ಮಂಗಳವಾರ, ಸೆಪ್ಟೆಂಬರ್ 17, 2019
25 °C

ನಗರ ರೈಲು ನಿಲ್ದಾಣಕ್ಕೆ ಜಿಎಂ ಭೇಟಿ

Published:
Updated:
Prajavani

ಯಾದಗಿರಿ: ನಗರದ ರೈಲು ನಿಲ್ದಾಣಕ್ಕೆ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಭೇಟಿ ನೀಡಿ ಪರಿಶೀಲಿಸಿದರು.

ರೈಲ್ವೆ ಇಲಾಖೆ ಕಾರ್ಮಿಕರೊಬ್ಬರು ಮಾರ್ಚ್‌ 26ರಂದು ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ಯಾವುದೇ ಸುರಕ್ಷಿತ ಕ್ರಮ ಕೈಗೊಳ್ಳದೇ ಮಲದ ಗುಂಡಿಗೆ ಇಳಿದು ಪೈಪ್‌ಲೈನ್ ಸ್ವಚ್ಛಗೊಳಿಸಿದ್ದರು.

ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಎಲ್ಲಿ ಮಲದ ಗುಂಡಿ ಸ್ವಚ್ಛಗೊಳಿಸಲು ಯಂತ್ರಗಳ ಬಳಕೆ ಮಾಡಲಾಗುತ್ತಿದೆ ಎಂದು
ಪ್ರಶ್ನಿಸಿದರು.

ನಂತರ ಘಟನೆ ಕುರಿತು ಗುಂತಕಲ್ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇನ್ನು ಮುಂದೆ ಕಾರ್ಮಿಕರಿಗೆ ಕೈ ಮತ್ತು ಕಾಲುಗಳಿಗೆ ಅಗತ್ಯ ಸುರಕ್ಷತೆ ಪರಿಕರಗಳ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ರೈಲ್ವೆ ಇಲಾಖೆ ಅಧಿಕಾರಿಗಳು ಇದ್ದರು.

 

Post Comments (+)