ಮೈಸೂರು: ತಿ. ನರಸೀಪುರದಲ್ಲಿನ ರೇಷ್ಮೆ ನೂಲು ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ನಡೆದ ಪ್ರತಿಭಟನೆ ಸದ್ಯ ತಣ್ಣಗಾಗಿದೆ. ಮತ್ತೊಂದೆಡೆ, ನೆಚ್ಚಿನ ಮೈಸೂರು ರೇಷ್ಮೆ ಸೀರೆ ಕೊಳ್ಳಲು ಕೆಎಸ್ಐಸಿ ಮಳಿಗೆಗಳ ಮುಂದೆ ನಾರಿಯರ ಸರದಿ ಸಾಲು ಮುಂದುವರಿದಿದೆ.

ಶತಮಾನ ಕಳೆದರೂ ಮೈಸೂರಿನ ರೇಷ್ಮೆ ಸೀರೆ ಮೇಲಿನ ಸ್ತ್ರೀಯರ ಮೋಹ ಇಂದಿಂಚು ಕಡಿಮೆ ಆಗಿಲ್ಲ. ಬದಲಾಗಿ, ಗ್ರಾಹಕರ ಸಾಲು ಬೆಳೆಯುತ್ತಲೇ ಹೋಗುತ್ತಿದೆ. ಮುಂಜಾನೆ ನಾಲ್ಕೈದು ಗಂಟೆಗೆ ಬಂದು ಮಳಿಗೆ ಮುಂದೆ ಸಾಲಿನಲ್ಲಿ ನಿಂತರೂ ಷೋರೂಂಗಳ ಬಾಗಿಲು ತೆರೆಯುವುದು ಮಾತ್ರ ಬೆಳಿಗ್ಗೆ ಹತ್ತರ ನಂತರವೇ. ಐದಾರು ಗಂಟೆ ನಿಂತುಕೊಂಡೇ ಕಾದರೂ ಸೀರೆ ಸಿಗುತ್ತದೆ ಎಂಬ ಖಾತ್ರಿಯಿಲ್ಲ. ಮೊದಲು ಬಂದವರಿಗೆ ಮಾತ್ರ ಟೋಕನ್. ಅದು ಇದ್ದರಷ್ಟೇ ಮಳಿಗೆಗೆ ಪ್ರವೇಶ. ಅಲ್ಲಿಯೂ ನಿಮಗೆ ಬೇಕಾದ ಬಣ್ಣದ ಸೀರೆ ಸಿಕ್ಕಿತೆಂಬ ಗ್ಯಾರಂಟಿ ಖಂಡಿತ ಇಲ್ಲ. ಸಿಬ್ಬಂದಿ ಕೊಟ್ಟ ಸೀರೆ ಕಣ್ಣಿಗೆ ಒತ್ತಿಕೊಂಡು ಹೊರ ಬರುವ ಪರಿಸ್ಥಿತಿ ಇದೆ. ದಿನಕ್ಕೆ ಇಂತಿಷ್ಟೇ ಸೀರೆ ಮಾರಾಟಕ್ಕೆ ಲಭ್ಯವಿದ್ದು, ಸಾಲಿನಲ್ಲಿ ನಿಂತ ಬಹುತೇಕ ಮಂದಿ ನಿರಾಸೆಯಿಂದ ವಾಪಸ್ ಆಗುವುದು ಸಾಮಾನ್ಯವಾದ ದೃಶ್ಯವಾಗಿದೆ.
.Web Exclusive|ಅಮೃತ,ಜಲಧಾರೆಗೆ ಹಾಳಾದ ರಸ್ತೆಗಳು: ಮಸ್ಕಿ ಜನತೆಗೆ ತಪ್ಪದ ಸಂಕಷ್ಟ.Web Exclusive: ಕೊಡಗಿನಲ್ಲಿ ಈಗ ಶ್ವೇತಸುಂದರಿಯರು...!.

ಅಂದ ಹಾಗೇ, ಮೈಸೂರು–ಬೆಂಗಳೂರು ಸೇರಿದಂತೆ ರಾಜ್ಯದ 13 ಕೆಎಸ್ಐಸಿ ಮಳಿಗೆಗಳಲ್ಲಿ ಅಧಿಕೃತ ‘ಜಿ.ಐ’ ಮಾನ್ಯತೆಯ ರೇಷ್ಮೆ ಸೀರೆಗಳನ್ನು ಕೆಎಸ್ಐಸಿ ಮಾರುತ್ತ ಬಂದಿದೆ. ಬೆಲೆ ಏನೂ ಕಡಿಮೆ ಇಲ್ಲ. ಕನಿಷ್ಠ ದರವೇ ₹18–19 ಸಾವಿರದಿಂದ ಆರಂಭಗೊಳ್ಳುತ್ತದೆ. ಹಲವು ಲಕ್ಷ ರೂಪಾಯಿಗಳವರೆಗೆ ಬೆಲೆ ಇದೆ.

ಯಾಕಿಷ್ಟು ಬೇಡಿಕೆ:
ಮೈಸೂರು ರೇಷ್ಮೆ ಸೀರೆ ಎಂಬುದು ಬರಿಯ ಸೀರೆಯಲ್ಲ. ಎಷ್ಟೋ ಹೆಣ್ಣುಮಕ್ಕಳಿಗೆ ಅದೊಂದು ಭಾವನಾತ್ಮಕ ಬೆಸುಗೆ. ಪರಂಪರೆ ಹಾಗೂ ಹೆಮ್ಮೆಯ ಸಂಕೇತ. ನಿಶ್ಚಿತಾರ್ಥದಿಂದ ಹಿಡಿದು ಮದುವೆ, ಸೀಮಂತದವರೆಗೆ ಪ್ರತಿ ಶುಭ ಕಾರ್ಯಕ್ಕೂ ಈ ಸೀರೆ ಉಟ್ಟೇ ಸಂಭ್ರಮ ಪಡುವ ಅಸಂಖ್ಯ ಸ್ತ್ರೀಯರಿದ್ದಾರೆ. ಧರಿಸಲು ಹಗುರವಾದ ರೇಷ್ಮೆ ಜೊತೆಗೆ ಚಿನ್ನ ಹಾಗೂ ಬೆಳ್ಳಿಯ ಎಳೆಗಳಿಂದ ನೇಯ್ದ ಅಗಲವಾದ ಜರಿ ಈ ಸೀರೆಯಲ್ಲಿನ ಹೈಲೈಟ್. ಇದಕ್ಕಾಗಿ ಭೌಗೋಳಿಕ ಸೂಚ್ಯಂಕ (ಜಿ.ಐ) ಮಾನ್ಯತೆಯೂ ದೊರೆತಿದೆ.

ಶತಮಾನದ ಇತಿಹಾಸ:
ಮೈಸೂರು ಸಂಸ್ಥಾನದಲ್ಲಿ ಮೊದಲಿಗೆ ರೇಷ್ಮೆ ಕೃಷಿಯನ್ನು ಪರಿಚಯಿಸಿದ್ದು ಟಿಪ್ಪುಸುಲ್ತಾನ್. 1913ರಲ್ಲಿ ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿ ರೇಷ್ಮೆ ನೇಯ್ಗೆ ಕಾರ್ಖಾನೆ ಸ್ಥಾಪಿಸಿ ಇಲ್ಲಿ ಮೈಸೂರು ರೇಷ್ಮೆ ಸೀರೆಯನ್ನು ವಿಶ್ವವಿಖ್ಯಾತಗೊಳಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ನಂತರದಲ್ಲಿ ಸರ್ಕಾರಿ ಸ್ವಾಮ್ಯದ ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮವು ಇದನ್ನು ಮುನ್ನಡೆಸುತ್ತಿದೆ.

ಶತಮಾನದಿಂದಲೂ ಈ ಕಾರ್ಖಾನೆ ರೇಷ್ಮೆ ಸೀರೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಇಲ್ಲಿಂದ ನೇಯ್ದ ಸೀರೆಗಳು ಕೇವಲ ಕೆಎಸ್ಐಸಿ ಮಳಿಗೆಗಳು ಮಾತ್ರವಲ್ಲದೆ ದೇಶ–ವಿದೇಶದ ಮಾರುಕಟ್ಟೆಗಳನ್ನು ತಲುಪಿದೆ. ತಿ. ನರಸೀಪುರದ ಕಾರ್ಖಾನೆಯಲ್ಲಿ ಕಚ್ಚಾ ರೇಷ್ಮೆ ಗೂಡನ್ನು ನೂಲಾಗಿ ಪರಿವರ್ತಿಸಿ, ಅದನ್ನು ಮೈಸೂರು ಹಾಗೂ ಚನ್ನಪಟ್ಟಣದಲ್ಲಿರುವ ನೇಯ್ಗೆ ಕಾರ್ಖಾನೆಗಳಲ್ಲಿ ಸೀರೆಗಳನ್ನಾಗಿ ರೂಪಿಸಲಾಗುತ್ತದೆ. ಇದಲ್ಲದೆ ಇತರ ಹಲವು ಉತ್ಪನ್ನಗಳೂ ಇಲ್ಲಿ ತಯಾರುತ್ತಿವೆ.

ಈ ಎರಡೂ ಕಾರ್ಖಾನೆಗಳಿಂದ ವಾರ್ಷಿಕ ಸರಾಸರಿ 1 ಲಕ್ಷದಷ್ಟು ಸೀರೆಗಳು ತಯಾರಾಗುತ್ತಿವೆ. ಆದರೆ ಇದಕ್ಕಿಂತ ಹಲವು ಪಟ್ಟು ಬೇಡಿಕೆ ಇದೆ. ಹೀಗಾಗಿ ಸದ್ಯ ಆನ್ಲೈನ್ ಮಾರುಕಟ್ಟೆಯಲ್ಲಿ ವ್ಯಾಪಾರ ಕಡಿಮೆಗೊಳಿಸಿ, ಸ್ಥಳೀಯ ಮಳಿಗೆಗಳಲ್ಲೇ ಗ್ರಾಹಕರಿಗೆ ಹೆಚ್ಚು ಮಾರಾಟಕ್ಕೆ ಚಿಂತನೆ ನಡೆಸಿರುವುದಾಗಿ ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.