ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೀರಶೈವ ಕಲ್ಯಾಣ ಮಂಟಪಕ್ಕೆ ₹ 1.50 ಕೋಟಿ ಅನುದಾನ

ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ
Published : 15 ಆಗಸ್ಟ್ 2024, 15:38 IST
Last Updated : 15 ಆಗಸ್ಟ್ 2024, 15:38 IST
ಫಾಲೋ ಮಾಡಿ
Comments

ಶಹಾಪುರ: ವೀರಶೈವ ಲಿಂಗಾಯತ ಸಮಾಜಕ್ಕೆ ತನ್ನದೇ ಆದ ವಿಶೇಷ ಅಸ್ತಿತ್ವವಿದೆ. ಸರ್ಕಾರ ಮಾಡದ ಕೆಲಸ ಸಮಾಜದ ಮಠ ಮಾನ್ಯಗಳು ಮಾಡಿವೆ. ಆದರೆ ಸಮಾಜ ಬಲಿಷ್ಠವಾಗಿದ್ದರೂ ಶೈಕ್ಷಣಿಕ ಪ್ರಗತಿ ಸಾಧಿಸದಿರುವುದಕ್ಕೆ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳೇ ಹೆಚ್ಚಾಗಿವೆ. ಬರುವ ದಿನಲ್ಲಿ ಕಲ್ಯಾಣ ಮಂಟಪ ಸ್ಥಾಪನೆಗೆ ₹ 1.50 ಕೋಟಿ ಅನುದಾನ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಫಕೀರೇಶ್ವರ ಮಠದಲ್ಲಿ ಗುರುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲ್ಲೂಕು ಘಟಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನೂತನ ಅಧ್ಯಕ್ಷರ ಹಾಗೂ ಕಾರ್ಯಕಾರಿಣಿ ಸದಸ್ಯರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಸಮುದಾಯಕ್ಕೆ ಅವಶ್ಯವಾಗಿರುವ ಕಲ್ಯಾಣ ಮಂಟಪ ಮತ್ತು ವಿದ್ಯಾರ್ಥಿ ವಸತಿ ನಿಲಯ ನಿರ್ಮಿಸಲು ನಗರದಲ್ಲಿ ಸುಮಾರು 1 ಎಕರೆಯಷ್ಟು ಜಮೀನು ನೀಡಲಾಗಿದೆ. ಆದರೆ ಅದರ ಮೌಲ್ಯ ಕಡಿಮೆಗೊಳಿಸಲು ಅಧಿವೇಶನದಲ್ಲಿ ಸಾಧ್ಯವಿದ್ದು, ಮುಂಬರುವ ದಿನಗಳಲ್ಲಿ ಶೇ 10 ರಿಂದ 25 ರಷ್ಟು ಮೌಲ್ಯದಲ್ಲಿ ಜಮೀನು ಖರೀದಿಸಲು ಅನುಮೋದನೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದರು.

ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದ ಸಚಿವ ದರ್ಶನಾಪುರ, ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಸಿದ್ದಣ್ಣ ಸಾಹು ಆರಬೋಳ ಹಾಗೂ ಕಾರ್ಯಕಾರಿಣಿ ಸದಸ್ಯರನ್ನು ಸನ್ಮಾನಿಸಲಾಯಿತು.

ನಗರದ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು, ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ, ಬಸವಯ್ಯ ಶರಣರು, ವಿಶ್ವರಾಧ್ಯ ದೇವರು, ಸಮುದಾಯದ ಹಿರಿಯ ಮುಖಂಡರಾದ ಚಂದ್ರಶೇಖರ ಆರಬೋಳ, ಸಿದ್ದಪ್ಪಲಿಂಗಪ್ಪ ಆನೇಗುಂದಿ, ರುದ್ರಣ್ಣ ಚಟ್ರಕಿ, ಮಲ್ಲಿಕಾರ್ಜುನ ಜಾಕಾ, ವಿರೇಶ ಉಳ್ಳಿ, ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಪ್ಪ ಮೋಸಂಬಿ, ಗುರುನಾಥರೆಡ್ಡಿ ಪಾಟೀಲ ಹಳಿಸಗರ, ಬಸನಗೌಡ ಸುಬೇದಾರ, ಮಾಣಿಕರೆಡ್ಡಿ ಪಾಟೀಲ ಗೋಗಿ, ಚೆಂದಪ್ಪ ತಾಯಮ್ಮಗೋಳ, ನಾಗನಗೌಡ ಸುಬೇದಾರ, ಲಿಂಗಣ್ಣ ಪಡಶೆಟ್ಟಿ, ಗದಿಗೆಪ್ಪ ದೇಸಾಯಿ, ಪರ್ವತರೆಡ್ಡಿ ಬೆಂಡೆಬೆಂಬಳಿ, ಶಿವಶರಣಪ್ಪ ಕಾಮಾ, ಮಲ್ಲರೆಡ್ಡೆಪ್ಪ ಹೋತಪೇಟ, ಶರಣಪ್ಪ ಸಾಹು ಮುಂಡಾಸ, ಶರಣಗೌಡ ರಸ್ತಾಪುರ, ರಾಜಶೇಖರ ಪಾಟೀಲ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ವೀರಶೈವ ಸಮುದಾಯದ ಮುಖಂಡ ಸುರೇಂದ್ರ ಪಾಟೀಲ ಮಡ್ನಾಳ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಿದರು.

15ಎಸ್ಎಚ್ಪಿ 2(2): ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಘಟಕದ ನೂತನ ಮಹಿಳಾ ಕಾರ್ಯಕಾರಿಣಿ ಸದಸ್ಯರನ್ನು ಸನ್ಮಾನಿಸಲಾಯಿತು.
15ಎಸ್ಎಚ್ಪಿ 2(2): ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಘಟಕದ ನೂತನ ಮಹಿಳಾ ಕಾರ್ಯಕಾರಿಣಿ ಸದಸ್ಯರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT