ಬುಧವಾರ, ಅಕ್ಟೋಬರ್ 28, 2020
20 °C
ತಹಶೀಲ್ದಾರ್‌ ಖಾತೆಯಲ್ಲಿದ್ದ ‍ಹಣ ವಂಚನೆ ಪ್ರಕರಣ

₹75 ಲಕ್ಷ ವಂಚನೆ: ತಹಶೀಲ್ದಾರ್‌ ಕಚೇರಿಯ ಪ್ರಥಮ ದರ್ಜೆ ಸಹಾಯಕ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ಸುರಪುರ ತಹಶೀಲ್ದಾರ್‌ ಖಾತೆಯಲ್ಲಿದ್ದ ₹75.59 ಲಕ್ಷ ವಂಚನೆಗೆ ಸಂಬಂಧಿಸಿ ದಂತೆ ತಹಶೀಲ್ದಾರ್‌ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸಿ.ಎಸ್. ರಾಜು ಅವರನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌. ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಅಲ್ಲದೆ, ತಹಶೀಲ್ದಾರ್ ಮತ್ತು ಶಿರಸ್ತೇದಾರರಿಗೂ ಶೋಕಾಸ್‌ ನೋಟಿಸ್‌ ನೀಡಿದ್ದಾರೆ. ಈ ಮೂಲಕ ಹಣ ವಂಚನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

‘ಎಫ್‌ಡಿಎ ಸಿ.ಎಸ್.ರಾಜು ಅವ ರನ್ನು ಅಮಾನತು ಮಾಡಲಾಗಿದೆ. ಇಂಥ ಕೃತ್ಯದಲ್ಲಿ ಯಾರೇ ತೊಡಗಿಸಿ ಕೊಂಡರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಆಕ್ಸಿಸ್‌ ಬ್ಯಾಂಕ್‌ ವ್ಯವಸ್ಥಾಪಕ ರದ್ದು ಇದರಲ್ಲಿ ಲೋಪ ಕಂಡು ಬಂದಿದೆ. ಹೀಗಾಗಿ ಇವರ ವಿರುದ್ಧವೂ ಶಿಸ್ತು ಕ್ರಮಕ್ಕೆ ಪತ್ರ ಬರೆಯಲಾಗಿದೆ. ಲೀಡ್‌ ಬ್ಯಾಂಕ್‌ ವ್ಯವಸ್ಥಾಪರಿಗೆ ಈ ಬಗ್ಗೆ ಸೂಚಿಸಲಾಗಿದೆ. ಅಮಾನತು ಮಾಡಲು ತಿಳಿಸಲಾಗಿದೆ. ಈಗಾಗಲೇ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಮುಂಬಯಿ ಶಾಖೆಯವರು ಕ್ರಮ ತೆಗೆದುಕೊಳ್ಳು ತ್ತಾರೆ. ಅಲ್ಲದೆ ಬ್ಯಾಂಕ್‌ ಸಿಬ್ಬಂದಿ ಕೈವಾಡದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಯಾರೇ ತಪ್ಪು ಮಾಡಿದರೂ ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು’ ಎಂದರು.

ನೈಸರ್ಗಿಕ ವಿಕೋಪದಡಿ ಸುರಪುರ ನಗರದಲ್ಲಿರುವ ಅಕ್ಸಿಸ್ ಬ್ಯಾಂಕ್‌ ಶಾಖೆಯಲ್ಲಿ ಸುರಪುರ ತಹಶೀಲ್ದಾರ್‌ ಹೆಸರಿನ ಖಾತೆ ಸಂಖ್ಯೆ 91901008033954ಗೆ 2019ರ ಅಕ್ಟೋಬರ್ 19 ರಂದು ₹1,55,00,000, 2020ರ ಮೇ 20ರಂದು ₹1,00,00,000, ಜುಲೈ 23ರಂದು ₹1,00,00,000 ಹೀಗೆ ಒಟ್ಟು ₹3,55,00,000 ಖಾತೆಗೆ ಅನುದಾನ ಜಮಾ ಆಗಿತ್ತು. ಇದರಲ್ಲಿ ₹75.59 ಲಕ್ಷ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು