ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್ತರ ಏಳಿಗೆಗೆ ಪ್ರಾಮಾಣಿಕ ಯತ್ನ: ವಿಜಯಕುಮಾರ ಯೇಸುದಾಸ ಬೇನಕನಹಳ್ಳಿ

Last Updated 30 ಅಕ್ಟೋಬರ್ 2020, 15:46 IST
ಅಕ್ಷರ ಗಾತ್ರ

ಯಾದಗಿರಿ: ‘ಕ್ರೈಸ್ತ ಸಮುದಾಯವು ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಅಖಿಲ ಭಾರತ ಕ್ರೈಸ್ತ ಮಹಾಸಭಾದ ಜಿಲ್ಲಾ ಘಟಕ ಅಧ್ಯಕ್ಷಸಹೋ.ವಿಜಯಕುಮಾರ ಯೇಸುದಾಸ ಬೇನಕನಹಳ್ಳಿ ಹೇಳಿದರು.

ನಗರದ ಹೊಸಳ್ಳಿ ಕ್ರಾಸ್‍ನ ವಕೀಲ ಭೀಮರಾಯ ಕಿಲ್ಲನಕೇರಾ ಕಚೇರಿಯಲ್ಲಿ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಕ್ರೈಸ್ತ ಸಮುದಾಯವು ಅಲ್ಪಸಂಖ್ಯಾತವಾಗಿದ್ದರೂ ಆ ಇಲಾಖೆಯಲ್ಲಿನ ಸೌಲಭ್ಯಗಳು ಕ್ರೈಸ್ತ ಸಮುದಾಯಕ್ಕೆ ತಲುಪುತ್ತಿಲ್ಲ. ಸಮಾಜದವರುಸರ್ಕಾರಿ ಸೌಲಭ್ಯಗಳ ಬಗ್ಗೆ ಜಾಗೃತಿಪಡೆದು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ಹಿರಿಯ ಮುಖಂಡ ಮಲ್ಲಣ್ಣ ದಾಸನಕೇರಿ ಮಾತನಾಡಿದರು.

ಈ ವೇಳೆ ವಕೀಲ ಭೀಮರಾಯ ಕಿಲ್ಲನಕೇರಾ, ಗೋಪಾಲ ದಾಸನಕೇರಿ, ಗೆಳೆಯರ ಬಳಗದ ಶರಣಪ್ಪ ಮುಷ್ಟೂರ, ಡಾ.ಮಹಾದೇವಪ್ಪ ದದ್ದಲ್, ಅಯ್ಯಣ್ಣ ಗೌಡಿಗೇರಾ, ಹಣಮಂತ ಲಿಂಗೇರಿ, ತಿಪ್ಪಯ್ಯ ಬೇಳಗೇರಾ, ಸಿದ್ದಲಿಂಗಪ್ಪ, ಸಿಮಿಯೋನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT