ಅಳವಂಡಿ: ‘ಭಕ್ತಿಯಿಂದ ಶಿವನನ್ನು ಒಲಿಸಿಕೊಂಡ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸಾರದ ಸಾರವನ್ನು ಜಗತ್ತಿಗೆ ಸಾರಿದ ಆದರ್ಶ ಮಹಿಳೆ. ಸ್ತ್ರೀ ಕುಲಕ್ಕೆ ಮಲ್ಲಮ್ಮ ಮಾದರಿಯಾಗಿದ್ದಾರೆ’ ಎಂದು ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವೆಂಕರಡ್ಡಿ ಕಲಾದಗಿ ಹೇಳಿದರು.
ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ದಿ ಸೇವಾ ಸಮಿತಿ ಏರ್ಪಡಿಸಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಭಾನುವಾರ ನಡೆದ ಮಲ್ಲಮ್ಮ-ವೇಮನ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಕಲ ವಾದ್ಯ, ಕುಂಭ–ಕಳಸಗಳೊಂದಿಗೆ ಸರ್ವಾಲಂಕೃತಗೊಂಡ ಟ್ಯಾಕ್ಟರ್‌ನಲ್ಲಿ ಶ್ರೀಮಾರುತೇಶ್ವರ ದೇವಸ್ಥಾನದವರೆಗೆ ಭಾವಚಿತ್ರಗಳ ಮೆರವಣಿಗೆ ನಡೆಯಿತು. ಬಳಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ವೆಂಕರಡ್ಡಿ ಇಮ್ಮಡಿ ಮಾತನಾಡಿದರು.
ಪ್ರಮುಖರಾದ ಸುರೇಶ ದಾಸರಡ್ಡಿ, ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ಪ್ರದೀಪಗೌಡ, ಬಸವರಡ್ಡೆಪ್ಪ ಹಳ್ಳಿಕೇರಿ, ಈಶಪ್ಪ ಗದ್ದಿಕೇರಿ, ಸುನಂದ ಗದ್ದಿಕೇರಿ, ಪ್ರತಿಭಾ ಮೇಟಿ, ಚನ್ನಪ್ಪ ಮುತ್ತಾಳ, ಸೋಮಣ್ಣ, ರಾಘು ಗದ್ದಿಕೇರಿ, ಸಂಜೀವ, ಗವಿ, ತಿಮ್ಮರಡ್ಡಿ, ವಿರುಪಾಕ್ಷಿ, ಗೂಳರಡ್ಡಿ, ಸುರೇಶ, ಗೋವಿಂದರಡ್ಡಿ, ಪ್ರಭು, ಉಮೇಶಗೌಡ, ರುದ್ರಗೌಡ, ಮಂಜುನಾಥಗೌಡ, ವಸಂತ, ಚಿಕ್ಕವೀರಪ್ಪ, ಅಶೋಕ, ಪ್ರಕಾಶರಡ್ಡಿ, ದೇವಪ್ಪ ಕಟ್ಟಿಮನಿ, ಅಂದಪ್ಪ, ಹನುಮರಡ್ಡಿ, ಶೇಷರಡ್ಡಿ, ವೆಂಕರಡ್ಡಿ, ಯಲ್ಲರಡ್ಡಿ, ರಮೇಶ, ಆನಂದರಡ್ಡಿ, ಚಂದ್ರಪ್ಪ, ದೇವರಡ್ಡಿ, ಕುಬೇರಪ್ಪ, ನಿಂಗರಡ್ಡಿ, ಪರಪ್ಪ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.