ಮಹಿಳೆಯರಿಂದ ಲಂಚ ಪಡೆಯುತ್ತಿದ್ದ ಆರೋಪ ಸರ್ಕಾರಿ ಅಭಿಯೋಜಕ ಎಸಿಬಿ ವಶಕ್ಕೆ

ಗುರುವಾರ , ಜೂಲೈ 18, 2019
29 °C

ಮಹಿಳೆಯರಿಂದ ಲಂಚ ಪಡೆಯುತ್ತಿದ್ದ ಆರೋಪ ಸರ್ಕಾರಿ ಅಭಿಯೋಜಕ ಎಸಿಬಿ ವಶಕ್ಕೆ

Published:
Updated:
Prajavani

ಯಾದಗಿರಿ: ನಗರದ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದಲ್ಲಿ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ₹ 5 ಸಾವಿರ ಲಂಚ ಪಡೆಯುವಾಗ ಸರ್ಕಾರಿ ಅಭಿಯೋಜಕ ಕೆ.ಗೋಪಾಲರಾವ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕಿನ ಅಬ್ಬೆತುಮಕೂರ ಗ್ರಾಮದ ವಿಶಾಲಾಕ್ಷಿ ಅವರಿಂದ ₹ 5 ಸಾವಿರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.

ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪರ ವಕಾಲತ್ತು ಮಾಡಲು ವಿಶಾಲಾಕ್ಷಿ ಅವರಿಗೆ  ₹50 ಸಾವಿರ ಬೇಡಿಕೆ ಇಟ್ಟಿದ್ದರು. ಹಣ ಪಡೆಯುತ್ತಿದ್ದ ದಾಳಿ ನಡೆಸಲಾಯಿತು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.  

ಎಸಿಬಿ ಡಿವೈಎಸ್‌ಪಿ ಚಂದ್ರಶೇಖರ ‍ಪೂಜಾರಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಪಂಚನಾಮೆ ಬಳಿಕ ಜಿಲ್ಲಾ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೋಪಾಲರಾವ್ ಈ ಮೊದಲು ಸಹಾಯಕ ಸರ್ಕಾರಿ ಅಭಿಯೋಜಕರಾಗಿದ್ದು, ಈಚೆಗೆ ಬಡ್ತಿ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !