆ ಎಲ್ಲ ಪ್ರಕಾರದಲ್ಲೂ ಮಕ್ಕಳಿಗೆ ತಿಳಿಸಿಕೊಡಲಾಗುತ್ತಿದೆ. ಆಯಾ ಕ್ಷೇತ್ರದಲ್ಲಿ ಹೆಸರು ಮಾಡಿದ ವ್ಯಕ್ತಿಗಳನ್ನು ಆಹ್ವಾನಿಸಿ, ಮಕ್ಕಳ ಜೊತೆ ಸಂವಾದ ನಡೆಸಲಾಗುತ್ತಿದೆ. ಪರಿಣಿತರ ಭಾಷಣಗಳನ್ನು ಕೇಳುತ್ತಿರುವ ಮಕ್ಕಳು, ಮರು ಪ್ರಶ್ನೆಗಳನ್ನು ಕೇಳಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದಾರೆ.

‘ನಮ್ಮಪ್ಪ ಪೊಲೀಸ್’ ಹಾಗೂ ‘ನಮ್ಮವ್ವ ಪೊಲೀಸ್’ ಎನ್ನುತ್ತಲೇ ಕೆಲ ಮಕ್ಕಳು, ಪರಿಣಿತರ ಮೊಗದಲ್ಲೂ ನಗು ತರಿಸುತ್ತಿದ್ದಾರೆ. ಪೊಲೀಸ್ ವಾತಾವರಣದಲ್ಲಿ ಬೆಳೆದಿರುವ ಹಲವು ಮಕ್ಕಳು, ‘ನಾವು ಪೊಲೀಸ್ ಆಗುವುದಿಲ್ಲ. ಆಕಸ್ಮಾತ್ ಆದರೆ, ರಾತ್ರಿಯೆಲ್ಲ ಕೆಲಸ ಮಾಡಬೇಕಾಗುತ್ತದೆ’ ಎಂದು ಕೆಲ ಮಕ್ಕಳು ಹೇಳುತ್ತಿರುವ ಮಾತುಗಳು, ವಾಸ್ತವ ಸಂಗತಿ ತೆರೆದಿಡುತ್ತಿದೆ.
.PV Web Exclusive: ‘ಸಿಂಹ ಘರ್ಜನೆ’ಗೆ ಅಣಿಯಾದ ಕಲಬುರಗಿ.
ಮಕ್ಕಳಲ್ಲಿರುವ ಚಿತ್ರಕಲೆ ಪ್ರತಿಭೆಯನ್ನು ಅನಾವರಣಗೊಳಿಸಲು ಶಿಬಿರದಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಯಿತು. ಚಿತ್ರಕಲೆಯ ಪರಿಣಿತರು, ಮಕ್ಕಳಿಗೆ ಪಾಠ ಮಾಡಿದರು. ಇದರ ಜೊತೆಯಲ್ಲಿಯೇ, ಆಸಕ್ತಿಯುತ ಚಿತ್ರಕಲೆಗಳನ್ನು ಬಿಡಿಸುವಂತೆ ಮಕ್ಕಳಿಗೆ ತಿಳಿಸಲಾಗಿತ್ತು. ಪರಿಸರ, ಗುಡ್ಡ, ಬೆಟ್ಟ, ಶಾಲಾ.... ಹೀಗೆ ವಿವಿಧ ವಿಷಯಗಳನ್ನು ಇಟ್ಟುಕೊಂಡು ಮಕ್ಕಳು ಚಿತ್ರ ಬಿಡಿಸಿದರು. ಅದಕ್ಕೆ ತಕ್ಕಂತೆ ಬಣ್ಣಗಳನ್ನು ಹಚ್ಚಿ, ಚಿತ್ರವನ್ನು ರಾರಾಜಿಸುವಂತೆ ಮಾಡಿದರು.

ಚಿತ್ರಕಲೆಗಳನ್ನು ವೀಕ್ಷಿಸಿದ ಎಸ್.ಪಿ. ಯಶೋಧಾ ವಂಟಗೋಡಿ, ಮಕ್ಕಳ ಪ್ರತಿಭೆಯನ್ನು ಕೊಂಡಾಡಿದರು. ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಯಲ್ಲಿ, ವೈಯಕ್ತಿಕ ಪ್ರತಿಭೆಯನ್ನೂ ಮಕ್ಕಳು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದು ಸಲಹೆ ನೀಡಿದರು.

ಮಕ್ಕಳಲ್ಲಿರುವ ಸಂಗೀತ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಸಂಗೀತ ಕಾರ್ಯಕ್ರಮಗಳನ್ನೂ ನಡೆಸಲಾಯಿತು. ಹಾರ್ಮೋನಿಯಂ, ತಬಲಾ ಹಾಗೂ ಇತರೆ ಸಂಗೀತ ಪರಿಕರಗಳನ್ನು ಮಕ್ಕಳಿಗೆ ತೋರಿಸಿ, ಅದರ ಮಹತ್ವವನ್ನು ತಿಳಿಸಲಾಯಿತು.

ಕಾನೂನು ಪಾಲನೆಯಲ್ಲಿಯೇ ಸದಾ ತೊಡಗಿರುವ ಪೊಲೀಸರ ಮಕ್ಕಳಿಗೂ ಕಾನೂನಿನ ಪಾಠ ಮಾಡಲಾಯಿತು. ಏನು ಮಾಡಬೇಕು ? ಏನು ಮಾಡಬಾರದು ? ಎಂಬುದರ ಬಗ್ಗೆ ತಿಳಿವಳಿಕೆ ಮೂಡಿಸಲಾಯಿತು.
.PV Web Exclusive| ಚಿಕ್ಕಮಗಳೂರು: ಹಳ್ಳ ಹಿಡಿಯಿತೇ ಬೆರಟಿಕೆರೆ ನೀರಾವರಿ ಯೋಜನೆ.
ಜಿಲ್ಲಾ ಎಸ್.ಪಿ. ಕಚೇರಿಗೆ ವಿಶೇಷ ಭೇಟಿ ನೀಡಿದ್ದ ಮಕ್ಕಳು, ಅಲ್ಲಿಯ ಕೆಲಸದ ವೈಖರಿಯನ್ನು ತಿಳಿದುಕೊಂಡರು. ಅವರ ಜೊತೆಗಿದ್ದ ಎಸ್.ಪಿ., ತಾವು ಹೇಗೆ ಕೆಲಸ ಮಾಡುತ್ತೇವೆ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಮಕ್ಕಳ ಪ್ರತಿಭೆ, ಶಿಸ್ತು, ಸೃಜನಶೀಲತೆ ಹಾಗೂ ಮನರಂಜನೆಯನ್ನು ಉತ್ತೇಜಿಸುವ ಉದ್ದೇಶದಿಂದ ಹಾವೇರಿ ಜಿಲ್ಲಾ ಪೊಲೀಸ್ ಎಸ್.ಪಿ. ಕಚೇರಿಯಲ್ಲಿ ಆಯೋಜಿಲಾಗಿದ್ದ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿತು.

‘ಸದಾ ಕೆಲಸದ ಒತ್ತಡದಲ್ಲಿರುವ ಪೊಲೀಸರ ಮಕ್ಕಳಿಗಾಗಿ ಆಯೋಜಿಸಿದ್ದ ಶಿಬಿರವು ಯಶಸ್ವಿಯಾಗಿ ನಡೆಯಿತು. ಶಿಬಿರದ ಮೂಲಕ ಮಕ್ಕಳ ಪ್ರತಿಭೆ ಅನಾವರಣವಾಯಿತು. ತಂದೆ–ತಾಯಿಗೂ, ಮಕ್ಕಳ ಪ್ರತಿಭೆ ತಿಳಿಯಿತು’ ಎಂದು ಎಸ್.ಪಿ. ಯಶೋಧಾ ವಂಟಗೋಡಿ ತಿಳಿಸಿದರು.

‘ಮಕ್ಕಳನ್ನು ರಜೆಯಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕೆಂಬ ಆಸೆ ಪೊಲೀಸರಿಗೆ ಇರುತ್ತದೆ. ಆದರೆ, ಕೆಲಸದ ಒತ್ತಡದಿಂದ ರಜೆ ಸಿಗುವುದಿಲ್ಲ. ಶಿಬಿರವೂ ಮಕ್ಕಳಿಗೆ ಪ್ರವಾಸದ ರೀತಿಯಲ್ಲಿಯೇ ಆಯೋಜನೆ ಮಾಡಲಾಗಿತ್ತು’ ಎಂದರು.
.PV Web Exclusive: ಸುಧಾರಿಸದ ‘ಛೋಟಾ ಮುಂಬೈ’; ಸೊರಗಿದ ‘ಸಾಹಿತ್ಯದ ತವರೂರು’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.