ಪಾಂಡವಪುರ (ಮಂಡ್ಯ ಜಿಲ್ಲೆ): ಘಮಘಮಿಸುತ್ತಾ ಬಾಯಿಯಲ್ಲಿ ನೀರೂರಿಸುವ ಹಲಸಿನ ಹಣ್ಣು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ!. ಹಲಸಿನ ಹಣ್ಣಿನ ತೊಳೆಯನ್ನು ಬಾಯಿಗೆ ಇಟ್ಟರೆ ಸಾಕು, ಇನ್ನಷ್ಟು ಮತ್ತಷ್ಟು ತಿನ್ನಬೇಕೆನಿಸುತ್ತದೆ.

‘ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು’ ಎಂಬ ಮಾತು ಅಕ್ಷರಶಃ ನಿಜ. ಹೊಟ್ಟೆ ಹಸಿದಾಗ ಹಲಸಿನ ಹಣ್ಣಿನ ತೊಳೆ ತಿನ್ನುತ್ತಿದ್ದರೆ ಹಸಿವು ಇಂಗಿತೋ ಇಲ್ಲವೋ ಎಂದು ಗೊತ್ತಾಗುವುದೇ ಇಲ್ಲ. ತಿನ್ನುತ್ತಲೇ ಇರಬೇಕೆನಿಸುತ್ತದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಸರ್ಕಲ್ ಹಲಸಿನ ಹಣ್ಣಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಸಮೀಪವಿರುವ ಕಾಡೇನಹಳ್ಳಿ, ಕದಲಗೆರೆ, ಜಕ್ಕನಹಳ್ಳಿ ಭಾಗಗಳಲ್ಲಿ ಹಲಸಿನ ಮರಗಳು ಹೆಚ್ಚಾಗಿವೆ.

ಜಕ್ಕನಹಳ್ಳಿ ಸರ್ಕಲ್ ಎಂದರೆ ಸಾಕು ಅದು ಹಲಸಿನ ಹಣ್ಣಿನ ಮಾರುಕಟ್ಟೆ. ರೈತರು ಮತ್ತು ಮಾರಾಟಗಾರರು ಸರ್ಕಲ್ನ ರಸ್ತೆ ಬದಿಯಲ್ಲಿಯೇ ಸಣ್ಣ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಿದ್ದಾರೆ. ಜಕ್ಕನಹಳ್ಳಿ ಸರ್ಕಲ್ ಐತಿಹಾಸಿಕ ಧಾರ್ಮಿಕ, ಪ್ರವಾಸಿ ತಾಣವಾದ ಮೇಲುಕೋಟೆಗೆ ಸಮೀಪವಿದೆ.

ಮೈಸೂರು, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ತುಮಕೂರು ಸೇರಿದಂತೆ ವಿವಿಧೆಡೆಗೆ ಈ ಜಕ್ಕನಹಳ್ಳಿ ಸರ್ಕಲ್ ಮೂಲಕ ಹಾದು ಹೋಗಬೇಕಾಗುತ್ತದೆ. ಪ್ರಯಾಣಿಕರು, ಪ್ರವಾಸಿಗರು ಹಾಗೂ ಸಾರ್ವಜನಿಕರು ಜಕ್ಕನಹಳ್ಳಿ ಸರ್ಕಲ್ನಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ಹಲಸಿನ ಹಣ್ಣಿನ ತೊಳೆ ತಿಂದು ಹಾಗೂ ಕೊಂಡು ಹೋಗದೇ ಇರರು.

ಇಲ್ಲಿನ ಹಲಸಿನ ಹಣ್ಣು ಸವಿದವರಿಗೆ ಜಕ್ಕನಳ್ಳಿ ಸರ್ಕಲ್ ಬಂದಾಗ ಹಲಸಿನ ಹಣ್ಣಿನ ನೆನಪಾಗದೇ ಇರದು. ಹಲಸಿನ ಹಣ್ಣು ತಿಂದು ಚಪ್ಪರಿಸುತ್ತಾ ಮತ್ತೆ ಪ್ರಯಾಣ ಬೆಳೆಸುತ್ತೇವೆ ಎನ್ನುತ್ತಾರೆ ಪ್ರಯಾಣಿಕರಾದ ಚಿತ್ರದುರ್ಗದ ಶ್ವೇತಾ, ಚೈತ್ರಾ, ದಾವಣಗೆರೆಯ ನಾಗಪ್ಪ.

‘ಅರೆ ನೀರಾವರಿಯ ಮಳೆಯಾಶ್ರಿತ ಪ್ರದೇಶವಾದ ನಮ್ಮ ಭಾಗಗಳಲ್ಲಿ ಹಲಸಿನ ಮರಗಳು ಸಾಕಷ್ಟಿವೆ. ವರ್ಷದ 8–9 ತಿಂಗಳು ಹಲಸಿನ ಹಣ್ಣನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದೇವೆ. ನಮಗೆ ಬೇಸಾಯಕ್ಕಿಂತ ಹಲಸಿನ ವ್ಯಾಪಾರವೇ ಹೆಚ್ಚು ಆದಾಯ ತಂದುಕೊಡುತ್ತಿದೆ’ ಎನ್ನುತ್ತಾರೆ ಜಕ್ಕನಹಳ್ಳಿ ಸರ್ಕಲ್ನ ಜವರೇಗೌಡ, ಶೈಲಜಾ ಗಂಗಾಧರ್, ಚಂದ್ರು ಕಾಡೇನಹಳ್ಳಿ.

ತರಹೇವಾರಿ ತಳಿ:

ಹಲಸಿನ ಹಣ್ಣಿನಲ್ಲಿ ಚಂದ್ರ, ಕೆಂಪು, ಬಿಳಿ ಹಣ್ಣುಗಳಿವೆ. ಚಂದ್ರ ಹಲಸಿನ ಹಣ್ಣಿನ ತೊಳೆ ಕೆಂಪು ಕೆಂಪಾಗಿದ್ದು, ತುಂಬ ಆಕರ್ಷಕವಾಗಿರುತ್ತವೆ. ತುಂಬಾ ಸಿಹಿ, ಕೆಂಪು ಮತ್ತು ಬಿಳಿಯ ಹಣ್ಣಿನ ತೊಳೆಯು ಸಿಹಿಯೇ, ಆದರೆ ಚಂದ್ರ ಹಲಸಿನ ಹಣ್ಣಿನ ಬಣ್ಣಕ್ಕೆ ಮತ್ತು ಸಿಹಿಗೆ ಜನ ಮಾರು ಹೋಗಿಬಿಡುತ್ತಾರೆ.

ಹಲಸಿನ ಹಣ್ಣಿನ ರಸಾಯನವಂತೂ ಚಪ್ಪರಿ ಚಪ್ಪರಿಸಿ ಜನ ತಿನ್ನುತ್ತಾರೆ. ಹಲಸಿನ ತೊಳೆ, ಬಾಳೆ ಹಣ್ಣು, ಬೆಲ್ಲ, ಕೊಬ್ಬರಿ ತುರಿ ಅಥವಾ ತೆಂಗಿನ ಕಾಯಿ ತುರಿ, ಜೇನು ತುಪ್ಪ, ಗೋಡಂಬಿ, ಖರ್ಜೂರ ಹಾಕಿ ರಸಾಯನ ಮಾಡಿದರೆ, ಇದರ ಮುಂದೆ ಯಾವ ತಿಂಡಿ, ಮೃಷ್ಟಾನ್ನವೂ ಬೇಡ ಎನಿಸುತ್ತದೆ. ಸವಿದವನೇ ಬಲ್ಲ, ಹಲಸಿನ ಹಣ್ಣಿನ ರಸಾಯನ ರುಚಿಯನ್ನು ಎಂಬಂತಿರುತ್ತದೆ.

ಚಳಿಗಾಲದ ಡಿಸೆಂಬರ್, ಜನವರಿ, ಫೆಬ್ರುವರಿಯಿಂದ ಪ್ರಾರಂಭವಾಗುವ ಹಲಸಿನ ಹಣ್ಣು, ಬೇಸಿಗೆ ಕಾಲದ ಮಾರ್ಚ್, ಏಪ್ರಿಲ್, ಮೇ ಹಾಗೂ ಮಳೆಗಾಲದ ಜೂನ್, ಜುಲೈ, ಆಗಸ್ಟ್ವರೆಗೂ ಹಣ್ಣಿನ ಫಲವಿರುತ್ತದೆ.

ಹಲಸಿನ ಕಾಯಿಯ ಪಲ್ಯ ತುಂಬ ಚಂದ. ಹಲಸಿನ ಕಾಯಿಯನ್ನು ಸಣ್ಣ ಸಣ್ಣ ಚೂರು ಚೂರು ಮಾಡಿ, ಅದಕ್ಕೆ ಹುರುಳಿ, ಉಚ್ಚಳ್ಳು, ಒಣ ಅವರೆಕಾಳು ಹಾಕಿ ಪಲ್ಯ ಮಾಡುತ್ತಾರೆ, ಜತೆಗೆ ಹಲಸಿನ ಕಾಯಿಯನ್ನು ಸಾಂಬಾರಿಗೂ ಬಳಸುತ್ತಾರೆ. ಹಲಸಿನ ಹಣ್ಣಿನ ಬೀಜದ ಸಾಂಬಾರ್ ರುಚಿಯೋ ರುಚಿ. ಇವೆಲ್ಲಾ ಗ್ರಾಮೀಣ ಸೊಗಡಿನ ಊಟವಾಗಿವೆ.

ಹಲಸಿನ ಚಿಪ್ಸ್:

ಮಲೆನಾಡಿನ ಕೊಡಗು, ಹಾಸನ, ಚಿಕಮಗಳೂರು ಹಾಗೂ ಕಡಲತಡಿಯ ಮಂಗಳೂರು, ಉಡುಪಿ, ಕಾರವಾರ ಜಿಲ್ಲೆಯ ಭಾಗಗಳಲ್ಲಿ ಹಲಸಿನ ಹಣ್ಣಿನ ಚಿಪ್ಸ್ ತಯಾರಿಸಲಾಗುತ್ತದೆ. ಈ ಚಿಪ್ಸ್ಗೆ ಬೇಡಿಕೆ ಹೆಚ್ಚು.

ಒಂದು ಉಂಡೆ ಹಣ್ಣಿಗೆ ಕನಿಷ್ಠ ₹100ರಿಂದ 300ರವರೆಗೆ ದರ ಇರುತ್ತದೆ. ಅದರಲ್ಲೂ ಚಂದ್ರ ಹಲಸಿಗೆ ಬೇಡಿಕೆಯು ಹೆಚ್ಚು, ದರವೂ ಹೆಚ್ಚು. ಹಲಸಿನ ಹಣ್ಣಿನ 5 ತೊಳೆಗೆ ₹10ರಿಂದ ₹20ರವರೆಗೆ ದರವಿದೆ.
.Web Exclusive: ನಾಡಿನೊಳಗಿದ್ದರೂ ‘ಪರಕೀಯಾದ’ ಚಲ್ಹೇರಿ.WEB EXCLUSIVE: ಐತಿಹಾಸಿಕ ಹಂಪಿಯಲ್ಲಿ ಮತ್ತೊಮ್ಮೆ ‘ಗಜಪಯಣ‘.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.