ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್: 197 ರಾಷ್ಟ್ರಗಳ ಧ್ವಜ ಗುರುತಿಸುವ 6 ವರ್ಷದ ಬಾಲಕ

Last Updated 13 ಸೆಪ್ಟೆಂಬರ್ 2020, 16:21 IST
ಅಕ್ಷರ ಗಾತ್ರ

ಗುರುಮಠಕಲ್: ಧ್ವಜವನ್ನು ತೋರಿಸುತ್ತಿದ್ದಂತೆ ಅದು ಯಾವ ದೇಶದ ರಾಷ್ಟ್ರಧ್ವಜ ಎಂದು ಹೇಳುವ 6 ವರ್ಷ ವಯಸ್ಸಿನ ವಿದ್ಯಾರ್ಥಿ 2 ನಿಮಿಷ 5 ಸೆಕೆಂಡುಗಳಲ್ಲಿ 197 ರಾಷ್ಟ್ರಧ್ವಜಗಳನ್ನು ಗುರುತಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಈಚೆಗೆಪಟ್ಟಣದ ಶ್ರೀಲಕ್ಷ್ಮೀ ತಿಮ್ಮಪ್ಪ ಶಿಕ್ಷಣ ಸಂಸ್ಥೆಯಲ್ಲಿ ಒಂದನೇ ತರಗತಿ ವಿದ್ಯಾರ್ಥಿ ಲಕ್ಷ್ಮಿ ತಿಮ್ಮಪ್ಪ ರಾಠೋಡ್ 197 ದೇಶಗಳ ರಾಷ್ಟ್ರಧ್ವಜಗಳನ್ನು ಗುರುತಿಸಿ ಅವು ಯಾವ ದೇಶಕ್ಕೆ ಸಂಬಂಧಿಸಿದ್ದೆಂದು ಹೇಳುವ ಮೂಲಕ ಪ್ರತಿಭೆ ತೋರಿದ.

‘ಮಗುವಿನ ಪ್ರತಿಭೆ ಗುರುತಿಸಿದ ಶಾಲೆಯ ಶಿಕ್ಷಕಿ ವಿಜಯಲಕ್ಷ್ಮಿ ಅವರು ಮಗುವಿನ ಆಸಕ್ತಿಗೆ ಪೂರಕವಾಗುವಂತೆ ಅವಶ್ಯಕವಾದ ವ್ಯವಸ್ಥೆ ಕಲ್ಪಿಸಿದ್ದಾರೆ. ಇದರ ಪರಿಣಾಮದಿಂದ ಇಂದು ವಿದ್ಯಾರ್ಥಿ ಎರಡು ನಿಮಿಷಗಳಲ್ಲಿ ಇಷ್ಟೊಂದು ದೇಶಗಳ ರಾಷ್ಟ್ರಧ್ವಜಗಳನ್ನು ಗುರುತಿಸುವಂತಾಗಿದೆ’ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರ ರಾಠೋಡ್ ತಿಳಿಸಿದರು.

ಈ ಮೊದಲು ಇದೇ ಶಾಲೆಯ ಸಾಯಿ ಅಖಿರಾ ಎನ್ನುವ ವಿದ್ಯಾರ್ಥಿನಿಯ ಸಾಧನೆಗೆ ಏಶಿಯನ್ ಬುಕ್ ಆಫ್ ರೆಕಾರ್ಡ್ಸ್ ಪುರಸ್ಕಾರ ಸಿಕ್ಕಿರುವುದನ್ನು ನೆನಪಿಸಿದ ಅವರು ಶಿಕ್ಷಕಿ ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಿದರು.

ಶಿಕ್ಷಣ ಸಂಯೋಜಕ ಶಿವರಾಜ ಸಾಕ, ಸಿಆರ್‌ಸಿ ನಾರಾಯಣರೆಡ್ಡಿ ಪಾಟೀಲ್, ಸಂಸ್ಥೆಯ ಆಡಳಿತಾಧಿಕಾರಿ ವೆಂಕಟ ಚೌವಾಣ, ಪ್ರಾಂಶುಪಾಲ ಚೆನ್ನರಾಜು, ವೆಂಕಟಪ್ಪ ಕಾಕಲವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT