ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

112 ಅಡಿ ಎತ್ತರದ ಅಂಬೇಡ್ಕರ್ ಮೂರ್ತಿ ನಿರ್ಮಾಣ

ದಸಂಸ (ಭೀಮವಾದ) ಸಂಚಾಲಕ ಪರಶುರಾಮ ನೀಲಾನಾಯಕ ಹೇಳಿಕೆ
Last Updated 14 ಅಕ್ಟೋಬರ್ 2020, 3:54 IST
ಅಕ್ಷರ ಗಾತ್ರ

ಯಾದಗಿರಿ: ವಿಜಯಪುರ– ಕೂಡಲಸಂಗಮ ನಡುವಿನ ಸ್ಥಳವೊಂದರಲ್ಲಿ 112 ಅಡಿ ಎತ್ತರದ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿ ನಿರ್ಮಾಣ ಮಾಡಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ (ಭೀಮವಾದ) ರಾಜ್ಯ ಘಟಕದ ಸಂಚಾಲಕ ಪರಶುರಾಮ ನೀಲಾನಾಯಕ ತಿಳಿಸಿದರು.

ನಗರದಲ್ಲಿ ಮಂಗಳವಾರ ಜರುಗಿದ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ‘ಸ್ವಾಭಿಮಾನಿ ಮೂರ್ತಿ’ ಇದಾಗಲಿದೆ. ಮೂರ್ತಿಯಲ್ಲಿ ಅಂಬೇಡ್ಕರ್ ಅವರ ಲೇಖನಿ ಮತ್ತು ಸಂವಿಧಾನ ಪುಸ್ತಕವನ್ನು ತಲಾ 1 ಕೆ.ಜಿ ಚಿನ್ನದಿಂದ ನಿರ್ಮಿಸುವ ಯೋಜನೆಯಿದೆ. ಸಂಘಟನೆ ಮತ್ತು ಅಂಬೇಡ್ಕರ್ ಅವರ ಅಭಿಮಾನಿಗಳ ಸಹಕಾರದಿಂದ ಮೂರ್ತಿ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ಸಂಘಟನೆಯ ರಾಜ್ಯ ಘಟಕದ ಸಂಘಟನಾ ಸಂಚಾಲಕ ಯಮನಪ್ಪ ಗುಣದಾಳ, ಭೀಮರಾಯ ಸಿಂಧಗೇರಿ, ಕಲಬುರ್ಗಿ ಘಟಕದ ಸಂಚಾಲಕ ಶಿವಪ್ಪ ಬಿಲ್ಗುಂದಿ, ಮಂಜುಳಾ ಸುರಪುರ, ಪ್ರಿಯದರ್ಶಿನಿ, ಶರಣಪ್ಪ ಯರಗೋಳ, ಬಸವರಾಜ ಹೊನಿಗೇರಾ, ಮಹಾದೇವಪ್ಪ ಬೆಳಗೇರಿ, ಅಂಜಪ್ಪ ಯಂಪಾಡ, ದೇವಪ್ಪ ಗಾಜರಕೋಟ, ಅಂಜಿಪ್ಪ ಕರಣಿಗಿ, ಸಾಬಣ್ಣ ತಾತಳಗೇರಿ, ಭೀಮರಾಯ ಬೆಳಗೇರಿ, ಕಿಷನ್ ನಂದಳ್ಳಿ, ಸಂತೋಷ ಈಟೆ, ಭೀಮರಾಯ ಕುಮನೂರು ಇದ್ದರು.

ಪದಾಧಿಕಾರಿಗಳ ನೇಮಕ: ಮರಿಯಪ್ಪ ನಾಯ್ಕಲ್ (ರಾಜ್ಯ ಸಮಿತಿ ಸದಸ್ಯ), ಶರಣು ಎಸ್. ನಾಟೇಕರ್(ಜಿಲ್ಲಾ ಘಟಕದ ಅಧ್ಯಕ್ಷ), ಮಾದೇವಪ್ಪ ಬೆಂಡಗಂಬಳಿ, ದೊಡ್ಡಪ್ಪ ಪೂಜಾರಿ ಗುಂಡೆಕಲ್, ನಾಗರಾಜ್ ಕೊಡೆಕಲ್, ಪರಶುರಾಮ್ ಬಳಬಟ್ಟಿ, ದೇವಿಂದ್ರಪ್ಪ ನಾಟಿಕರ್, ಭೀಮರಾಯ ಕರಣಿಗಿ, ಶಾಂತಕುಮಾರ ಪೂಜಾರಿ (ಸಂಘಟನಾ ಸಂಚಾಲಕ) ಅವರನ್ನು ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT