ಶುಕ್ರವಾರ, ಜನವರಿ 17, 2020
29 °C

ಮೈಲಾರಲಿಂಗೇಶ್ವರ ಪಲ್ಲಕ್ಕಿಗೆ ಎಸೆಯಲು ತಂದ ಕುರಿಮರಿಗಳು ₹12.90 ಲಕ್ಷಕ್ಕೆ ಹರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಪಲ್ಲಕ್ಕಿ ಮೇಲೆ ಹಾರಿಸಲು ಭಕ್ತರು ತಂದಿದ್ದ 894 ಕುರಿಮರಿಗಳನ್ನು ಪೊಲೀಸ್, ಕಂದಾಯ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ₹12.90 ಲಕ್ಷಕ್ಕೆ ಹರಾಜು ಹಾಕಲಾಗಿದೆ.

ಜಾತ್ರೆಗೆ ಮುಂಚೆಯೆ ಬಿಡ್‌ ಮಾಡಲಾಗಿತ್ತು. ಮೂವರು ಬಿಡ್‌ದಾರರು ಕುರಿಮರಿಗಳನ್ನು ಖರೀದಿಸಿದ್ದಾರೆ ಎಂದು ಪಶುವೈದ್ಯ ಸೇವೆಗಳ ಉಪನಿರ್ದೇಶಕ ಡಾ.ಶರಣಭೂಪಾಲರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂವರು ಬಿಡ್‌ದಾರರು ಕ್ರಮವಾಗಿ 300, 500, 200 ಕುರಿಮರಿಗಳನ್ನು ಹರಾಜಿನಲ್ಲಿ ಪಡೆದಿದ್ದಾರೆ. 300 ಕುರಿಮರಿ ಖರೀದಿಸಿದವರು ₹1,503, 500 ಕುರಿಮರಿ ಖರೀದಿಸಿದವರು ₹1,475, 200 ಕುರಿಮರಿ ಖರೀದಿಸಿದವರು ₹1,357 ರೂ.ನಂತೆ ಹರಾಜಿನಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)