ಹುಣಸಗಿ: ‘ನಮ್ಮಲ್ಲಿನ ಮಹತ್ವದ ವಿಚಾರಗಳಿಗೆ ನಿಶ್ಚಿತವಾದ ಗುರಿಗಳಿಗೆ ಮೂರ್ತ ರೂಪ ಕೊಟ್ಟಾಗ ಮಾತ್ರ, ಅದು ದೊಡ್ಡ ಶಕ್ತಿಯಾಗಿ ಸಫಲತೆ ಪಡೆಯುತ್ತದೆ’ ಎಂದು ಸುರಪುರದ ಡಿವೈಎಸ್ಪಿ ಡಾ. ದೇವರಾಜ ಹೇಳಿದರು.

ಹುಣಸಗಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತ ಜಗತ್ತಿನಲ್ಲಿ ಅತಿಹೆಚ್ಚಿನ ಯುವಕರನ್ನು ಹೊಂದಿದೆ. ವಿದ್ಯಾರ್ಥಿ ಗಳು ಆತ್ಮವಿಶ್ವಾಸದಿಂದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ವಿಶ್ವ ಗುರು ಎಂಬ ಕಲ್ಪನೆ, ಭ್ರಾತೃತ್ವದ ಸಂದೇಶದೊಂದಿಗೆ ಭಾರತವನ್ನು ಉತ್ತುಂಗಕ್ಕೆ ಏರಿಸಿದ್ದರು. ಇಂದಿಗೂ ದೇಶದ ಸಮಗ್ರತೆ, ನಾಡಿನ ನೆಲ, ಜಲ, ಜನೋಪಯೋಗಿಯ ಹೊಸ ಆವಿಷ್ಕಾರಗಳನ್ನು ದೇಶಕ್ಕೆ ಸಮರ್ಪಿಸುವ ಕಾರ್ಯದಲ್ಲಿ ಯುವಕರ ಪಾತ್ರ ಹಿರಿದಾಗಿದೆ ಎಂದರು.

ಡಾ.ವೀರಭದ್ರಗೌಡ ಹೊಸಮನಿ ಅವರು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ವಿಚಾರಗಳ ಕುರಿತು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.