ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಶಾಲಾ–ಕಾಲೇಜು ಆರಂಭಕ್ಕೆ ಕ್ಷಣಗಣನೆ

ಸೌಲಭ್ಯಗಳ ಕೊರತೆ ಮಧ್ಯೆಯೂ ಆರಂಭ, 39,800 ವಿದ್ಯಾರ್ಥಿಗಳು
Last Updated 22 ಆಗಸ್ಟ್ 2021, 14:55 IST
ಅಕ್ಷರ ಗಾತ್ರ

ಯಾದಗಿರಿ: ಶಾಲಾ ಮೈದಾನ, ಆವರಣ ಗೋಡೆ ಸೇರಿದಂತೆ ವಿವಿಧ ಸೌಲಭ್ಯಗಳ ಕೊರತೆ ಮಧ್ಯೆಯೂ ಆಗಸ್ಟ್‌ 23 (ಸೋಮವಾರ) ರಿಂದ 9, 10 ಮತ್ತು ಪಿಯು ಕಾಲೇಜುಗಳು ಆರಂಭವಾಗಲಿವೆ.

ಜಿಲ್ಲೆಯಲ್ಲಿ 122 ಸರ್ಕಾರಿ ಪ್ರೌಢಶಾಲೆಗಳಿದ್ದು, 98 ಕಡೆ ಆಟದ ಮೈದಾನ, 108 ಶಾಲೆಗಳಲ್ಲಿ ಆವರಣ ಗೋಡೆ ಇಲ್ಲ.

ಶಹಾಪುರ ತಾಲ್ಲೂಕಿನಲ್ಲಿ 38, ಸುರಪುರ ತಾಲ್ಲೂಕಿನಲ್ಲಿ 45, ಯಾದಗಿರಿ ತಾಲ್ಲೂಕಿನಲ್ಲಿ 39 ಸರ್ಕಾರಿ ಪ್ರೌಢಶಾಲೆಗಳಿವೆ. ಶಹಾಪುರ ತಾಲ್ಲೂಕಿನ ನಗರದ ಪ್ರದೇಶದಲ್ಲಿ 5, 33 ಗ್ರಾಮಾಂತರ, ಸುರಪುರ ತಾಲ್ಲೂಕಿನ ನಗರ ಪ್ರದೇಶದಲ್ಲಿ 9, ಗ್ರಾಮಾಂತರದಲ್ಲಿ 36, ಯಾದಗಿರಿ ನಗರದಲ್ಲಿ 9, ಗ್ರಾಮಾಂತರದಲ್ಲಿ 30 ಸರ್ಕಾರಿ ಪ್ರೌಢಶಾಲೆಗಳಿವೆ. ಒಟ್ಟಾರೆ 23 ನಗರ, 99 ಗ್ರಾಮಾಂತರದಲ್ಲಿ ಶಾಲೆಗಳಿವೆ.

ಬಾಲಕ, ಬಾಲಕಿಯರಿಗೆ ಎಲ್ಲ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಎಲ್ಲ ಕಡೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ.

‘ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಆಗಮನಕ್ಕಾಗಿ ಸಕಲ ಸಿದ್ಧತೆ ನಡೆಸಿಕೊಂಡಿದೆ. ಕಳೆದ ನಾಲ್ಕು ತಿಂಗಳಿಂದ ಶಾಲೆಯನ್ನು ಬಂದ್‌ ಮಾಡಲಾಗಿದೆ. ಈ ಮೊದಲು ವಿದ್ಯಾಗಮ ಮಾಡಲಾಗುತ್ತಿತ್ತು. ವಾರದಿಂದ ಸ್ವಚ್ಛತೆ ಕೈಗೊಳ್ಳಲಾಗಿದೆ. ಸ್ಯಾನಿಟೈಸ್‌ ಸಿಂಪರಣೆ ಮಾಡಲಾಗುತ್ತಿದೆ. ಒಂದು ಕೋಣೆಯಲ್ಲಿ 20 ವಿದ್ಯಾರ್ಥಿಗಳಿಗೆ ನಿಗದಿ ಮಾಡಲಾಗಿದೆ. ಕೇವಲ ಅರ್ಧ ದಿನ ಮಾತ್ರ ತರಗತಿಗಳು ನಡೆಯಲಿವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ತಿಳಿಸುತ್ತಾರೆ.

‘ಈಗಾಗಲೇ ಶಾಲಾ ಮಾದರಿ ಪಟ್ಟಿ ಮಾಡಿಕೊಳ್ಳಲಾಗಿದೆ. ಶಾಲಾ ಆರಂಭವಾದ ತಕ್ಷಣ ಪಠ್ಯಕ್ರಮಕ್ಕೆ ಹೋಗುವುದಿಲ್ಲ. ಮೊದಲಿಗೆ ವಿದ್ಯಾರ್ಥಿಗಳಿಗೆ ಆಸಕ್ತಿಗೆ ಅನುಗುಣವಾಗಿ ಪಠ್ಯೇತರ ಚಟುವಟಿಕೆ ನಂತರ ಪಠ್ಯಕ್ಕೆ ತೆರಳಲಾಗುವುದು. ಮುಖ್ಯಶಿಕ್ಷಕರಿಗೆ, ಸಹಶಿಕ್ಷಕರಿಗೆ ಈಗಾಗಲೇ ವೆಬಿನಾರ್‌ ಮೂಲಕ ತರಬೇತಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

***

ಜಿಲ್ಲೆಯಲ್ಲಿ 92 ಪಿಯು ಕಾಲೇಜು
ಜಿಲ್ಲೆಯಲ್ಲಿ 92 ಪದವಿ ಪೂರ್ವ ಕಾಲೇಜುಗಳಿದ್ದು, ಸೋಮವಾರ 89 ಕಾಲೇಜುಗಳು ಮಾತ್ರ ಆರಂಭವಾಗಲಿವೆ. ಒಟ್ಟಾರೆ ಜಿಲ್ಲೆಯಲ್ಲಿ 95 ಕಾಲೇಜುಗಳಿವೆ. ಇದರಲ್ಲಿ 92 ಮಾತ್ರ ಕಾರ್ಯನಿರ್ವಹಿಸುತ್ತವೆ.

ಯಾದಗಿರಿ, ಶಹಾಪುರ, ಸುರಪುರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯು ಪರೀಕ್ಷೆ ನಡೆಯುತ್ತಿರುವುದರಿಂದ ಸೆಪ್ಟೆಂಬರ್ 3ರ ವರೆಗೆ ಈ ಕಾಲೇಜುಗಳು ಆರಂಭಿಸುವುದಿಲ್ಲ. ಆ ನಂತರ ಇವು ಆರಂಭಗೊಳ್ಳಲಿವೆ.

ಯಾದಗಿರಿ ನಗರ ಸೇರಿದಂತೆ ತಾಲ್ಲೂಕಿನಲ್ಲಿ 32 ಸರ್ಕಾರಿ, ಖಾಸಗಿ ಕಾಲೇಜುಗಳಿವೆ. ಶಹಾಪುರ ತಾಲ್ಲೂಕಿನಲ್ಲಿ 28, ಸುರಪುರ ತಾಲ್ಲೂಕಿನಲ್ಲಿ 22, ಗುರುಮಠಕಲ್‌ ತಾಲ್ಲೂಕಿನಲ್ಲಿ 7, ಹುಣಸಗಿ ತಾಲ್ಲೂಕಿನಲ್ಲಿ 3, ವಡಗೇರಾ ತಾಲ್ಲೂಕಿನಲ್ಲಿ 3 ಸರ್ಕಾರಿ, ಖಾಸಗಿ ಕಾಲೇಜುಗಳಿವೆ.

***

ಹಲವಾರು ದಿನಗಳಿಂದ ಶಾಲೆ ಮುಖ ನೋಡದೇ ಬೇಸರವಾಗಿದ್ದು, ಸೋಮವಾರದಿಂದ ಶಾಲೆಗೆ ತೆರಳಲು ಸಂತೋಷವಾಗುತ್ತಿದೆ
ಕಾಂತೇಶ ಸಾಬಣ್ಣ, 10ನೇ ತರಗತಿ ವಿದ್ಯಾರ್ಥಿ

***

ಆನ್‌ಲೈನ್‌ ತಗಗತಿಗಿಂತ ಆಫ್‌ಲೈನ್‌ ಕ್ಲಾಸ್‌ ಚೆನ್ನಾಗಿದೆ. ಹೀಗಾಗಿ ಶಾಲೆಗೆ ತೆರಳಲು ಹಾತೊರೆಯುತ್ತಿದ್ದೇನೆ. ಶಿಕ್ಷಕರು, ಸ್ನೇಹಿತೆಯರನ್ನು ಭೇಟಿಯಾಗಬಹುದು

ಶ್ವೇತಾ ಕುಂಬಾರ, 9ನೇ ತಗರತಿ ವಿದ್ಯಾರ್ಥಿನಿ

***

ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಶಿಫ್ಟ್‌ ಪ್ರಕಾರ ಮಾಡಕಾಗುತ್ತಿದೆ. ವಿದ್ಯಾರ್ಥಿಗಳ ಹಾಜರಾತಿ ಮೇಲೆ ಇದು ಅವಲಂಬಿತವಾಗಿದೆ
ಚಂದ್ರಕಾಂತ ಜೆ ಹಿಳ್ಳಿ, ಡಿಡಿಪಿಯು

***

ಮಾಸ್ಕ್‌ ಕಡ್ಡಾಯವಾಗಿ ಧರಿಸಿಕೊಂಡು ಶಾಲೆಗೆ ಬರಬೇಕು. ಕೊರೊನಾ ನಿಯಮಗಳನ್ನು ಪಾಲಿಸಬೇಕು. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಿ
ಶಾಂತಗೌಡ ಪಾಟೀಲ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT