‘ಆತ್ಮವಿಶ್ವಾಸವಿದ್ದರೆ ಜಗತ್ತು ಗೆಲ್ಲಬಹುದು’

7

‘ಆತ್ಮವಿಶ್ವಾಸವಿದ್ದರೆ ಜಗತ್ತು ಗೆಲ್ಲಬಹುದು’

Published:
Updated:
Deccan Herald

ಬಬಲೇಶ್ವರ: ‘ಪ್ರತಿಯೊಬ್ಬರಿಗೂ ತಮ್ಮ ಪ್ರತಿಭೆ ಮೇಲೆ ಆತ್ಮವಿಶ್ವಾಸವಿದ್ದರೆ, ಇಡೀ ಜಗತ್ತನ್ನೇ ಗೆಲ್ಲಬಹುದು’ ಎಂದು ಚಾಣಕ್ಯ ಕರಿಯರ್‌ ಅಕಾಡೆಮಿ ಸಂಸ್ಥಾಪಕ ಮುಖ್ಯಸ್ಥ ಎನ್‌.ಎಂ.ಬಿರಾದಾರ ಹೇಳಿದರು.

ಗ್ರಾಮದ ಶಾಂತವೀರ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಅಮ್ಮನ ಮಡಿಲು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪುಸ್ತಕ ಉಚಿತ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಇದು ಸ್ಪರ್ಧಾತ್ಮಕ ಯುಗ. ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಪಟ್ಟರೆ ಸಾಕು. ಜೀವನಪರ್ಯಂತ ಸುಖ ಹಾಗೂ ಗೌರವದಿಂದ ಬದುಕಬಹುದು’ ಎಂದು ತಿಳಿಸಿದರು.

ಟ್ರಸ್ಟ್‌ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ ‘ಚಾಣಕ್ಯ ಕಣಜ ಸ್ಪರ್ಧಾಕಾಂಕ್ಷಿಗಳ ಬದುಕಿಗೆ ಧರ್ಮಗ್ರಂಥವಿದ್ದಂತೆ. ₨ 450 ಬೆಲೆ ಬಾಳುವ ಈ ಅಮೂಲ್ಯ ಪುಸ್ತಕ ನಿಮ್ಮೆಲ್ಲರ ಬಾಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.

ಗ್ರಾಮೀಣ ಸಿ.ಪಿ.ಐ. ಶಂಕರಗೌಡ ಬಸನಗೌಡರ ಮಾತನಾಡಿ ‘ಯಾರು ಬೆವರು ಸುರಿಸಿ ಕೆಲಸ ಮಾಡುತ್ತಾರೆ, ಅವರಿಗೆ ಜೀವನದಲ್ಲಿ ಕಣ್ಣೀರು ಸುರಿಸುವ ಅಗತ್ಯ ಬರುವುದಿಲ್ಲ. ಪ್ರತಿಯೊಬ್ಬರು ವೃತ್ತಿ ಪ್ರೀತಿಸಿ ಗೌರವಿಸಿದರೆ, ನೀವು ಯಾರಿಗೂ ತಲೆಬಾಗಬೇಕಾಗಿಲ್ಲ’ ಎಂದು ಹೇಳಿದರು.

ಗ್ರಾಮೀಣ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎನ್.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ನಾಗೇಶ ಹೊಳೆಯಪ್ಪಗೊಳ, ಸಂಗಮೇಶ ಕೋಲಕಾರ, ಸಂತೋಷ ನಿಗಡಿ, ಹನಮಂತ, ಜಗದೀಶ ಕನ್ನೂರ, ಟಿ.ಎಲ್.ಅಂಬಿಗೇರ ಉಪಸ್ಥಿತರಿದ್ದರು.

ಇದೇ ವೇಳೆ 500 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಪ್ರಾಚಾರ್ಯ ಡಾ.ವಿ.ಆರ್.ಚೌಧರಿ ಸ್ವಾಗತಿಸಿದರು. ಡಾ.ನಿಂಗಶೆಟ್ಟಿ ನಿರೂಪಿಸಿದರು. ಪ್ರೊ.ಎಸ್.ಐ.ಬಿರಾದಾರ ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !