ಮಂಗಳವಾರ, ಫೆಬ್ರವರಿ 7, 2023
27 °C
ವಿವಿಧೆಡೆ ಬುದ್ಧ ಪೂರ್ಣಿಮೆ ಆಚರಣೆ, ಶಾಂತಿ ಮಂತ್ರ ಪಠಣ

ಬುದ್ಧನ ಪಂಚಶೀಲ ತತ್ವ ಅಳವಡಿಸಿಕೊಳ್ಳಿ:

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ಡಾ. ಅಂಬೇಡ್ಕರ್‌ ಭವನದಲ್ಲಿ ಗುರುವಾರ ಬುದ್ಧಪೂರ್ಣಿಮೆ ಆಚರಿಸಲಾಯಿತು.

‌ಶಹಾಪುರದ ಸಾರಿಪುತ್ರ ಬುದ್ಧವಿಹಾರ ಧಮ್ಮಗಿರಿ ಮತ್ತಾನಂದಾ ಭಂತೇಜಿ, ಕರುಣಾನಂದ ಭಂತೇಜಿ ತ್ರಿಸರಣ ಪಂಚಶೀಲ ತತ್ವ ಬೋಧಿಸಿದರು.

‘ಬುದ್ಧನ ಪಂಚಶೀಲ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಶಾಂತಿ ಸ್ಥಾಪನೆ ಮಾಡಿದ ಧರ್ಮ ಬುದ್ಧನ ಧರ್ಮ. ಭಾರತದಲ್ಲಿ ಬುದ್ಧ ಧರ್ಮ ಹುಟ್ಟಿದರೂ ಪ್ರಚಾರ ಇಲ್ಲದಿದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಅನುಯಾಯಿಗಳಿದ್ದಾರೆ. ಅಲ್ಲದೆ ಸುಖಕರ ಜೀವನಕ್ಕೆ ಅಷ್ಟಾಂಗ ಮಾರ್ಗ ಅಳವಡಿಕೊಳ್ಳಬೇಕು. ಆಸೆಯೇ ದುಃಖಕ್ಕೆ ಮೂಲ ಎಂದು ಅಂದೇ ಹೇಳಿದ್ದಾರೆ. ಅವುಗಳನ್ನು ಪಾಲಿಸೋಣ’ ಎಂದರು.

ಈ ವೇಳೆ ನಗರಸಭೆ ಮಾಜಿ ಸದಸ್ಯ ಮರೆಪ್ಪ ಚಟ್ಟೆರಕರ್, ಮಹೆಶ್ ಕುರುಕುಂಬಳ, ಡಾ.ಭಗವಂತ ಅನವಾರ, ಮಲ್ಲಿಕಾರ್ಜುನ ಈಟಿ, ಗೋಪಾಲ ತೆಳಿಗೇರಿ, ನಿಂಗಪ್ಪ ಕೊಲ್ಲೂರು, ಸುರೇಶ್ ಬೊಮ್ಮುನ್, ನರೇಂದ್ರ ಅನವಾರ್, ನಿಂಗಪ್ಪ ಬೀರನಾಳ, ಚಂದ್ರಕಾಂತ ಚಲವಾದಿ, ಶ್ರೀಕಾಂತ್ ಸುಂಗಲ್ಕರ್, ಮಲ್ಲಿಕಾರ್ಜುನ ಈಟಿ, ವಿ.ಎ.ಸಂಪತ್ ಚಿನ್ನಾಕರ್, ಮಲ್ಲು ಬೊಮ್ಮನ್, ಮಾರುತಿ ಈಟಿ, ಬಸಲಿಂಗಪ್ಪ ಕುರುಕುಂಬಳ ಭಾಗವಹಿಸಿದ್ದರು.

ಸರಳ ಬುದ್ಧ ಜಯಂತಿ

ಯಾದಗಿರಿ: ಇಲ್ಲಿನ ವಕೀಲ ಎಸ್.ಪಿ.ನಾಡೇಕರ್ ಅವರ ಮನೆಯಲ್ಲಿ ಭಗವಾನ್ ಗೌತಮ ಬುದ್ಧರ 2,582ನೇ ಜಯಂತಿಯನ್ನು ಮನೆಯಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.

‘ಇಡೀ ವಿಶ್ವಕ್ಕೆ ಶಾಂತಿಯನ್ನು ಬಯಸಿ ಪರೋಪಕಾರಿ ಜೀವನದಲ್ಲಿ ನೆಮ್ಮದಿ ಇದೆ. ಆಸೆಯೇ ದುಃಖಕ್ಕೆ ಕಾರಣ ಎಂಬ ಮಹತ್ವದ ನುಡಿಯಿಂದ ಅವರು ಜಗತ್ತಿಗೆ ತಿಳಿ ಹೇಳಿದರು’ ಎಂದು ಅಭಿಪ್ರಾಯಪಟ್ಟರು.

‘ಮನುಷ್ಯರು ಎಲ್ಲರೂ ಸಮಾನರು. ನಾವುಗಳು ಅವರ ತತ್ವ ಸಿದ್ಧಾಂತಗಳನ್ನು ಅರಿಯಬೇಕಾಗಿದೆ. ಮೇಲು–ಕೀಳು ಎಂಬ ಭಾವನೆ ಯಾರ ಹತ್ತಿರ ಸಹ ಇರಬಾರದು ಎಂದು ವಿಶ್ವಕ್ಕೆ ಶಾಂತಿ ಬಯಸಿದ್ದರು. ನಮಗೆ ಯುದ್ಧ ಬೇಡ; ಬುದ್ಧ ಬೇಕು. ನಮ್ಮ ನಡೆ ಬುದ್ಧನ ಕಡೆ’ ಎಂದರು.

ಈ ವೇಳೆ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು