ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: 13 ಜನರಿಗೆ ಕೋವಿಡ್‌ ಪತ್ತೆ

ಜಮ್ಮು ಮತ್ತು ಕಾಶ್ಮೀರದಿಂದ ಬಂದವರಿಗೂ ಕೊರೊನಾ ಸೋಂಕು
Last Updated 24 ಜೂನ್ 2020, 16:52 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಬುಧವಾರ 13 ಜನರಿಗೆ ಕೋವಿಡ್‌–19 ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 907ಕ್ಕೆ ಏರಿಕೆಯಾಗಿದೆ. 13 ಜನರಲ್ಲಿ 4 ಜನಜಮ್ಮುಮತ್ತು ಕಾಶ್ಮೀರ ಬಂದವರು, ಉಳಿದವರು ಮಹಾರಾಷ್ಟ್ರದಿಂದ ಜಿಲ್ಲೆಗೆ ಹಿಂದಿರುಗಿದವರು.

ಯಾದಗಿರಿ ತಾಲ್ಲೂಕಿನ ಮಡ್ಡರಕಿ ಗ್ರಾಮದ 25 ವರ್ಷದ ಪುರುಷ,ಅಸನಾಳ ಗ್ರಾಮದ 17 ವರ್ಷದ ಬಾಲಕ, 35 ವರ್ಷದ ಮಹಿಳೆ, 20 ವರ್ಷದ ಪುರುಷ, 17 ವರ್ಷದ ಬಾಲಕ, ಸುರಪುರ ತಾಲ್ಲೂಕಿನ ನಾಗರಾಳ ಗ್ರಾಮದ 17 ವರ್ಷದ ಬಾಲಕ, ಶಹಾಪುರ ತಾಲ್ಲೂಕಿನ ಉಲಕಲ್ ಗ್ರಾಮದ 26 ವರ್ಷದ ಪುರುಷ, ಗುರಮಠಕಲ್ ತಾಲ್ಲೂಕಿನ ಕೊಂಕಲ್ ಗ್ರಾಮದ 15 ವರ್ಷದ ಬಾಲಕ,ದೊಡ್ಡ ಸಾಂಬ್ರ ಗ್ರಾಮದ 42 ವರ್ಷದ ಪುರುಷ, 33 ವರ್ಷದ ಹೆಣ್ಣು, 15 ವರ್ಷದ ಬಾಲಕ, 19 ವರ್ಷದ ಹೆಣ್ಣು, ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದ 19 ವರ್ಷದ ಪುರುಷ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಒಂದೇ ದಿನ 101 ಜನ ಗುಣಮುಖ

ಜಿಲ್ಲೆಯಲ್ಲಿ ಒಂದೇ ದಿನ 101 ಕೋವಿಡ್‌–19 ಪೀಡಿತರು ಗುಣಮುಖರಾಗಿದ್ದಾರೆ. ಕೋವಿಡ್-19 ದೃಢಪಟ್ಟ 907 ವ್ಯಕ್ತಿಗಳ ಪೈಕಿ ಜೂನ್ 24ರವರೆಗೆ 690 ಜನ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 216 ಪ್ರಕರಣಗಳು ಸಕ್ರಿಯವಾಗಿವೆ.

ಕೊರೊನಾ ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳ ಪೈಕಿ ಬುಧವಾರ 100 ನೆಗೆಟಿವ್ ವರದಿ ಬಂದಿವೆ. ಈವರೆಗೆ 22,537 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 445 ಮಾದರಿಗಳು ಸೇರಿದಂತೆ 1,230 ಮಾದರಿಗಳ ವರದಿ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT