ಶನಿವಾರ, ಡಿಸೆಂಬರ್ 14, 2019
25 °C
‘ಕ್ಷೀರ ಭಾಗ್ಯ’ದ ಹಾಲಿನ ಪುಡಿ ತೆಲಂಗಾಣಕ್ಕೆ ಅಕ್ರಮ ಪೂರೈಕೆ

₹6.42 ಲಕ್ಷ ಮೌಲ್ಯದ ನಂದಿನಿ ಹಾಲಿನ ಪುಡಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ (ಯಾದಗಿರಿ ಜಿಲ್ಲೆ): ‘ಕ್ಷೀರ ಭಾಗ್ಯ’ ಯೋಜನೆಯಡಿ ಶಾಲಾ ಮಕ್ಕಳಿಗೆ ಸರ್ಕಾರ ಪೂರೈಸುವ ಹಾಲಿನ ಪುಡಿ ತೆಲಂಗಾಣಕ್ಕೆ ಅಕ್ರಮವಾಗಿ ಪೂರೈಕೆಯಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ₹6.42 ಲಕ್ಷ ಮೌಲ್ಯದ ನಂದಿನಿ ಹಾಲಿನ ಪುಡಿಯನ್ನು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.

‘ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದ ನಂದಿನಿ ಹಾಲಿನ ಪುಡಿಯನ್ನು ಸುರಪುರದಿಂದ ಗುರುಮಠಕಲ್ ತಾಲ್ಲೂಕಿಗೆ ಲಾರಿಯಲ್ಲಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅಕ್ಷರ ದಾಸೋಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ಬಳಿ ಲಾರಿಯನ್ನು ವಶಪಡಿಸಿಕೊಂಡು, ಚಾಲಕ ಮಹಿಬೂಬ್‌ನನ್ನು ಬಂಧಿಸಿದ್ದೇವೆ’ ಎಂದು ಶಹಾಪುರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ಹನುಮರೆಡ್ಡೆಪ್ಪ ತಿಳಿಸಿದರು.

‘ಸುರಪುರ ತಾಲ್ಲೂಕಿನ ವಿವಿಧ ಶಾಲೆಗಳ ಮಕ್ಕಳಿಗೆ ವಿತರಿಸಬೇಕಾದ ಹಾಲಿನ ಪುಡಿಯನ್ನು ಅಕ್ಷರ ದಾಸೋಹದ ಕೆಲ ಸಿಬ್ಬಂದಿ ಹಾಗೂ ಕೆಲ ಶಾಲಾ ಶಿಕ್ಷಕರು ಅಕ್ರಮವಾಗಿ ಸಂಗ್ರಹಿಸಿ ಗುರುಮಠಕಲ್ ಮೂಲಕ ತೆಲಂಗಾಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಹಲವು ದಿನಗಳಿಂದ ಈ ದಂಧೆ ನಡೆಯುತ್ತಿದೆ’ ಎಂದು ಅಕ್ಷರ ದಾಸೋಹ ಅಧಿಕಾರಿಯೊಬ್ಬರು ತಿಳಿಸಿದರು.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು