ಶುಕ್ರವಾರ, ನವೆಂಬರ್ 15, 2019
27 °C

ಕೃಷಿಯೆಡೆಗೆ ಕಾಲುನಡಿಗೆ ಕಾರ್ಯಕ್ರಮ

Published:
Updated:
Prajavani

ಯಾದಗಿರಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಇಡ್ಲೂರು ಸರ್ಕಾರಿ ಪ್ರೌಢಶಾಲೆಯ ವತಿಯಿಂದ ‘ಕೃಷಿಯೆಡೆಗೆ ಕಾಲುನಡಿಗೆ’ ಕಾರ್ಯಕ್ರಮ ಗುರುಮಠಕಲ್ ತಾಲ್ಲೂಕಿನ ಇಡ್ಲೂರು ಗ್ರಾಮದಲ್ಲಿ ನಡೆಯಿತು.

ಶಾಲೆಯ ಮುಖ್ಯ ಶಿಕ್ಷಕ ದೇವಪ್ಪ ಕೆ.ಎನ್.ಅಧ್ಯಕ್ಷತೆ ವಹಿಸಿದ್ದರು. 

ಗೈಡ್ಸ್ ಜಿಲ್ಲಾ ಸಂಘಟಕಿ ನಾಗರತ್ನ ಪಾಟೀಲ, ಸ್ಕೌಟ್ಸ್ ತಾಲ್ಲೂಕು ಕಾರ್ಯದರ್ಶಿ ಬಸರೆಡ್ಡಿ ಪಾಟೀಲ ಮಾತನಾಡಿ ಕೃಷಿ ಕುರಿತು ಮಕ್ಕಳಿಗೆ ವಿವರಿಸಿದರು.

ಸ್ಕೌಟ್ಸ್ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಅಳ್ಳಳ್ಳಿ, ಎಪಿಎಂಸಿ ಸದಸ್ಯ ಹಣಮಂತ ಅಲಂ ಸ್ಕೌಟ್ಸ್ ರಾಜ್ಯ ಪ್ರತಿನಿಧಿ ಮಲ್ಲಿಕಾರ್ಜುನ ಬಳೆ, ಗೈಡ್ಸ್ ಮಾಸ್ಟರ್ ಹಾಗೂ ದೈಹಿಕ ಶಿಕ್ಷಕಿ ಶಂಕ್ರಮ್ಮ ಇದ್ದರು. ‌

ಸಹ ಶಿಕ್ಷಕಿ ಉಭಯ ಭಾರತಿ ಸ್ವಾಗತಿಸಿದರು. ಬಸವಲಿಂಗಪ್ಪ ಕೂಡ್ಲೂರು ನಿರೂಪಿಸಿದರು.

ಹೊಲಕ್ಕೆ ಭೇಟಿ: ಕಾರ್ಯಕ್ರಮದ ಅಂಗವಾಗಿ ಗ್ರಾಮದ ಈರಣ್ಣ ಸಜ್ಜನ್ ಅವರ ಹತ್ತಿ ಹೊಲಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಕರೆದೊಯ್ದು ಹತ್ತಿ ಬಿಡಿಸುವ ಮೂಲಕ ಹೊಲದಲ್ಲಿ ಶ್ರಮದಾನ ಮಾಡಿಸಿ ವಿದ್ಯಾರ್ಥಿಗಳಿಗೆ ಕೃಷಿ ಮಹತ್ವ ತಿಳಿಸಿ ಕೊಡಲಾಯಿತು.

 

ಪ್ರತಿಕ್ರಿಯಿಸಿ (+)