ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಎಪಿ ಕಿಂಗ್ ಮೇಕರ್ ಆಗಲಿದೆ’

Last Updated 24 ಸೆಪ್ಟೆಂಬರ್ 2022, 5:34 IST
ಅಕ್ಷರ ಗಾತ್ರ

ಸುರಪುರ: ‘ರಾಜ್ಯದಲ್ಲಿ ಇದುವರೆಗೆ ಆಡಳಿತ ನಡೆಸಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದ್ದು ನಮ್ಮ ಪಕ್ಷ ಕಿಂಗ್ ಮೇಕರ್ ಪಾತ್ರ ವಹಿಸಲಿದೆ’ ಎಸ್ಸಿ ಎಸ್ಟಿ ಜಾಗೃತ ಸಮಿತಿಯ ಸದಸ್ಯ ಎಂ. ಅರವಿಂದ ಮಗ್ದೂರ ಹೇಳಿದರು.

ಇಲ್ಲಿಯ ಟೇಲರ್ ಮಂಜಿಲ್‍ನಲ್ಲಿ ಶುಕ್ರವಾರ ನಡೆದ ಆಮ್‌ ಆದ್ಮಿ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು.

ಬೇರೆ ಪಕ್ಷಗಳನ್ನು ದೂಷಿಸದೆ ನಮ್ಮ ಪಕ್ಷದ ತತ್ವ ಸಿದ್ಧಾಂತ ಮತ್ತು ಕೇಜ್ರಿವಾಲರ ಜನಪರ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಜನರಿಗೆ ಆಮ್ ಪಕ್ಷದ ಆಡಳಿತ ಬೇಕಾಗಿದೆ ಈ ಬಗ್ಗೆ ಮತದಾರರಲ್ಲಿ ಸಕಾರಾತ್ಮಕ ಭಾವನೆ ಇದೆ. ಅದನ್ನು ಸದುಪಯೋಗಪಡಿಸಿಕೊಂಡು ಜನರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಸಂಯೋಜಕ ರಾಜಾ ಪಿಡ್ಡನಾಯಕ ಮಾತನಾಡಿ, ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಸ್ವಚ್ಛ ಮತ್ತು ಸುಭದ್ರ ಆಡಳಿತ ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯ ಎಂದರು.

ಕ್ಷೇತ್ರದ ಸಂಯೋಜಕ ವೆಂಕಟೇಶ ಭಕ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಭಾಸ್ ತೇಲ್ಕರ್, ಮುಖಂಡರಾದ ಅಯ್ಯಣ್ಣಸ್ವಾಮಿ, ಮರಗಪ್ಪ ಸಾಲಿಕೇರಿ, ಶ್ರೀಶೈಲ ಮುಡಬೋಳ, ಶ್ರೀಕಾಂತ ಕುಂಬಾರ, ಶರಣಪ್ಪ ದೊರೆ, ವಿಶ್ವನಾಥ ಕೆಂಭಾವಿ, ಶ್ರೀನಿಧಿ, ಭಾವನಾ, ಸಿದ್ದಮ್ಮ, ಶ್ರೀದೇವಿ ಅಗ್ನಿ, ಮಹಿಬೂಬ್ ಖಾನಸಾಬ್, ಜಾಕೀರ್ ಹುಸೇನ್, ಹಯಾತ್‍ಸಾಬ್, ವಿರೇಶ ಕುಮಾರ, ಸಿದ್ದಯ್ಯಸ್ವಾಮಿ, ಅಯ್ಯೂಬ್‍ಖಾನ್, ರವಿಕುಮಾರ, ಮೌನೇಶ್ ಧರಿಯಾಪುರ, ಪರಶುರಾಮ ಗಡ್ಡ, ಶರಣಪ್ಪ ಕುಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT