ಸೋಮವಾರ, ಜನವರಿ 17, 2022
19 °C

ಸುರಪುರ ಮತ ಕ್ಷೇತ್ರಕ್ಕೆ 1,280 ವಸತಿ; ಶಾಸಕ ರಾಜೂಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ವಸತಿ ಯೋಜನೆಯಡಿ ಸುರಪುರ ಮತಕ್ಷೇತ್ರಕ್ಕೆ 1,280 ವಸತಿಗಳು ಮಂಜೂರಿಯಾಗಿದ್ದು, ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜ.10ರಂದು ಮನೆ ಹಂಚಿಕೆಗ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಶಾಸಕ ರಾಜೂಗೌಡ ತಿಳಿಸಿದ್ದಾರೆ.

ಸುರಪುರ ಮತ್ತು ಹುಣಸಗಿ ತಾಲ್ಲೂಕುಗಳಿಗೆ ಕ್ರಮವಾಗಿ 540 ಮತ್ತು 740 ಮನೆಗಳು ಮಂಜೂರಾಗಿವೆ. ಪರಿಶಿಷ್ಟರಿಗೆ ಶೇ.17.15, ಪರಿಶಿಷ್ಟ ಪಂಗಡಕ್ಕೆ ಶೇ.7, ಅಲ್ಪಸಂಖ್ಯಾತರಿಗೆ ಶೇ.10 ಮತ್ತು ಹಿಂದುಳಿದ ಹಾಗೂ ಸಾಮಾನ್ಯ ವರ್ಗಕ್ಕೆ ಶೇ.65ರ ಅನುಪಾತದಲ್ಲಿ ಮನೆ ಹಂಚಿಕೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಗ್ರಾಮ ಸಭೆಯ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತಿದೆ. ಪಿಡಿಒ ಮತ್ತು ಕಾರ್ಯದರ್ಶಿಗಳು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಬೇಕು ಒತ್ತಡಗಳಿಗೆ, ಆಮಿಷಕ್ಕೆ ಒಳಗಾಗಿ ಅನಗತ್ಯ ತೊಂದರೆ ತೆಗೆದುಕೊಳ್ಳಬಾರದು ಎಂದು ಸೂಚಿಸಿದ್ದಾರೆ.

ಅಂಗವಿಕಲರು, ನಿರ್ಗತಿಕರು, ಬೆಂಕಿ ತಗುಲಿ ಮನೆ ಕಳೆದುಕೊಂಡಿದ್ದರೆ ಅವರು ಕೂಡಾ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಭಾವಚಿತ್ರದೊಂದಿಗೆ ಅರ್ಜಿಯನ್ನು ನನ್ನ ವಾಟ್ಸ್‌ಆ್ಯಪ್‍ಗೆ ಕಳುಹಿಸಬೇಕು. ಅರ್ಜಿ ಪರಿಶೀಲಿಸಿ ಅವರಿಗೂ ಮನೆ ಒದಗಿಸಿಕೊಡುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.