ವಿಧಾನಮಂಡಲ ಅಧಿವೇಶನದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧದ ಕುರಿತ ಚರ್ಚೆ ರಾಜ್ಯದ ಗಮನ ಸೆಳೆದಿದೆ. ಮಕ್ಕಳಿಗೆ ಜಾಲತಾಣ ನಿಷೇಧಿಸುವ ಕುರಿತು ತಜ್ಞರ ಸಮಿತಿ ರಚಿಸಿ, ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಅಧಿವೇಶನದಲ್ಲಿ ಹೇಳಿದ್ದಾರೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳಿಗೆ ಪ್ರಮುಖ ಕಾರಣವಾಗಿರುವ ಸಾಮಾಜಿಕ ಜಾಲತಾಣಗಳ ನಿಷೇಧ ಬಳಕೆ ನಿರ್ಧಾರವನ್ನು ರಾಜ್ಯ ಸರ್ಕಾರ ಬಜೆಟ್ನಲ್ಲೇ ಘೋಷಿಸಿ ಕಾಳಜಿ ಮೆರೆದಿದ್ದರ ಹಿಂದಿರುವುದು ಸರ್ಕಾರಿ ಶಾಲೆ ಮೇಷ್ಟ್ರು ಆರಂಭಿಸಿದ ಅಭಿಯಾನದ ಪ್ರೇರಣೆ!

ಅವರೇ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬನ್ನಿಕುಪ್ಪೆ (ಬಿ) ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್ಪಿ) ಆಗಿರುವ ಟಿ.ಎನ್. ಚಿಕ್ಕವೀರಯ್ಯ. ವರ್ಷದ ಹಿಂದೆ ತಮ್ಮ ಕ್ಲಸ್ಟರ್ ವ್ಯಾಪ್ತಿಯ 14 ಸರ್ಕಾರಿ ಶಾಲೆಗಳಲ್ಲಿ ಅವರು ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನ ಶುರು ಮಾಡಿದ್ದರು. ಅದರ ಪ್ರೇರಣೆಯಿಂದಾಗಿ ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಕಡಿವಾಣ ಹಾಕಲು ಜಾಲತಾಣ ನಿಷೇಧದಂತಹ ಕ್ರಾಂತಿಕಾರಕ ನಿರ್ಧಾರಕ್ಕೆ ಸರ್ಕಾರ ಮುನ್ನುಡಿ ಬರೆದಿದೆ.
.PV Web Exclusive: ರಾಜ್ಯದ ಕಾರಾಗೃಹಗಳಲ್ಲಿ ಅಕ್ರಮ ತಡೆಯಲು ‘ಆರು ಸೂತ್ರ’.WEB Exclusive: ರೇಷ್ಮೆ ಸೀರೆಗೆ ನಾರಿಯರ ಸರದಿ ಸಾಲು; ಹೆಚ್ಚುತ್ತಲೇ ಇದೆ ಬೇಡಿಕೆ.

ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳ ದೈಹಿಕ ಮಾನಸಿಕ ಆರೋಗ್ಯ ಮತ್ತು ಶೈಕ್ಷಣಿಕ ಬದುಕಿನ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿದೆ. ಅತಿಯಾದ ಮೊಬೈಲ್ ಬಳಕೆಯಿಂದ ನಿದ್ರಾಹೀನತೆ, ಮೆದುಳಿನ ವಿಕಾಸದ ಮೇಲೆ ಪರಿಣಾಮ, ಹೃದಯ ರೋಗ ಸಂಬಂಧ ಹೆಚ್ಚುತ್ತಿದೆ. ಇಂತಹ ಸಮಸ್ಯೆಗಳ ಜೊತೆಗೆ ಮಕ್ಕಳ ವರ್ತನೆಗಳಲ್ಲಾದ ಬದಲಾವಣೆಗಳನ್ನು ಚಿಕ್ಕವೀರಯ್ಯ ಸೂಕ್ಷ್ಮವಾಗಿಯೇ ಗಮನಿಸುತ್ತಾ ಬಂದಿದ್ದರು. ಈ ಸಮಸ್ಯೆಗಳಿಗೆ ಪರಿಹಾರವಾಗಿ ಅವರಿಗೆ ಕಂಡಿದ್ದು ಪುಸ್ತಕ! ಮಕ್ಕಳಲ್ಲಿ ಡಜನ್ಗಟ್ಟಲೆ ಸಮಸ್ಯೆಗಳನ್ನು ಸೃಷ್ಟಿಸಿರುವ ಈ ಮೊಬೈಲ್ ಬದಲಿಗೆ, ಮಕ್ಕಳ ಕೈಗೆ ಪುಸ್ತಕ ಕೊಟ್ಟರೆ ಎಲ್ಲಾ ಸಮಸ್ಯೆಗಳಿಗೂ ನಿಧಾನವಾಗಿ ಪರಿಹಾರ ಸಿಗುತ್ತದೆ ಎಂಬುದನ್ನು ಮನಗಂಡರು.

ತಾವು ಕೆಲಸ ಮಾಡುವ ಕ್ಲಸ್ಟರ್ ವ್ಯಾಪ್ತಿಯ 14 ಶಾಲೆಗಳಲ್ಲಿ 2025ರ ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ದಿನದಂದೇ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನವನ್ನು ಸಣ್ಣದಾಗಿ ಶುರು ಮಾಡಿದರು. ತಮ್ಮ ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿಯ ಹೊಸ ಆಲೋಚನೆಗೆ ಶಾಲೆಗಳ ಶಿಕ್ಷಕರು ಸಹ ಸಾಥ್ ನೀಡಿದರು. ಮಕ್ಕಳ ಜೊತೆಗೆ ಅವರ ಪೋಷಕರನ್ನು ಒಳಗೊಂಡ ಅಭಿಯಾನಕ್ಕೆ ಮಕ್ಕಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತು. ಊರುಗಳಲ್ಲಿ ಮನೆ ಮಾತಾಗಿ ಮತ್ತಷ್ಟು ಶಾಲೆಗಳಿಗೆ ವಿಸ್ತರಿಸಿತು. ಪೋಷಕರು ಸಹ ತಮ್ಮ ಮಕ್ಕಳ ಮೊಬೈಲ್ ಗೀಳು ಹಾಗೂ ಅದರಿಂದ ಅವರನ್ನು ಬಿಡಿಸಲಾಗದ ತಮ್ಮ ಅಸಹಾಯಕತೆ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳತೊಡಗಿದರು. ಅಭಿಯಾನಕ್ಕೆ ತಾವು ಕೈ ಜೋಡಿಸಿದರು.

ಶಾಲೆಗಳ ಮತ್ತು ಗ್ರಾಮಗಳ ಮಟ್ಟದಲ್ಲಿ ಮನೆ ಮಾತಾದ ಅಭಿಯಾನ ಮಾಧ್ಯಮದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡಿತು. ಅಭಿಯಾನ ಕುರಿತ ಜಾಗೃತಿ ವಿಡಿಯೊ ಜಾಲತಾಣದಲ್ಲಿ ಕೇವಲ ಎರಡು ದಿನಗಳಲ್ಲಿ 10 ಲಕ್ಷ ವೀಕ್ಷಣೆ ಪಡೆಯಿತು! ಚಿಕ್ಕವೀರಯ್ಯ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ ಹರಿದು ಬಂತು. ರಾಜ್ಯದ ವಿವಿಧ ಭಾಗಗಳ ಶಿಕ್ಷಕರು ಸೇರಿದಂತೆ ವಿವಿಧ ಕ್ಷೇತ್ರಗಳ ಜನ ಅಭಿಯಾನದಿಂದ ಪ್ರೇರಿತರಾದರು. ಇದರಿಂದಾಗಿ ಹಲವು ಶಾಲೆಗಳಿಗೆ ಅಭಿಯಾನ ವಿಸ್ತರಿಸಿತು. ಅಭಿಯಾನ ಕುರಿತು ಮಾತನಾಡಲು ಚಿಕ್ಕವೀರಯ್ಯ ಅವರಿಗೆ ರಾಜ್ಯದ ವಿವಿಧ ಭಾಗಗಳಿಂದ ಕರೆ ಬರತೊಡಗಿತು. ಜನಪ್ರತಿನಿಧಿಗಳ ಗಮನವನ್ನೂ ಸೆಳೆದು ವಿಧಾನಸೌಧದಲ್ಲೂ ಅನುರಣಿಸಿತು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರು ಅಧಿವೇಶನದಲ್ಲಿ ಅಭಿಯಾನದ ಬಗ್ಗೆ ಪ್ರಸ್ತಾಪಿಸಿದ್ದರು. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಅಭಿಯಾನ ವಿಸ್ತರಿಸಬೇಕು ಎಂಬ ಸಲಹೆ ನೀಡಿದರು. ಹೀಗೆ ಶುರುವಾದ ಅಭಿಯಾನ ರಾಜ್ಯದ ಮೂಲೆ ಮೂಲೆಗಳಿಗೆ ತಲುಪಿ, ಕಡೆಗೆ ಶಿಕ್ಷಣ ಇಲಾಖೆಯ ಗಮನಕ್ಕೂ ಬಂತು.

ಕಳೆದ ವರ್ಷ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನವನ್ನು ಕರ್ನಾಟಕ ಸರ್ಕಾರ ಅಳವಡಿಸಿಕೊಂಡಿದೆ ಎಂದು ಘೋಷಿಸಿದರು. ಅದರ ಬೆನ್ನಲ್ಲೇ ಶಿಕ್ಷಣ ಇಲಾಖೆಯು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಅಭಿಯಾನದ ಯಶೋಗಾಥೆ ಕುರಿತು ಕಾರ್ಯಾಗಾರ ಮಾಡಿ, ಇದರ ಪರಿಣಾಮಗಳ ಕುರಿತು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ತಲುಪಿಸಿತು. ಇದೀಗ ಶಾಲಾ–ಕಾಲೇಜಿನ ಶೈಕ್ಷಣಿಕ ಭಾಗವಾಗಿ ಅಭಿಯಾನವನ್ನು ಸೇರಿಸಲಾಗಿದೆ.

ಅದರ ಮುಂದುವರಿದ ಭಾಗವಾಗಿ, ಕಳೆದ ತಿಂಗಳ ಮಂಡನೆಯಾದ ರಾಜ್ಯ ಬಜೆಟ್ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ ತೀರ್ಮಾನವನ್ನು ಸಿದ್ದರಾಮಯ್ಯ ಪ್ರಕಟಿಸಿದರು. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಹಾಗೂ ಶಾಲಾ– ಕಾಲೇಜುಗಳಲ್ಲಿ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅರಿವಿನ ಅಭಿಯಾನಕ್ಕೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಈಗಾಗಲೇ ತುಮಕೂರು ವಿಶ್ವವಿದ್ಯಾನಿಲಯ, ಬೆಂಗಳೂರು ವಿಶ್ವವಿದ್ಯಾಲಯ, ಶಿವಮೊಗ್ಗ ವಿಶ್ವವಿದ್ಯಾನಿಲಯಗಳು ಈ ಅಭಿಯಾನವನ್ನು ತಮ್ಮ ವ್ಯಾಪ್ತಿಯ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಿವೆ.

‘ಕೋವಿಡ್ ಬಳಿಕ ಮಕ್ಕಳಲ್ಲಿ ಮೊಬೈಲ್ ಗೀಳು ಮತ್ತಷ್ಟು ಉಲ್ಭಣಿಸಿತ್ತು. ಸೃಜನಶೀಲತೆ ಕುಂದಿಸುವ ಮತ್ತು ಕಲಿಕಾ ಸಮಸ್ಯೆಗೂ ಕಾರಣವಾಗಿದ್ದ ಈ ಗೀಳು ತಗ್ಗಿಸುವ ಸಲುವಾಗಿ ನನ್ನ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ಹಾಗೂ ಪೋಷಕರ ಸಹಕಾರದೊಂದಿಗೆ ಅಭಿಯಾನ ಆರಂಭಿಸಿದೆ. ಪ್ರತಿ ಶನಿವಾರ ಶಾಲಾವಧಿ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳನ್ನು ಒಂದು ತಾಸು ಶಾಲೆಯ ಗ್ರಂಥಾಲಯದಲ್ಲಿ ಕೂರಿಸಿ ಪುಸ್ತಕಗಳನ್ನು ಓದಿಸಲಾರಂಭಿಸಿದೆ. ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತಪಡಿಸಿದ ಪೋಷಕರು ಸಹ ಗ್ರಂಥಾಲಯಕ್ಕೆ ಬಂದು ತಮ್ಮ ಮಕ್ಕಳೊಂದಿಗೆ ಪುಸ್ತಕ ಹಿಡಿದರು. ದಿನೇ ದಿನೇ ಅಭಿಯಾನ ಜನಪ್ರಿಯಗೊಂಡಿತು’ ಎಂದು ಚಿಕ್ಕವೀರಯ್ಯ ‘ಪ್ರಜಾವಾಣಿ’ಯೊಂದಿಗೆ ಅಭಿಯಾನದ ಆರಂಭದ ದಿನಗಳನ್ನು ಹಂಚಿಕೊಂಡರು.

‘ಅಭಿಯಾನದ ವಿಡಿಯೊಗಳು ಲಕ್ಷಗಟ್ಟಲೆ ವೀಕ್ಷಣೆ ಪಡೆದು ಇಲಾಖೆಯ ಗಮನಕ್ಕೂ ಬಂದಿತು. ಅಧಿಕಾರಿಗಳು ಕರೆದು ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ರಾಜ್ಯದಾದ್ಯಂತ ವಿಸ್ತರಿಸುವಂತೆ ಇಲಾಖೆಗೆ ಪತ್ರ ಬರೆದಿದ್ದರು. ಇಲಾಖೆ ಸಚಿವರಾದ ಮಧು ಬಂಗಾರಪ್ಪ ಸರ್ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಅವರ ಗಮನ ಸೆಳೆದಿದ್ದ ಅಭಿಯಾನವನ್ನು ಇಲಾಖೆಯು ರಾಜ್ಯದಾದ್ಯಂತ ವಿಸ್ತರಿಸಿರುವುದು ಖುಷಿ ತಂದಿದೆ. ಅದರ ಮುಂದುವರಿದ ಭಾಗವಾಗಿ ಸರ್ಕಾರ 16 ವರ್ಷದೊಳಗಿನ ಮಕ್ಕಳಿಗೆ ಜಾಲತಾಣ ನಿಷೇಧಕ್ಕೆ ಕ್ರಮ ಕೈಗೊಂಡಿರುವುದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತಿ ಮಹತ್ವದ ನಿರ್ಧಾರವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಬಹುಮುಖ ಪ್ರತಿಭೆಯ ಶಿಕ್ಷಕ

ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆಯ ನಾಗರಾಜು ಮತ್ತು ಈರಮ್ಮ ದಂಪತಿ ಪುತ್ರರಾದ ಚಿಕ್ಕವೀರಯ್ಯ ಬಹುಮುಖ ಪ್ರತಿಭೆಯ ಶಿಕ್ಷಕ. 2007ರಲ್ಲಿ ಶಿಕ್ಷಕರಾಗಿ ನೇಮಕವಾಗಿರುವ ಅವರು, ಬೆಂಗಳೂರಿನ ರಾಜಾಜಿನಗರದಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಟಿಸಿಎಚ್/ಡಿ.ಇಡಿ ಮುಗಿಸಿದ್ದಾರೆ. ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ, ದೆಹಲಿಯಲ್ಲಿರುವ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಶಿಕ್ಷಣದಲ್ಲಿ ರಂಗಭೂಮಿ ಕುರಿತು ವಿಶೇಷ ಕೋರ್ಸ್ ಮಾಡಿದ್ದಾರೆ. ಶಿಕ್ಷಣದ ಜೊತೆಗೆ ಸಮುದಾಯ ಅಭಿವೃದ್ಧಿ, ಮಕ್ಕಳ ಅಭಿವೃದ್ದಿ, ಸುಸ್ಥಿರ ಶೈಕ್ಷಣಿಕ ಅಭಿವೃದ್ಧಿ, ಪರಿಸರ ಕಾಳಜಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬನ್ನಿಕುಪ್ಪೆ ‘ಬಿ’ ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ 14 ಸರ್ಕಾರಿ ಶಾಲೆಗಳಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ದಾನಿಗಳ ನೆರವಿನಿಂದ ಕಳೆದೆರಡು ಶೈಕ್ಷಣಿಕ ವರ್ಷದಿಂದ ದಾನಿಗಳ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಪ್ರತಿನಿತ್ಯ ತಾಜಾ ತರಕಾರಿ ನೀಡುವ ‘ಉಚಿತ ತರಕಾರಿ ಅಕ್ಷಯ ಪಾತ್ರೆ ಯೋಜನೆ’ಯ ಹಿಂದಿರುವುದು ಇದೇ ಚಿಕ್ಕವೀರಯ್ಯ. ಸದ್ಯ ಈ ಯೋಜನೆಯಿಂದ ಸುಮಾರು 500 ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದ್ದು, ಇಂದಿಗೂ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ.

ರಾಜ್ಯದಲ್ಲೇ ಪ್ರಥಮವಾಗಿ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಯೋಧರ ಹೆಸರಿನಲ್ಲಿ ಬನ್ನಿಕುಪ್ಪೆ ಬಿ ಕ್ಲಸ್ಟರ್ ಕೇಂದ್ರದಲ್ಲಿ ಗಿಡ ನೆಟ್ಟು ‘ಕಾರ್ಗಿಲ್ ವೀರಯೋಧ ವನ’ ನಿರ್ಮಿಸಲಾಗಿದೆ. ಮಕ್ಕಳಲ್ಲಿ ದೇಶಪ್ರೇಮ ಹಾಗೂ ಪರಿಸರ ಪ್ರೇಮಕ್ಕೆ ಪೂರಕವಾದ ಈ ಕಾರ್ಯದ ಹಿಂದಿರುವುದು ಸಹ ಚಿಕ್ಕವೀರಯ್ಯ. ವೈವಿಧ್ಯಮಯವಾದ ಆಲೋಚನೆಗಳ ಮೂಲಕ ಮಕ್ಕಳಲ್ಲಿ ಸೃಜನಶೀಲತೆ, ಚಿಂತನೆ ಬೆಳೆಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ಚಿಕ್ಕವೀರಯ್ಯ ಅವರ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನವು ಸರ್ಕಾರಿ ಆದೇಶವಾಗಿ ಅನುಷ್ಠಾನಕ್ಕೆ ಬಂದಿದೆ. ಇದೀಗ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣ ನಿಷೇಧಕ್ಕೆ ಮುನ್ನುಡಿ ಬರೆದಿದೆ. ಶಿಕ್ಷಕನೊಬ್ಬ ಮನಸ್ಸು ಮಾಡಿದರೆ, ಏನೆಲ್ಲಾ ಆಗಬಲ್ಲದು ಎಂಬುದಕ್ಕೆ ಚಿಕ್ಕವೀರಯ್ಯ ಮಾದರಿಯಾಗಿ ನಿಲ್ಲುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.