ಪಶ್ಚಿಮಘಟ್ಟ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಆಗುತ್ತಿರುವುದರಿಂದ ಒಳಹರಿವು ಕಡಿಮೆಯಾಗುತ್ತಿದೆ. ಬಸವ ಸಾಗರ ಜಲಾಶಯಕ್ಕೆ ಬರುತ್ತಿರುವ ಒಳಹರಿವನ್ನು ಗಮನಿಸಿ ಹೊರಹರಿವನ್ನು ಕಡಿಮೆ ಮಾಡಲಾಗುತ್ತಿದೆ. ಸೋಮವಾರ ಆಲಮಟ್ಟಿಯ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ 20 ಸಾವಿರ ಕ್ಯುಸೆಕ್ ನೀರು ಬರುತ್ತಿದ್ದು, ನಾರಾಯಣಪುರ ಜಲಾಶಯದ ಎರಡು ಕ್ರಸ್ಟ್‌ಗೇಟ್ ಮತ್ತು ಎಂಪಿಸಿಎಲ್ ಮೂಲಕ 14 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ ಎಂದು ಕೆಬಿಜೆಎನ್ಎಲ್ ಮೂಲಗಳಿಂದ ತಿಳಿದುಬಂದಿದೆ.