ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿ ನೆನಪುಗಳ ತಾಣ ‘ಸ್ಮೃತಿವನ’....

ಅರಣ್ಯ ಇಲಾಖೆಯ ವಿಭಿನ್ನ ಯೋಜನೆ: ಸ್ಮೃತಿವನ
Last Updated 5 ಜೂನ್ 2018, 12:30 IST
ಅಕ್ಷರ ಗಾತ್ರ

ಹಾನಗಲ್: ವನ ಸಂರಕ್ಷಣೆ, ನೈಸರ್ಗಿಕ ಸಂಪತ್ತಿನ ಕಾಳಜಿಯ ನಿಟ್ಟಿನಲ್ಲಿ ಸಮುದಾಯದ ಸಹಭಾಗಿತ್ವದ ಮೂಲಕ ಗಿಡ–ಮರ ಬೆಳೆಸುವ ವಿಭಿನ್ನ ಆಲೋಚನೆಯ ‘ಸ್ಮೃತಿ ವನ’ ಎಂಬ ಕಾರ್ಯಕ್ರಮವನ್ನು ಪರಿಸರ ದಿನಾಚರಣೆಯಂದು ಇಲ್ಲಿನ ಕುಮಾರೇಶ್ವರ ಸಸ್ಯೋದ್ಯಾನದಲ್ಲಿ ತೆರೆದುಕೊಳ್ಳಲಿದೆ.

ಆಪ್ತರ ಮಧುರ ಕ್ಷಣಗಳು ಹಚ್ಚ ಹಸಿರು ಇರಲಿ ಎಂಬ ಬಯಕೆಯುಳ್ಳ ಆಸಕ್ತರು ‘ಟ್ರೀ ಪಾರ್ಕ್‌’ನಲ್ಲಿ ಗಿಡ ನೆಡಲು ಅವಕಾಶ ಮಾಡಿಕೊಡಲಾಗುತ್ತಿದೆ.

ಸ್ಮೃತಿ ವನಕ್ಕಾಗಿ ಟ್ರೀ ಪಾರ್ಕ್‌ನಲ್ಲಿ 4 ಎಕರೆ ಜಾಗೆ ಮೀಸಲಿಡಲಾಗಿದೆ. ಸುಮಾರು 2 ಸಾವಿರ ಗಿಡಗಳನ್ನು ನೆಟ್ಟು ಹೆಮ್ಮರವಾಗಿ ಬೆಳೆಸುವ ಯೋಜನೆಯನ್ನು ಅರಣ್ಯ ಇಲಾಖೆ ಹೊಂದಿದೆ. ಗಿಡಗಳನ್ನು ಬೆಳೆಸಲು ಆಸಕ್ತರಿಂದ ವಂತಿಗೆ ಪಡೆಯುವ ಮೂಲಕ ಸಾರ್ವಜನಿಕರನ್ನು ಗಿಡ–ಮರಗಳ ರಕ್ಷಣೆಯ ಕಾಯಕದಲ್ಲಿ ತೊಡಗಿಸುವ ಪ್ರಯತ್ನ ಮಾಡಲಾಗುತ್ತಿದೆ.

‘ಗಿಡ ನೆಟ್ಟು ಬೆಳೆಸುವ ಆಸಕ್ತಿ ಇದ್ದರೂ, ಸ್ಥಳಾವಕಾಶದ ಕೊರತೆ‌ ಎದುರಿಸುತ್ತಿರುವವರಿಗೆ ಈ ಸ್ಮೃತಿ ವನ ಯೋಜನೆ ವರವಾಗಿ ಪರಿಣಮಿಸಿದೆ. ಇಲ್ಲಿ ಸೇವೆಗೈದು ವರ್ಗಾವಣೆಗೊಳ್ಳುವ ನೌಕರ ವರ್ಗದವರಿಗೆ ಇಲ್ಲಿನ ನೆನಪು ಮಾಸದಂತೆ ಸ್ಮೃತಿವನ ಕೈಹಿಡಿಯಲಿದೆ’ ಎಂದು ಈ ಯೋಜನೆ ಕುರಿತು ತಹಶೀಲ್ದಾರ್‌ ಶಕುಂತಲಾ ಚೌಗಲಾ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

‘ಜನರು ಆಸಕ್ತಿ ತೋರುತ್ತಿದ್ದಾರೆ. ಈಗಾಗಲೇ 50 ಜನ ಗಿಡ ನೆಡಲು ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಟ್ರೀ ಪಾರ್ಕ್‌ನಲ್ಲಿ ಸಾಕಷ್ಟು ಜಾಗವಿದ್ದು, ಈ ಯೋಜನೆ ನಿರಂತರವಾಗಿ ನಡೆಯಲಿದೆ’ ಎಂದು ವಲಯ ಅರಣ್ಯಾಧಿಕಾರಿ ಶಿವರಾತ್ರೇಶ್ವರಸ್ವಾಮಿ ಮಾಹಿತಿ ನೀಡಿದರು.

ಈಗ ನಿಗದಿ ಗೊಂಡಿರುವ ‘ಸ್ಮೃತಿ ವನ’ದಲ್ಲಿ ಸುಮಾರು 40 ಜಾತಿಯ ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಮುಖ್ಯವಾಗಿ ನೇರಳೆ, ಗೋಣಿ, ಹೊಂಗೆ, ಚಳ್ಳೆ, ಶ್ರೀಗಂಧ, ಸಾಗವಾನಿ, ಹೊನ್ನೆ, ನೆಲ್ಲಿ, ಬಿಲ್ವಪತ್ರೆ, ಬನ್ನಿ, ಸಂಪಿಗೆ, ಬಾದಾಮಿ, ಮಾವು ಹೀಗೆ ಹಲವು ಬಗೆಯ ಗಿಡಗಳ ಪೈಕಿ ಆಸಕ್ತರು ತಮಗಿಷ್ಟದ ಆಯ್ಕೆಯ ಗಿಡ ನೆಡಲು ಅವಕಾಶ ಇದೆ.

₹ 1 ಸಾವಿರ ವಂತಿಗೆ

ಹಿರಿಯರ ನೆನಪು, ಒಳ್ಳೆಯ ಕೆಲಸದ ಸ್ಮರಣೆ, ಆತ್ಮೀಯರ, ಪ್ರೀತಿ ಪಾತ್ರರ ಧ್ಯೋತಕವಾಗಿ ಟ್ರೀ ಪಾರ್ಕ್‌ನಲ್ಲಿ ಒಂದು ಗಿಡ ನೆಡಬಹುದು. ಹೀಗೆ ನೆಟ್ಟ ಗಿಡಕ್ಕೆ ಅರಣ್ಯ ಇಲಾಖೆಯ ₹700 ಪಡೆಯಲಿದೆ. ಬಳಿಕ ಆ ಹಣದಲ್ಲಿ ನಿಗದಿತ ಗಿಡ ಐದು ವರ್ಷ ನಿರ್ವಹಣೆ ಮಾಡಲಿದೆ.

‌ಗಿಡ ನೆಟ್ಟವರ ಹೆಸರು, ಉದ್ದೇಶ ಮತ್ತಿತರ ಮಾಹಿತಿಯ ನಾಮ ಫಲಕದ ವೆಚ್ಚವಾಗಿ ₹300 ಪಡೆಯಲಾಗುತ್ತದೆ. ಗಿಡ ನೆಟ್ಟವರ ಸಂಪೂರ್ಣ ಮಾಹಿತಿಯನ್ನು ಭಾವಚಿತ್ರದ ಸಮೇತ ಇಲಾಖೆ ತನ್ನ ಬಳಿ ದಾಖಲೆಯಾಗಿ ಇಟ್ಟುಕೊಳ್ಳುವ ವ್ಯವಸ್ಥೆ ಇಲಾಖೆ ಮಾಡಿಕೊಂಡಿದೆ.

ಉದ್ಘಾಟನೆ: ಮಂಗಳವಾರ, ಬೆಳಿಗ್ಗೆ 10 ಗಂಟೆ

–ಮಾರುತಿ ಪೇಟಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT